4:55 AM Thursday 15 - January 2026

ಮಲಬಾರ್ ಎಕ್ಸ್ ಪ್ರೆಸ್ ರೈಲಿನ ಬೋಗಿಯೊಳಗೆ ಅಪರಿಚಿತ ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ

kerala
28/04/2022

ಕೊಲ್ಲಂ;ಮಲಬಾರ್ ಎಕ್ಸ್ ಪ್ರೆಸ್ ನ ಬೋಗಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ.    ಕೊಲ್ಲಂ ಮತ್ತು ಕಾಯಂಕುಲಂ ನಡುವೆ ಈ ಘಟನೆ ನಡೆದಿದ್ದು ಘಟನೆಯ ನಂತರ ಮಲಬಾರ್ ಎಕ್ಸ್‌ಪ್ರೆಸ್ ಅನ್ನು ಕೊಲ್ಲಂನಲ್ಲಿ ದೀರ್ಘ ಸಮಯ ನಿಲ್ಲಿಸಲಾಯಿತು.

ಇಂದು ಬೆಳಗ್ಗೆ 7 ಗಂಟೆ ಸುಮಾರಿಗೆ ಅಂಗವಿಕಲ ಕೋಚ್‌ ನಲ್ಲಿ ಅಪರಿಚಿತ ವ್ಯಕ್ತಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.  ಕೊಲ್ಲಂನ ರೈಲು ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರು ಕೋಚ್ ತೆರೆದಾಗ ಘಟನೆ ಬೆಳಕಿಗೆ ಬಂದಿದೆ.

ನಂತರ ರೈಲ್ವೆ ಸಿಬ್ಬಂದಿ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದು ಮೃತದೇಹವನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ https://chat.whatsapp.com/FZkISFWKknBDvdYkMVFArW

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಲಾರಿ ಮತ್ತು ಕಾರಿನ ನಡುವೆ ಭೀಕರ ಅಪಘಾತ: ಇಬ್ಬರು ಸ್ಥಳದಲ್ಲೇ ಸಾವು

ಹೊಳೆಗೆ ತೋಟೆ ಹಾಕಿ ಮೀನುಗಳ ಮಾರಣಹೋಮ:  ಮೂವರು ವಶಕ್ಕೆ

ಪ್ರಾಣ ತೆಗೆದ ಕಣ್ಣಮುಚ್ಚಾಲೆ ಆಟ: ಬಾಲಕಿಯರಿಬ್ಬರ ದಾರುಣ ಸಾವು

ಲಾಡ್ಜ್ ನಲ್ಲಿ ಆತ್ಮಹತ್ಯೆಗೆ ಶರಣಾದ ಮತ್ತೋರ್ವ ಗುತ್ತಿಗೆದಾರ!

ಒಟಿಟಿಯಲ್ಲಿ ಕೆಜಿಎಫ್ ಚಾಪ್ಟರ್ 2 ಸದ್ಯದಲ್ಲೇ ಬಿಡುಗಡೆ: ದಿನಾಂಕ ಪ್ರಕಟ

 

ಇತ್ತೀಚಿನ ಸುದ್ದಿ

Exit mobile version