9:26 AM Wednesday 15 - October 2025

ಪ್ರೀತಿ ನಿರಾಕರಿಸಿದಳು ಎಂಬ ಕಾರಣಕ್ಕಾಗಿ ಮಾಡಬಾರದ ಕೆಲಸ ಮಾಡಿ ಜೈಲು ಸೇರಿದ ಯುವಕ!

05/01/2021

ಹೈದರಾಬಾದ್: ಯುವತಿ ತನ್ನ ಪ್ರೀತಿಯನ್ನು ನಿರಾಕರಿಸಿದಳು ಎನ್ನುವ ಕಾರಣಕ್ಕಾಗಿ ಯುವಕನೋರ್ವ ಮಾಡಬಾರದ ಕೆಲಸ ಮಾಡಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಎಂಬಿಎ ವಿದ್ಯಾರ್ಥಿಯಾಗಿರುವ ಯುವಕ ಸಮೀರ್ ಇಬ್ರಾಹಿಂಪಟ್ನಂನ ಎಂಆರ್ ​ಎಂ ಕಾಲೇಜಿನ ಓದುತ್ತಿದ್ದು, ತಾನು ನಿನ್ನ ಕ್ಲಾಸ್ ಮೇಟ್ ಎಂದು ಸಂತ್ರಸ್ತ ಯುವತಿಗೆ ಪರಿಚಯಿಸಿಕೊಂಡಿದ್ದ.

ಸಮೀರ್ ಪರಿಚಯದ ಬಳಿಕ ಇವರಿಬ್ಬರು ಉತ್ತಮ ಸ್ನೇಹಿತರಾಗಿದ್ದರು. ಒಂದು ವರ್ಷಗಳ ಕಾಲ ಇಬ್ಬರು ಕೂಡ ಚಾಟಿಂಗ್ ನಲ್ಲಿದ್ದರು. ಆ ಬಳಿಕ ಸಮೀರ್ ತನ್ನ ಪ್ರೀತಿಯನ್ನು ಯುವತಿಗೆ ತಿಳಿಸಿದ್ದಾನೆ. ಆದರೆ ಆಕೆ ನಿರಾಕರಿಸಿದ್ದಾಳೆ. ಜೊತೆಗೆ ಈತನ ಜೊತೆಗೆ ಮೆಸೇಜ್ ಚಾಟಿಂಗ್ ಮಾಡುವುದನ್ನು ನಿಲ್ಲಿಸಿದ್ದಾಳೆ.

ಯುವತಿಯ ನಡೆಯಿಂದ ತೀವ್ರವಾಗಿ ಆಕ್ರೋಶಗೊಂಡ ಸಮೀರ್ ಹೊಸ ಜಿಮೇಲ್ ತೆರೆದು ಯುವತಿಯ ನಕಲಿ ಫೋಟೋವನ್ನು  ಇಂಟರ್ ನೆಟ್ ಮೂಲಕ ಕೆಟ್ಟದಾಗಿ ಎಡಿಟ್ ಮಾಡಿ ಯುವತಿಯ ಪ್ರೊಫೈಲ್ ಕ್ರಿಯೇಟ್ ಮಾಡಿ ಡೇಟಿಂಗ್  ವೆಬ್ ಸೈಟ್ ನಲ್ಲಿ ಅಪ್ ಲೋಡ್ ಮಾಡಿದ್ದಾನೆ. ಅಲ್ಲದೇ ಕಾಲ್ ಗರ್ಲ್ ಎಂದು ಆಕೆಯ ನಂಬರ್ ಕೂಡ ಹಾಕಿದ್ದಾನೆ.

ಯುವತಿಗೆ ಅನೇಕ ಕರೆಗಳು ಬಂದು ಅಸಭ್ಯ ಶಬ್ಧಗಳಲ್ಲಿ ಅವರು ಮಾತನಾಡುತ್ತಿದ್ದರು. ಕರೆ ಮಾಡಿದವರು ನಮಗೆ ವೆಬ್ ಸೈಟ್ ನಲ್ಲಿ ನಿನ್ನ ನಂಬರ್ ಸಿಕ್ಕಿದೆ ಎಂದು ಹೇಳಿದ್ದು, ಇದರಿಂದಾಗಿ ಯುವತಿ ಪೊಲೀಸರಿಗೆ ದೂರು ನೀಡಿದ್ದು, ಇದರಿಂದಾಗಿ ಸಮೀರ್ ನ ಕೃತ್ಯ ಬಯಲಾಗಿದೆ.

ಇದೀಗ ಯುವತಿಯ ಮೇಲೆ ಸೇಡು ತೀರಿಸಲು ಹೋಗಿ ಸಮೀರ್ ಜೈಲು ಪಾಲಾಗಿದ್ದಾನೆ. ಈತನನ್ನು ಶುಕ್ರವಾರ ಪೊಲೀಸರು ಬಂಧಿಸಿದ್ದು, ಆತನಿಂದ ಸಿಮ್ ಕಾರ್ಡ್ ಮತ್ತು ಮೊಬೈಲ್ ವಶಪಡಿಸಿಕೊಳ್ಳಲಾಗಿದೆ.

ಇತ್ತೀಚಿನ ಸುದ್ದಿ

Exit mobile version