11:08 PM Tuesday 14 - October 2025

ಎಸೆಸೆಲ್ಸಿ ಪರೀಕ್ಷೆ: ಮೊದಲ ದಿನವೇ ಸಿಕ್ಕಿ ಬಿದ್ದ 6 ನಕಲಿ ವಿದ್ಯಾರ್ಥಿಗಳು

chimkodi
28/03/2022

ಚಿಕ್ಕೋಡಿ: ಇಂದು ರಾಜ್ಯದಲ್ಲಿ ಎಸ್ಎಸ್ಎಲ್ ಸಿ ಪರೀಕ್ಷೆಗಳು ಆರಂಭಗೊಂಡಿವೆ. ಮೊದಲ ದಿನವೇ ಆರು ನಕಲಿ ವಿದ್ಯಾರ್ಥಿಗಳು ಚಿಕ್ಕೋಡಿ ಪಟ್ಟಣದ ಆರ್.ಡಿ. ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಸಿಕ್ಕಿಬಿದ್ದಿದ್ದಾರೆ. ಬೇರೆ ವಿದ್ಯಾರ್ಥಿಗಳ ಪರವಾಗಿ ಈ ಆರು ಜನ ಪರೀಕ್ಷೆ ಬರೆಯುತ್ತಿದ್ದರು ಎಂಬುದು ತಿಳಿದುಬಂದಿದೆ.

ಪರೀಕ್ಷೆಗೆ ಹಾಜರಾಗಿದ್ದ ಈ ವಿದ್ಯಾರ್ಥಿಗಳ ಹಾಲ್ ಟಿಕೆಟ್ ಪರಿಶೀಲನೆ ನಡೆಸುವ ವೇಳೆ ಇವರು ಅಸಲಿಯಲ್ಲ, ನಕಲಿ ವಿದ್ಯಾರ್ಥಿಗಳು ಎಂದು ಗೊತ್ತಾಗಿದೆ. ಇನ್ನು ಈ ಆರು ಜನ ಎಕ್ಸ್​ ಟ್ರನಲ್ಸ್​ ವಿದ್ಯಾರ್ಥಿಗಳ ಪರವಾಗಿ ಪರೀಕ್ಷೆ ಬರೆಯಲು ಬಂದಿದ್ದರು.

ಬಂಧಿತರು ರಾಹುಲ್ ಕಿಳ್ಳಿಕೇತರ, ಭಿಮಶಿ ಹುಲಿಕುಂದ, ಕಾರ್ತಿಕ್ ಲಚ್ಚಪ್ಪ ಜಿಕುಂಬಾರ್, ಸಿದ್ದು ಮಾದೇವ್ ಜೋಗಿ, ಮಾಂತೇಶ್ ಸಂಗಪ್ಪ ಡೊಳ್ಳಿನವರ, ಸವಿತಾ ಮಾದೇವ ಹೊಸೂರು ಎಂದು ಗೊತ್ತಾಗಿದೆ. ಚಿಕ್ಕೋಡಿ ಪೊಲೀಸರು ನಕಲಿ ವಿದ್ಯಾರ್ಥಿಗಳ ವಿಚಾರಣೆ ಮುಂದುವರಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ https://chat.whatsapp.com/FZkISFWKknBDvdYkMVFArW

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಪರೀಕ್ಷಾ ಕೇಂದ್ರದಲ್ಲಿಯೇ ಹೃದಯಾಘಾತ: ವಿದ್ಯಾರ್ಥಿನಿ ಸಾವು

ಲಂಚದ ಆರೋಪ:  ನಾವೆಲ್ಲ ಈಶ್ವರಪ್ಪ ಜೊತೆಗಿದ್ದೇವೆ ಎಂದ ರೇಣುಕಾಚಾರ್ಯ!

ಪರೀಕ್ಷಾ ಕೇಂದ್ರಕ್ಕೆ ಹಿಜಾಬ್ ಧರಿಸಿ ಬಂದಿದ್ದ ಶಿಕ್ಷಕಿ ಅಮಾನತು

ಉತ್ತರ ಪ್ರದೇಶ: ಕ್ರಿಮಿನಲ್ ಗಳಿಗೆ ಎನ್ ಕೌಂಟರ್ ಭೀತಿ, ಜನರಿಗೆ ಬುಲ್ಡೋಜರ್ ಭೀತಿ

 

ಇತ್ತೀಚಿನ ಸುದ್ದಿ

Exit mobile version