ಬಯಲಾಯಿತು ಫೇಕ್ ಫೋಟೋ ರಹಸ್ಯ: ಸಿಂಗಾಪುರದ ಮೆಟ್ರೋ ನಿಲ್ದಾಣದ ಫೋಟೋವನ್ನು ಕ್ರಾಪ್ ಮಾಡಿ ಮೆಟ್ರೋ ನಿಲ್ದಾಣ ಎಂದ ಬಿಜೆಪಿ..!

18/05/2024

ಬಿಜೆಪಿಯ ವಿವಿಧ ರಾಜ್ಯ ಮತ್ತು ಜಿಲ್ಲಾ ಘಟಕಗಳ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಇತ್ತೀಚೆಗೆ ಮೆಟ್ರೋ ನಿಲ್ದಾಣದ ಪೋಸ್ಟರ್ ಒಂದನ್ನು ಹಂಚಿಕೊಳ್ಳಲಾಗಿತ್ತು. ಇದು ಶಾನ್ ಸೆರೆ ಹಿಡಿದ ಸಿಂಗಾಪುರದ ಮೆಟ್ರೋ ನಿಲ್ದಾಣದ ಫೋಟೋ. ಇದನ್ನು ಕ್ರಾಪ್ ಮಾಡಿ ಬಿಜೆಪಿ ತನ್ನ ಪೋಸ್ಟರ್‌ಗೆ ಬಳಸಿಕೊಂಡಿದೆ ಎಂಬುವುದನ್ನು ಆಲ್ಟ್‌ ನ್ಯೂಸ್ ತೋರಿಸಿದೆ.

ಪ್ರಧಾನಿ ನರೇಂದ್ರ ಮೋದಿಯವರ ಫೋಟೋ ಮತ್ತು ಹಿಂಭಾಗದಲ್ಲಿ ಮೆಟ್ರೋ ರೈಲು ಸಾಗುತ್ತಿರುವ ಚಿತ್ರವಿರುವ ಈ ಪೋಸ್ಟರ್‌ ಜೊತೆಗೆ “ಉದ್ಯೋಗ ಸೃಷ್ಟಿಯಾಗುತ್ತಿಲ್ಲವಾದರೆ, ಮೆಟ್ರೋ ಸೇವೆಗಳು ಭಾರತದ ವಿವಿಧ ನಗರಗಳನ್ನು ತಲುಪಿದ್ದು ಹೇಗೆ? 2014 ರಲ್ಲಿ 5 ನಗರಗಳಲ್ಲಿ ಇದ್ದ ಮೆಟ್ರೋ ಸೇವೆಗಳು ಈಗ 20 ನಗರಗಳಿಗೆ ವಿಸ್ತರಿಸಿವೆ” ಎಂದು ಬರೆದುಕೊಳ್ಳಲಾಗಿತ್ತು.
ಈ ಪೋಸ್ಟರ್‌ ಕುರಿತು ‘ಆಲ್ಟ್‌ ನ್ಯೂಸ್’ ಫ್ಯಾಕ್ಟ್‌ ಚೆಕ್ ನಡೆಸಿದ್ದು, ಪೋಸ್ಟರ್‌ನಲ್ಲಿ ಪ್ರಧಾನಿ ಮೋದಿಯವರ ಹಿಂಭಾಗದಲ್ಲಿರುವ ಮೆಟ್ರೋದ ಫೋಟೋ ಶಾನ್ ಎಂಬ ಛಾಯಾಗ್ರಾಹಕ ‘ಅನ್‌ಸ್ಪ್ಲಾಶ್’ ಫೋಟೋ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಿದ್ದು ಕಂಡು ಬಂದಿದೆ. ಆಲ್ಟ್‌ ನ್ಯೂಸ್‌ ತಂಡ ಇನ್‌ಸ್ಟಾಗ್ರಾಮ್‌ ಮುಖಾಂತರ ಶಾನ್ ರನ್ನು ಸಂಪರ್ಕಿಸಿದ್ದು, ಈ ಫೋಟೋ ಸಿಂಗಾಪುರದ ಜುರಾಂಗ್ ಈಸ್ಟ್ ನಿಲ್ದಾಣದ್ದು, ಎಂದು ಸ್ವತಃ ಅವರೇ ಖಚಿತಪಡಿಸಿದ್ದಾರೆ ಎಂದಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version