3:20 AM Thursday 16 - October 2025

ಮದುವೆಯಾಗಲು ಒಪ್ಪದ ಬಾಲಕಿಯನ್ನು 1 ಲಕ್ಷ ರೂ.ಗೆ ಮಾರಿದ ಹೆತ್ತವರು!

20/01/2021

ಜೈಪುರ: ಮದುವೆಯಾಗಲು ಒಪ್ಪದ ಮಗಳನ್ನು 1 ಲಕ್ಷ ರೂಪಾಯಿಗೆ ಪೋಷಕರೇ ಮಾರಾಟ ಮಾಡಿರುವ ಘಟನೆ ರಾಜಸ್ಥಾನದ ಬರಾನ್ ಜಿಲ್ಲೆಯಲ್ಲಿ ನಡೆದಿದ್ದು,  ಬಿಹಾರ ಮೂಲದ 13 ವರ್ಷದ ಬಾಲಕಿಯನ್ನು ಮದುವೆ ನೆಪದಲ್ಲಿ ಮಾರಾಟ ಮಾಡಲಾಗಿದೆ.

ಡಿಸೆಂಬರ್ ನಲ್ಲಿ ಬಾಲಕಿಗೆ ಹೆತ್ತವರು ವಿವಾಹ ನಿಶ್ಚಯಿಸಿದ್ದರು.  ಆದರೆ ಬಾಲಕಿ ಮದುವೆಗೆ ಒಪ್ಪಿರಲಿಲ್ಲ.  ಈ ವೇಳೆ ಚಂಡಿಕೇಡಿ ಪ್ರದೇಶದಲ್ಲಿ ವಾಸಿಸುತ್ತಿದ್ದ ಗೀತಾ ಸಿಂಗ್ ಅವರ ಬಳಿಗೆ ಕರೆತಂದು ಬಾಲಕಿಯನ್ನು 1.21 ಲಕ್ಷ ರೂಪಾಯಿಗೆ ಮಾರಾಟ ಮಾಡಿದ್ದಾರೆ ಎಂದು ಬಾಲಕಿಯೇ ತಿಳಿಸಿದ್ದಾಳೆ. ಇದಲ್ಲದೇ  ಡಿಸೆಂಬರ್ 24ರಂದು ಮುಖೇಶ್ ಎಂಬ ವ್ಯಕ್ತಿಯೊಂದಿಗೆ ನನ್ನ ಮದುವೆ ಮಾಡಿದ್ದಾರೆ ಎಂದು ಬಾಲಕಿ ಪೊಲೀಸರಿಗೆ ನೀಡಿದ ಮಾಹಿತಿಯಲ್ಲಿ ತಿಳಿಸಿದ್ದಾಳೆ.

ಮಂಗಳವಾರ ಬಾಲಕಿಯನ್ನು ಮಾರಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿಯೊಂದಿಗೆ ನಾವು ದಾಳಿ ನಡೆಸಿದ್ದೇವೆ. ಮಾನವ ಕಳ್ಳಸಾಗಣೆ ಆರೋಪದ ಮೇಲೆ ಬಾಲಕಿಯ ತಾಯಿ ಸೇರಿದಂತೆ ಐವರನ್ನು ಬಂಧಿಸಿದ್ದೇವೆ. ಬಳಿಕ ಮಕ್ಕಳ ಕಲ್ಯಾಣ ಇಲಾಖೆಗೆ ಮಾಹಿತಿ ನೀಡಿದ್ದೇವೆ ಎಂದು ಬಾರನ್ ಜಿಲ್ಲಾ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ವಿಜಯ್ ಸ್ವರೂಪ್ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ

Exit mobile version