ಮಂಗಳೂರು KSRTCಯಿಂದ ದಸರಾ ಸ್ಪೆಷಲ್ ಟೂರ್ ಪ್ಯಾಕೇಜ್ ಘೋಷಣೆ: ನವರಾತ್ರಿಗೆ 5 ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಿಗೆ ವಿಶೇಷ ಬಸ್ ಸೌಲಭ್ಯ
ಮಂಗಳೂರು: ನವರಾತ್ರಿ ಹಾಗೂ ಮಂಗಳೂರು ದಸರಾ ಮಹೋತ್ಸವದ ಪ್ರಯುಕ್ತ ಸಾರ್ವಜನಿಕರು ಮತ್ತು ಭಕ್ತಾದಿಗಳ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (KSRTC) ಮಂಗಳೂರು ವಿಭಾಗವು ವಿಶೇಷ ‘ದಸರಾ ಪ್ಯಾಕೇಜ್ ಟೂರ್’ ಅನ್ನು ಪ್ರಕಟಿಸಿದೆ.
ಪ್ರತಿವರ್ಷದಂತೆ ಈ ಬಾರಿಯೂ ಅಕ್ಟೋಬರ್ 11 ರಿಂದ 20 ರವರೆಗೆ ಏಕಕಾಲಕ್ಕೆ 5 ಪ್ರಮುಖ ಮಾರ್ಗಗಳಲ್ಲಿ ವಿಶೇಷ ಬಸ್ಗಳು ಸಂಚರಿಸಲಿವೆ. ಈ ಕುರಿತು ಮಾಹಿತಿ ನೀಡಿರುವ KSRTC ಮಂಗಳೂರು ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್ ಶೆಟ್ಟಿ, ಸಾರ್ವಜನಿಕರ ಬೇಡಿಕೆಯಂತೆ ಈ ಬಾರಿ ಹೊಸದಾಗಿ ‘ಶೃಂಗೇರಿ ಪ್ಯಾಕೇಜ್’ ಅನ್ನು ಸೇರ್ಪಡೆಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ. ಈ ಪ್ಯಾಕೇಜ್ಗಳು ಯಾವುದೇ ಲಾಭದ ಉದ್ದೇಶವಿಲ್ಲದೆ, ಅತ್ಯಂತ ಕಡಿಮೆ ದರದಲ್ಲಿ ಧಾರ್ಮಿಕ ಕ್ಷೇತ್ರಗಳ ದರ್ಶನ ಕಲ್ಪಿಸುವ ಸೇವಾ ಕಾರ್ಯವಾಗಿವೆ.
ಮಂಗಳೂರು ದಸರಾ ಪ್ಯಾಕೇಜ್ (ನವದುರ್ಗಾ ದರ್ಶನ ಮತ್ತು 9 ದೇವಸ್ಥಾನಗಳು):
ಮಾರ್ಗ: ಮಂಗಳೂರು ಬಸ್ ನಿಲ್ದಾಣದಿಂದ ಹೊರಟು — ಮಂಗಳಾದೇವಿ, ಬೋಳಾರ ಮಾರಿಯಮ್ಮ, ಪೊಳಲಿ ರಾಜರಾಜೇಶ್ವರಿ, ಬಿ.ಸಿ. ರೋಡ್ ರಕ್ತೇಶ್ವರಿ, ಕಟೀಲು ದುರ್ಗಾಪರಮೇಶ್ವರಿ, ಮುಲ್ಕಿ ಬಪ್ಪನಾಡು, ಸಸಿಹಿತ್ಲು ಭಗವತಿ, ಚಿತ್ರಾಪುರ ದುರ್ಗಾಪರಮೇಶ್ವರಿ (ಬೀಚ್ ವೀಕ್ಷಣೆ), ಉರ್ವ ಮಾರಿಯಮ್ಮ ಹಾಗೂ ಕುದ್ರೋಳಿ ಗೋಕರ್ಣನಾಥೇಶ್ವರ ಕ್ಷೇತ್ರ ದರ್ಶನ.
ಸಮಯ: ಬೆಳಗ್ಗೆ 08:00 ರಿಂದ ರಾತ್ರಿ 08:00 ರವರೆಗೆ.
ಟಿಕೆಟ್ ದರ: ವಯಸ್ಕರಿಗೆ ₹500, ಮಕ್ಕಳಿಗೆ (6 ರಿಂದ 12 ವರ್ಷ) ₹400.
ಕೊಲ್ಲೂರು ಪ್ಯಾಕೇಜ್:
ಮಾರ್ಗ: ಮಂಗಳೂರು ಬಸ್ ನಿಲ್ದಾಣ — ಉಚ್ಚಿಲ ಮಹಾಲಕ್ಷ್ಮಿ — ಕಾಪು ಮಾರಿಯಮ್ಮ — ಮಂದಾರ್ತಿ ದುರ್ಗಾಪರಮೇಶ್ವರಿ — ಕಮಲಶಿಲೆ ಬ್ರಾಹ್ಮಿ ದುರ್ಗಾಪರಮೇಶ್ವರಿ (ಮಧ್ಯಾಹ್ನದ ಊಟ) — ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ — ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ ಕ್ಷೇತ್ರ — ಮಂಗಳೂರು.
