10:44 AM Saturday 23 - August 2025

ಗ್ರಾಹಕರಿಗೆ ಬಿಗ್ ಶಾಕ್: ಎಲ್​ ಪಿಜಿ ಸಿಲಿಂಡರ್​ ಬೆಲೆಯಲ್ಲಿ 250 ರೂಪಾಯಿ ಏರಿಕೆ

lpg
01/04/2022

ನವದೆಹಲಿ: ದೇಶದ ಜನರಿಗೆ ಬೆಲೆ ಏರಿಕೆ ಬಿಸಿ ಮತ್ತೊಮ್ಮೆ ತಟ್ಟಿದ್ದು, ಇಂದು ವಾಣಿಜ್ಯ ಬಳಕೆಯ ಎಲ್​ ಪಿಜಿ ಸಿಲಿಂಡರ್​ ಬೆಲೆಯಲ್ಲಿ 250 ರೂಪಾಯಿ ಏರಿಕೆಯಾಗುವ ಮೂಲಕ  ಗ್ರಾಹಕರಿಗೆ ದೊಡ್ಡ ಮಟ್ಟದ ಶಾಕ್ ನೀಡಿದೆ.

ರಾಷ್ಟ್ರ ರಾಜಧಾನಿಯಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್​ ಬೆಲೆ 2,253 ರೂಪಾಯಿಗೆ ಏರಿಕೆಯಾಗಿದೆ. ಮಾರ್ಚ್​ 22ರಂದು ಏರಿಕೆಯಾದ ಗೃಹ ಬಳಕೆಯ ಎಲ್ ​ಪಿಜಿ ದರದಲ್ಲಿ ಮತ್ತೆ ಯಾವುದು ಬದಲಾವಣೆಯಾಗಿಲ್ಲ. ಪ್ರಸ್ತುತ ದೆಹಲಿಯಲ್ಲಿ 14.2 ಕೆಜಿ ಸಿಲಿಂಡರ್​ ಬೆಲೆ 949.50 ರೂಪಾಯಿ ಇದೆ. ಇದು ಕೂಡ ದುಬಾರಿಯಾಗಿದೆ.

ಮುಂಬೈನಲ್ಲಿ 19 ಕೆ.ಜಿ.ಯ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ 2,205 ರೂ. ಇದ್ದರೆ, ಕೋಲ್ಕತ್ತದಲ್ಲ 2,351 ರಷ್ಟಿದೆ ಮತ್ತು ಚೆನ್ನೈನಲ್ಲಿ ಈಗ 19 ಕೆಜಿ ಸಿಲಿಂಡರ್ ಬೆಲೆ 2,406 ಕ್ಕೆ ಏರಿಕೆಯಾಗಿದೆ.

ಪಂಚ ರಾಜ್ಯಗಳ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಪೆಟ್ರೋಲ್ ಡೀಸೆಲ್ ಬೆಲೆ ಇಳಿಸಿತ್ತು, ಚುನಾವಣೆ ಮುಗಿದು ಕೆಲವೇ ದಿನಗಳಲ್ಲಿ ಮತ್ತೆ ಬೆಲೆ ಏರಿಕೆಯನ್ನು ಆರಂಭಿಸಿದೆ. ಈಗಾಗಲೇ ರಾಜ್ಯ ಹಾಗೂ ರಾಷ್ಟ್ರದಲ್ಲಿ ಕಾಂಗ್ರೆಸ್ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ ಆರಂಭಿಸಿದೆ. ಈ ಪ್ರತಿಭಟನೆಯ ನಡುವೆಯೂ ಎಲ್ ಪಿಜಿ ಗ್ರಾಹಕರಿಗೆ ಇಂಧನ ಕಂಪೆನಿ ಬಿಗ್ ಶಾಕ್ ನೀಡಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/FZkISFWKknBDvdYkMVFArW

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಏನಿದು ಹಲಾಲ್ ಮಾಂಸ?  ಅದು ಅಷ್ಟೊಂದು ಅಪಾಯಕಾರಿಯೇ?

ಮೀಸಲಾತಿ ಕಲ್ಪಿಸದೆ ಸ್ಥಳೀಯ ಸಂಸ್ಥೆ ಚುನಾವಣೆ ನಡೆಸಿದರೆ ಹಿಂದುಳಿದ ವರ್ಗಗಳಿಗೆ ಅನ್ಯಾಯ: ಸಿದ್ದರಾಮಯ್ಯ

ಗಂಡಸ್ತನ ಪದ ಬಳಕೆ: ಎಚ್‌.ಡಿ.ಕುಮಾರಸ್ವಾಮಿ ವಿಷಾದ

ಹೆಂಡತಿ ಮೇಲಿನ ವ್ಯಾಮೋಹ: ಹೆತ್ತ ತಾಯಿಯನ್ನೇ ಕೊಂದ ಮಗ

ದೇಶಕ್ಕಾಗಿ ಪ್ರಾಣವನ್ನೂ ತೆರಬಲ್ಲೆ: ಅರವಿಂದ್‌ ಕೇಜ್ರಿವಾಲ್‌

ಇತ್ತೀಚಿನ ಸುದ್ದಿ

Exit mobile version