ಬೆಟ್ಟಿಂಗ್ ನಲ್ಲಿ ಲಕ್ಷಾಂತರ ರೂ. ಹಣ ಕಳೆದುಕೊಂಡ ಯುವಕ: ದುರಂತವಾಗಿ ಕೊನೆಗೊಂಡಿತು ಜೀವನ!

mudibasava
19/05/2024

ರಾಯಚೂರು: ಐಪಿಎಲ್ ಬೆಟ್ಟಿಂಗ್ ನಲ್ಲಿ ಹಣಕಳೆದುಕೊಂಡ ಯುವಕನೊಬ್ಬ ಸಾವಿಗೆ ಶರಣಾಗಿರುವ ಘಟನೆ ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ನಡೆದಿದೆ.

ಮುದಿಬಸವ (24) ಸಾವನ್ನಪ್ಪಿದ ಯುವಕನಾಗಿದ್ದು, ಲಾಡ್ಜ್ ವೊಂದರಲ್ಲಿ ರೂಮ್ ಪಡೆದು ನೇಣಿಗೆ ಶರಣಾಗಿದ್ದಾನೆ. ಐಪಿಎಲ್ ಬೆಟ್ಟಿಂಗ್ ನಿಂದ ಹೆಚ್ಚು ಹಣ ಮಾಡಬಹುದು ಎಂದು ಭಾವಿಸಿ, ಬೆಟ್ಟಿಂಗ್ ನಲ್ಲಿ ನಿರತವಾಗಿದ್ದ ಈತ ಲಕ್ಷಾಂತರ ಹಣ ಕಳೆದುಕೊಂಡಿದ್ದಾನೆ.

ಮಸ್ಕಿ ತಾಲೂಕಿನ ಉದ್ಬಾಳ ಗ್ರಾಮದ ಮುದಿಬಸವ ಬೆಟ್ಟಿಂಗ್ ಗೆ ಬಲಿಯಾಗಿದ್ದಾನೆ ಎನ್ನಲಾಗಿದೆ.  ಲಾಡ್ಜ್ ನ ರೂಮ್ ನಲ್ಲಿ ತಂಗಿದ್ದ ಯುವಕ ರೂಮ್ ನಿಂದ ಹೊರ ಬಾರದಿದ್ದ ವೇಳೆ ಅನುಮಾನಗೊಂಡು ಲಾಡ್ಜ್ ಸಿಬ್ಬಂದಿ ಪರಿಶೀಲಿಸಿದ ವೇಳೆ ನೇಣಿಗೆ ಶರಣಾಗಿರುವುದು ಬೆಳಕಿಗೆ ಬಂದಿದೆ.

ಸಿಂಧನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಇನ್ನೂ ಬೆಟ್ಟಿಂಗ್ ಎನ್ನುವುದು ಮೋಸದ ಜಾಲವಾಗಿದೆ. ಸುಲಭದಲ್ಲಿ ಹಣ ಗಳಿಸಲು ಹೋಗಿ ಸಾಕಷ್ಟು ಜನರು ಬೀದಿಗೆ ಬಂದಿದ್ದಾರೆ. ಐಪಿಎಲ್ ನಂತಹ ಕ್ರೀಡೆಗಳನ್ನು ನೋಡಿ ಆನಂದಿಸಬೇಕೇ ಹೊರತು, ಬೆಟ್ಟಿಂಗ್ ನಂತಹ ಕಾನೂನು ಬಾಹಿರ ಚಟುವಟಿಕೆಗಳಿಗೆ ಸಾರ್ವಜನಿಕರು ಮುಂದಾಗಬಾರದು, ಅದರಿಂದ ನೀವು ಮಾತ್ರವಲ್ಲದೇ ನಿಮ್ಮನ್ನು ನಂಬಿರುವ ಕುಟುಂಬಸ್ಥರು ಸಂಕಷ್ಟಕೀಡಾಗಬಹುದು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಫೇಸ್ ಬುಕ್ ಪೇಜ್ ಫಾಲೋ ಮಾಡಿ: https://www.facebook.com/profile.php?id=61556202767068

ಇತ್ತೀಚಿನ ಸುದ್ದಿ

Exit mobile version