9:06 AM Thursday 16 - October 2025

ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆ ಇಳಿಕೆ: ಇಂದಿನಿಂದಲೇ ಅನ್ವಯ

lpg cylinder
01/06/2022

ನವದೆಹಲಿ: ವಾಣಿಜ್ಯ ಬಳಕೆಯ 19 ಕೆಜಿ ಎಲ್ ಪಿಜಿ ಸಿಲಿಂಡರ್ ಬೆಲೆಯನ್ನು ಬುಧವಾರ (ಜೂನ್ 1) ರಿಂದ 135 ರೂಪಾಯಿಯಷ್ಟು ಇಳಿಕೆ ಮಾಡಲಾಗಿದೆ ಎಂದು ತೈಲ ಮಾರಾಟ ಕಂಪನಿಗಳು ಘೋಷಿಸಿವೆ.

ಇದೀಗ ದರ ಕಡಿತದ ಬಳಿಕ ರಾಜಧಾನಿ ದೆಹಲಿಯಲ್ಲಿ ಪ್ರತಿ ಸಿಲಿಂಡರ್ ಬೆಲೆ 2,219 ರೂ., ಕೋಲ್ಕತ್ತಾದಲ್ಲಿ 2,322 ರೂ., ಮುಂಬೈನಲ್ಲಿ 2,171.50 ರೂ.ಮತ್ತು ಚೆನ್ನೈನಲ್ಲಿ 2373 ರೂ. ಆಗಿದೆ.

ವಾಣಿಜ್ಯ ಎಲ್‌ ಪಿಜಿ ಸಿಲಿಂಡರ್‌ನ ಬೆಲೆಯನ್ನು ಮೇ 1 ರಂದು ರೂ. 102.50 ರಷ್ಟು ಹೆಚ್ಚಿಸಲಾಗಿತ್ತು.ಅದಕ್ಕೂ ಮುನ್ನ ಏಪ್ರಿಲ್ 1 ರಂದು 250 ರೂ., ಮಾರ್ಚ್‌ನಲ್ಲಿ 105 ರೂ. ಹೆಚ್ಚಳ ಮಾಡಲಾಗಿತ್ತು.

ವಾಣಿಜ್ಯ ಎಲ್ ಪಿಜಿ ಸಿಲಿಂಡರ್‌ ಗಳ ಬೆಲೆಯನ್ನು ಜನವರಿ 1, 2022 ರಂದು ಕೊನೆಯದಾಗಿ 102.50 ರೂಪಾಯಿಗಳಷ್ಟು ಕಡಿತಗೊಳಿಸಲಾಗಿತ್ತು. ಗೃಹ ಬಳಕೆಯ ಎಲ್ ಪಿಜಿ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಬೆಂಗಳೂರಿನಲ್ಲಿ 14.2 ಕೆಜಿ ಎಲ್ ಪಿಜಿ ಸಿಲಿಂಡರ್ ದರ 1.006 ರೂಪಾಯಿಯಷ್ಟಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಹನುಮ ಜನ್ಮ ಸ್ಥಳ ವಿವಾದ: ಧರ್ಮ ಸಂಸತ್ ನಲ್ಲಿ ಸ್ವಾಮೀಜಿಗಳ ಕಿರಿಕ್:  ಮೈಕ್ ನಿಂದ ಹೊಡೆಯಲು ಹೋದ ಸ್ವಾಮೀಜಿ!

ಸಂಗೀತ ಕಾರ್ಯಕ್ರಮದ ಬಳಿಕ ಹೃದಯಾಘಾತದಿಂದ ಮೃತಪಟ್ಟ ಖ್ಯಾತ ಗಾಯಕ

ಸರ್ಕಾರಕ್ಕೆ ಮತ್ತೆ ತಲೆನೋವು: ಕವಿತೆ, ಲಲಿತ ಪ್ರಬಂಧ ವಾಪಸ್‌ ಪಡೆದ ಇಬ್ಬರು ಲೇಖಕರು

ದಲಿತ ಮಹಿಳೆಯರು ಪ್ರವೇಶಿಸಿದ ದೇವಸ್ಥಾನಕ್ಕೆ ಬೀಗ: ನಾಪತ್ತೆಯಾದ ಧರ್ಮ ರಕ್ಷಕರು!

ಇತ್ತೀಚಿನ ಸುದ್ದಿ

Exit mobile version