6:48 AM Thursday 15 - January 2026

ಮನೆಗೆ ನುಗ್ಗಿ ಮಹಿಳೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ದುಷ್ಕರ್ಮಿಗಳು!

yadagiri
04/10/2021

ಯಾದಗಿರಿ: ಮನೆಯೊಂದಕ್ಕೆ ನುಗ್ಗಿ ಮಹಿಳೆಯನ್ನು ಸಜೀವ ದಹಿಸಿ ಹತ್ಯೆಗೆ ಯತ್ನಿಸಿರುವ ಘಟನೆ ಸುರಪುರ ತಾಲೂಕಿನ ಚೌಡೇಶ್ವರಿಹಾಳ ಗ್ರಾಮದಲ್ಲಿ ನಡೆದಿದ್ದು, ಮಹಿಳೆಗೆ ಬೆಂಕಿ ಹಚ್ಚಿ ಆರೋಪಿಗಳು ಪರಾರಿಯಾಗಿದ್ದು, ಪರಿಣಾಮವಾಗಿ ಮಹಿಳೆಯ ಸ್ಥಿತಿ ಗಂಭೀರವಾಗಿದೆ.

23 ವರ್ಷ ವಯಸ್ಸಿನ ಮಹಿಳೆ ಬಾಲಮ್ಮ ಎಂಬವರ ಮೇಲೆ ಈ ದಾಳಿ ನಡೆದಿದ್ದು, ಮಧ್ಯರಾತ್ರಿ 2 ಗಂಟೆಯ ವೇಳೆಗೆ ಮನೆಗೆ ನುಗ್ಗಿದ ದುಷ್ಕರ್ಮಿಗಳು ಪೆಟ್ರೋಲ್ ಸುರಿದು ಮಹಿಳೆಗೆ ಬೆಂಕಿ ಹಚ್ಚಿದ್ದಾರೆ. ಇಲ್ಲಿನ ಗಂಗಪ್ಪ ಅಳ್ಳಳ್ಳಿ ಎಂಬ ವ್ಯಕ್ತಿ ಕೃತ್ಯ ನಡೆಸಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.

ಕೃತ್ಯಕ್ಕೆ ಕಾರಣ ಏನು ಎನ್ನುವುದು ಇನ್ನೂ ತಿಳಿದು ಬಂದಿಲ್ಲ.  ಸದ್ಯ ಗಾಯಾಳು ಮಹಿಳೆಯನ್ನು ಸುರಪುರ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯದ ಮಾಹಿತಿಯ ಪ್ರಕಾರ ಮಹಿಳೆಯ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GprkhpfFmuL8YDKlAEmru9

ಇನ್ನಷ್ಟು ಸುದ್ದಿಗಳು…

ಪ್ರವಾದಿಯ ಅವಹೇಳನಾಕಾರಿ ವ್ಯಂಗ್ಯ ಚಿತ್ರ ಬಿಡಿಸಿದ್ದ ವಿವಾದಿತ ಕಲಾವಿದ ಅಪಘಾತದಲ್ಲಿ ಸಾವು!

ಬಿಜೆಪಿ ರೈತರ ಮೇಲೆ ನಡೆಸುತ್ತಿರುವ ದೌರ್ಜನ್ಯವನ್ನು ಬ್ರಿಟಿಷರು ಕೂಡ ಮಾಡಿರಲಿಲ್ಲ | ಅಖಿಲೇಶ್ ಯಾದವ್

ರೈತರ ಹತ್ಯಾಕಾಂಡ: ಬೇಡಿಕೆ ಈಡೇರದ ಹೊರತು ಮೃತ ರೈತರ ಅಂತ್ಯಸಂಸ್ಕಾರ ಮಾಡಲ್ಲ |  ರಾಕೇಶ್ ಟಿಕಾಯತ್ ಪಟ್ಟು

ಲಿಖಿಂಪುರ ರೈತರ ಹತ್ಯಾಕಾಂಡ: ಬಿಎಸ್ ಪಿ ನಾಯಕರನ್ನೂ ಗೃಹ ಬಂಧನದಲ್ಲಿರಿಸಲಾಗಿದೆ | ಮಾಯಾವತಿ

ಹತ್ಯೆಯಾದ 8 ರೈತರ ಕುಟುಂಬಗಳ ಭೇಟಿಗೆ ತೆರಳಿದ ಪ್ರಿಯಾಂಕಾ ಗಾಂಧಿ ಅರೆಸ್ಟ್!

ಹತ್ಯೆಯಾದ 8 ರೈತರ ಕುಟುಂಬಗಳ ಭೇಟಿಗೆ ತೆರಳಿದ ಪ್ರಿಯಾಂಕಾ ಗಾಂಧಿ ಅರೆಸ್ಟ್!

 

ಇತ್ತೀಚಿನ ಸುದ್ದಿ

Exit mobile version