11:08 PM Tuesday 14 - October 2025

ಕೊಂಡೋತ್ಸವ ನೋಡಲು ಮನೆಯ ಮೇಲ್ಛಾವಣಿ ಹತ್ತಿದ 100 ಜನ: ನಡೆದೇ ಹೋಯ್ತು ದುರಂತ

huligeri
29/03/2022

ಮಂಡ್ಯ: ಮದ್ದೂರು ತಾಲೂಕಿನ ಹುಲಿಗೆರೆಪುರ ಗ್ರಾಮದಲ್ಲಿ ಮನೆ ಛಾವಣಿ ಕುಸಿದು ಓರ್ವ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದು, 40ಕ್ಕೂ ಅಧಿಕ ಮಂದಿ ಗಾಯಗೊಂಡಿರುವ ಘಟನೆ ವರದಿಯಾಗಿದೆ.

ಹುಲಿಗೆರೆಪುರ ಗ್ರಾಮದ ಪುಟ್ಟಲಿಂಗಮ್ಮ(50) ಮೃತ ಮಹಿಳೆ ಗ್ರಾಮದ ಬಸವೇಶ್ವರ ದೇವಸ್ಥಾನ ಕೊಂಡೋತ್ಸವ ನೋಡಲು 100ಕ್ಕೂ ಹೆಚ್ಚು ಮಂದಿ ಹುಲಿಗೆರೆ ಪುರದ ಮಾದೇಗೌಡರ ನಿವಾಸದ ಛಾವಣಿ ಮೇಲೆ ನಿಂತಿದ್ದರು.

ಈ ವೇಳೆ ಜನರ ಭಾರ ತಾಳಲಾರದೆ ಮನೆಯ ಒಂದು ಭಾಗ ಕುಸಿದಿದ್ದು, 40ಕ್ಕೂ ಹೆಚ್ಚು ಜನರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಘಟನೆಯಲ್ಲಿ ಹುಲಿಗೆರೆಪುರ ಗ್ರಾಮದ ಪುಟ್ಟಲಿಂಗಮ್ಮ(50) ಎನ್ನುವವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮದ್ದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಜಿಲ್ಲೆಯ ಮದ್ದೂರು ತಾಲೂಕಿನ ಹುಲಿಗೆರೆಪುರ ಗ್ರಾಮದಲ್ಲಿ ಇಂದು‌ ಮುಂಜಾನೆ ಶ್ರೀ ಬಸವೇಶ್ವರ ದೇವಸ್ಥಾನದ ಕೊಂಡೋತ್ಸವ ನಡೆಸಲಾಗುತ್ತಿತ್ತು‌.ಕೊಂಡೋತ್ಸವ ನೋಡಲು ಪಕ್ಕದಲ್ಲಿದ್ದ ತಾರಸಿಗೆ 100 ಕ್ಕೂ ಹೆಚ್ಚು ಜನರು ಏರಿದ್ದರು. ಈ ವೇಳೆ ದಿಢೀರನೆ ಕುಸಿದ ಮೇಲ್ಚಾವಣಿಯ ಅಡಿಗೆ ಸಿಲುಕಿ ಓರ್ವ ಮಹಿಳೆ ಸ್ಥಳದಲ್ಲೆ ಸಾವನ್ನಪ್ಪಿದ್ದು, 40 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಇನ್ನು 10 ಕ್ಕೂ ಹೆಚ್ಚು ಮಕ್ಕಳಿಗೆ ಕೈ ಕಾಲು ಮುರಿದಿದ್ದು, 40 ಕ್ಕೂ ಹೆಚ್ಚು ಜನರಿಗೆ ಗಂಭೀರವಾಗಿ ಗಾಯಗೊಂಡಿದ್ದಾರೆ.

ಗಾಯಗೊಂಡವರನ್ನು ಮದ್ದೂರು ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದ್ದಾರೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮದ್ದೂರು ಪೊಲೀಸ್ ಪ್ರಕರಣ ದಾಖಲು ಮಾಡಿ ತನಿಖೆ ಆರಂಭಿಸಿದ್ದಾರೆ .

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/FZkISFWKknBDvdYkMVFArW

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಹುಲಿ ದಾಳಿಗೆ ಯುವಕ ಬಲಿ

ಆ ಒಂದು ಯೋಜನೆ ಶ್ರೀಲಂಕಾದ ಆರ್ಥಿಕ ಬಿಕ್ಕಟ್ಟಿಗೆ ಕಾರಣವಾಯ್ತು!

ರವಿ ಡಿ.ಚನ್ನಣ್ಣನವರ್ ವಿರುದ್ಧ ಸಿಬಿಐ ತನಿಖೆ ಕೋರಿ ಹೈಕೋರ್ಟ್‌ಗೆ ಅರ್ಜಿ

ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿ: ಹರೀಶ್ ರಾವತ್

ಇತ್ತೀಚಿನ ಸುದ್ದಿ

Exit mobile version