10:22 PM Sunday 7 - September 2025

ಮನೆಯಿಂದ ಹೊರ ಹೋದ ಯುವತಿ ನಾಪತ್ತೆ: ಮಾಹಿತಿ ನೀಡಲು ಮನವಿ

jayashri pooja
05/10/2023

ಉಡುಪಿ: ಉಡುಪಿ ತಾಲೂಕು 76-ಬಡಗುಬೆಟ್ಟು ಗ್ರಾಮದ ಬೀಡಿನಗುಡ್ಡೆ ಶಂಕರಶೆಟ್ಟಿ ಕಂಪೌಂಡ್ ನ ಬಾಡಿಗೆ ಮನೆಯ ನಿವಾಸಿ ಜಯಶ್ರೀ ರಾಠೋಡ್ ಅಲಿಯಾಸ್ ಪೂಜಾ ಎಂಬ ಯುವತಿಯು ಅಕ್ಟೋಬರ್ 1 ರಂದು ಮನೆಯಿಂದ ಹೊರಗೆ ಹೋದವರು ವಾಪಾಸು ಬಾರದೇ ನಾಪತ್ತೆಯಾಗಿರುತ್ತಾರೆ.

5 ಅಡಿ 4 ಇಂಚು ಎತ್ತರ, ಸಪೂರ ಶರೀರ, ಗೋಧಿ ಮೈಬಣ್ಣ, ಕೋಲು ಮುಖ ಹೊಂದಿದ್ದು, ಕನ್ನಡ ಹಾಗೂ ಲಂಬಾಣಿ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಉಡುಪಿ ನಗರ ಪೊಲೀಸ್ ಠಾಣಾಧಿಕಾರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಇತ್ತೀಚಿನ ಸುದ್ದಿ

Exit mobile version