ಸಮಯ: ಬೆಳಗ್ಗೆ 08:00 ರಿಂದ ರಾತ್ರಿ 08:00 ರವರೆಗೆ.
ಟಿಕೆಟ್ ದರ: ವಯಸ್ಕರಿಗೆ ₹600, ಮಕ್ಕಳಿಗೆ ₹500.
ಶೃಂಗೇರಿ ಪ್ಯಾಕೇಜ್ (ನೂತನ ಸೇರ್ಪಡೆ):
ಮಾರ್ಗ: ಮಂಗಳೂರು — ಹೊರನಾಡು ಅನ್ನಪೂರ್ಣೇಶ್ವರಿ — ಶೃಂಗೇರಿ ಶಾರದಾಂಬೆ — ಹರಿಹರಪುರ ಮಠ (ಮಧ್ಯಾಹ್ನದ ಊಟ) — ಕಿಗ್ಗಾ ಋಷ್ಯಶೃಂಗೇಶ್ವರ ದೇವಸ್ಥಾನ — ಮಂಗಳೂರು.
ಸಮಯ: ಬೆಳಗ್ಗೆ 07:00 ರಿಂದ ರಾತ್ರಿ 07:00 ರವರೆಗೆ.
ಟಿಕೆಟ್ ದರ: ವಯಸ್ಕರಿಗೆ ₹600, ಮಕ್ಕಳಿಗೆ ₹500.
ತಲಕಾವೇರಿ — ಭಾಗಮಂಡಲ ಪ್ಯಾಕೇಜ್:
ಮಾರ್ಗ: ಮಂಗಳೂರು — ಪುತ್ತೂರು ಮಹಾಲಿಂಗೇಶ್ವರ — ತಲಕಾವೇರಿ — ತ್ರಿವೇಣಿ ಸಂಗಮ ಭಾಗಮಂಡಲ (ಮಧ್ಯಾಹ್ನದ ಊಟ) — ಅಬ್ಬಿಫಾಲ್ಸ್ — ರಾಜಾಸೀಟ್ — ಮಂಗಳೂರು.
ಸಮಯ: ಬೆಳಗ್ಗೆ 07:00 ರಿಂದ ರಾತ್ರಿ 09:30 ರವರೆಗೆ.
ಟಿಕೆಟ್ ದರ: ವಯಸ್ಕರಿಗೆ ₹600, ಮಕ್ಕಳಿಗೆ ₹500.
ಸಿಗಂದೂರು ಪ್ಯಾಕೇಜ್:
ಮಾರ್ಗ: ಮಂಗಳೂರು — ಕುಂದಾಪುರ (ಉಪಾಹಾರ) — ಸಿಗಂದೂರು ಚೌಡೇಶ್ವರಿ (ಮಧ್ಯಾಹ್ನದ ಊಟ, ಹ್ಯಾಂಗಿಂಗ್ ಬ್ರಿಡ್ಜ್ ವೀಕ್ಷಣೆ) — ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ — ಮಂಗಳೂರು.
ಸಮಯ: ಬೆಳಗ್ಗೆ 07:00 ರಿಂದ ರಾತ್ರಿ 07:30 ರವರೆಗೆ.
ಟಿಕೆಟ್ ದರ: ವಯಸ್ಕರಿಗೆ ₹700, ಮಕ್ಕಳಿಗೆ ₹600.
ಪ್ರಯಾಣಿಕರ ಬೇಡಿಕೆಗೆ ತಕ್ಕಂತೆ ಹೆಚ್ಚಿನ ಬಸ್ ಗಳನ್ನು ನಿಯೋಜಿಸಲು KSRTC ಸಿದ್ಧತೆ ಮಾಡಿಕೊಂಡಿದೆ. ಆಸಕ್ತರು ಮುಂಗಡವಾಗಿ www.ksrtc.in ಅಧಿಕೃತ ಜಾಲತಾಣದ ಮೂಲಕ ಆಸನಗಳನ್ನು ಕಾಯ್ದಿರಿಸಬಹುದು.
ಸಂಪರ್ಕ ಸಂಖ್ಯೆಗಳು:
- ಮಂಗಳೂರು ಮುಂಗಡ ಬುಕಿಂಗ್ ಕೌಂಟರ್: 9663211553
- ಮಂಗಳೂರು ಬಸ್ ನಿಲ್ದಾಣ: 7760990720
- ಮಂಗಳೂರು 1ನೇ ಮತ್ತು 3ನೇ ಘಟಕ: 7760990713, 7760990723
- ವಿಭಾಗೀಯ ಕಚೇರಿ: 7760990711, 9663266221




























