5:27 AM Wednesday 15 - October 2025

ಭಾರತ ಮಾತೆಯ ರಕ್ಷಣೆಗೋಸ್ಕರ ಮನೆಯಲ್ಲಿ ತಲವಾರ್ ಇಟ್ಟುಕೊಳ್ಳಿ: ಪ್ರಮೋದ್ ಮುತಾಲಿಕ್ ಕರೆ

pramood muthalik
20/02/2022

ಬಾಗಲಕೋಟೆ: ಭಾರತ ಮಾತೆಯ ರಕ್ಷಣೆಗೋಸ್ಕರ ಮನೆಯಲ್ಲಿ ಒಂದು ತಲವಾರ್ ಇಟ್ಟುಕೊಳ್ಳಿ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಬಾಗಲಕೋಟೆಯಲ್ಲಿ ಮಾತನಾಡಿದ ಪ್ರಮೋದ್ ಮುತಾಲಿಕ್, ಬಂಧುಗಳೇ ದೇಶ‌ ಮೊದಲು, ಹಿಜಾಬ್ ಅಲ್ಲ. ಟಿಪ್ಪು ಸುಲ್ತಾನ್ ಜಯಂತಿ ಮಾಡುತ್ತಾರೆ, ಯಾರವನು? ಟಿಪ್ಪು ಸುಲ್ತಾನ್​ ಲಕ್ಷಾಂತರ ಹಿಂದೂಗಳನ್ನು ಕೊಂದ ದೇಶದ್ರೋಹಿ. ಟಿಪ್ಪು ಸಾವಿರಾರು ದೇವಸ್ಥಾನ ಒಡೆದ ನೀಚ ನಿರ್ಲಜ್ಜ.  ನೀವು ಯಾರಾದರೂ ಮುಸ್ಲಿಮರಿಗೆ ಟಿಪ್ಪು ಸುಲ್ತಾನ್ ದಿವಸ ಶರಬತ್ ಕೊಟ್ಟರೆ, ನಾನೇ ಬರುತ್ತೇನೆ ಚಪ್ಪಲಿಯಲ್ಲಿ ಹೊಡೆಯುತ್ತೇನೆ. ನಮ್ಮಂತಹ ಎಷ್ಟು ಜನರ ಜೀವನ ತೆಗೆದುಕೊಳ್ಳುತ್ತೀರಿ ನೀವು? ಹಿಂದೂ, ಹಿಂದೂ ಎಂದು ಸಾಯುತ್ತಿದ್ದೇವೆ. ಮತ್ತೆ ಮುಸ್ಲಿಂ, ಮುಸ್ಲಿಂ ಅಂತ ಹೋದರೆ ಹುಷಾರ್​ ಎಂದು ಹಿಂದೂ ಕಾರ್ಯಕರ್ತರ ವಿರುದ್ದ ಕಿಡಿಕಾರಿದರು.

ನನಗೆ 67 ವಯಸ್ಸು ಆಯ್ತು. ಮನೆ ಬಿಟ್ಟು 45 ವರ್ಷ ಆಯ್ತು. ನಾನು ಮನೆ ಕಡೆ ಹಿಂದಿರುಗಿ ನೋಡಲಿಲ್ಲ‌. 107 ಕೇಸ್ ಹಾಕಿದ್ದರು, ಸಾವಿರ ಕೇಸ್ ಹಾಕಲಿ. ಜಯಂತಿಗೆ ಬಂದೆ ನನಗೆ ಹೂಹಾರ ಕೊಟ್ಟರು, ಒಂದು ತಲವಾರ್ ಕೊಡಲಿಲ್ಲ. ಇನ್ನು ಹೂಹಾರ ಸಾಕು. ಈಗ ಪ್ರತಿಯೊಬ್ಬರ‌ ಮನೆಯಲ್ಲಿ ತಲವಾರ್ ಇಟ್ಟುಕೊಳ್ಳುವ ಕಾಲ ಬಂದಿದೆ. ಅದು ದೇಶದ ರಕ್ಷಣೆಗೋಸ್ಕರ. ನಮ್ಮ ತಾಯಂದಿರ ರಕ್ಷಣೆಗೋಸ್ಕರ. ನಮ್ಮ ದೇವಸ್ಥಾನದ ರಕ್ಷಣೆಗೋಸ್ಕರ. ಭಾರತ ಮಾತೆಯ ರಕ್ಷಣೆಗೋಸ್ಕರ ಮನೆಯಲ್ಲಿ ಒಂದು ತಲವಾರ್ ಇಟ್ಟುಕೊಳ್ಳಿ ಎಂದು ಕಾರ್ಯಕರ್ತರಿಕೆ ಕರೆ ನೀಡಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ದಲಿತರು ಮಾಧ್ಯಮಗಳ ಆರಂಭಿಸುವ ಮುನ್ನ ಇದನ್ನೊಮ್ಮೆ ಓದಿ….

ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ

ಭೀಕರ ರಸ್ತೆ ಅಪಘಾತ: ಜಾತ್ರೆಗೆ ತೆರಳುತ್ತಿದ್ದ ಐವರು ಸಾವು; ಓರ್ವ ಗಂಭೀರ

ಹುಟ್ಟುಹಬ್ಬದ ಉಡುಗೊರೆ ಕೊಡುವುದಾಗಿ ನಂಬಿಸಿ ಬಡ ಬಾಲಕಿಯ ಸಾಮೂಹಿಕ ಅತ್ಯಾಚಾರ

ಕೆಂಪುಕೋಟೆ ಮೇಲೆ ಕೇಸರಿ ಬಾವುಟ ಹಾರಿಸುತ್ತೇನೆ ಎಂಬ ಹೇಳಿಕೆ: ಸಚಿವ ಈಶ್ವರಪ್ಪ ರಾಜೀನಾಮೆ ಒತ್ತಾಯಿಸಿ ಪ್ರತಿಭಟನೆ

ಇತ್ತೀಚಿನ ಸುದ್ದಿ

Exit mobile version