10:45 AM Saturday 23 - August 2025

ಮುಂದುವರಿದ ತಿಥಿ ಕಾರ್ಡ್ ಫೈಟ್: ಕುಮಾರಸ್ವಾಮಿ ಹೆಸರಿನ ಕೈಲಾಸ ಸಮಾರಾಧನೆ ಚಿತ್ರ ವೈರಲ್!

kumaraswamy
12/06/2022

ಬೆಂಗಳೂರು: ರಾಜ್ಯ ಸಭಾ ಚುನಾವಣೆಯಲ್ಲಿ ಅಡ್ಡಮತದಾನ ಮಾಡಿದ ಕೋಲಾರ ಶಾಸಕ ಕೆ.ಶ್ರೀನಿವಾಸ ಗೌಡ ಹಾಗೂ  ಗುಬ್ಬಿ ಕ್ಷೇತ್ರದ ಶಾಸಕ ಎಸ್.ಆರ್.ಶ್ರೀನಿವಾಸ್ ಅವರ ಕೈಲಾಸ ಸಮಾರಾಧನೆಯ ಚಿತ್ರ ತಯಾರಿಸಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ ಬೆನ್ನಲ್ಲೇ ಇದೀಗ ಇದಕ್ಕೆ ಪ್ರತಿಯಾಗಿ ಹೆಚ್.ಡಿ.ಕುಮಾರಸ್ವಾಮಿಯವರ ಕೈಲಾಸ ಸಮಾರಾಧನೆಯ ಚಿತ್ರವನ್ನು ತಯಾರಿಸಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಲಾಗಿದೆ.

ಕೋಲಾರ ಶಾಸಕ ಕೆ.ಶ್ರೀನಿವಾಸ ಗೌಡ ಹಾಗೂ  ಗುಬ್ಬಿ ಕ್ಷೇತ್ರದ ಶಾಸಕ ಎಸ್.ಆರ್.ಶ್ರೀನಿವಾಸ್ ಅವರು ದುಡ್ಡಿಗಾಗಿ ಜೆಡಿಎಸ್ ಪಕ್ಷ ಹಾಗೂ ಕಾರ್ಯಕರ್ತರಿಗೆ ಮೋಸ ಮಾಡಿದ್ದಾರೆ. ವೋಟು ಹಾಕಿದ ಮತದಾರರ ಪಾಲಿಗೆ ತೀರಿಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಲಾಗಿತ್ತು.

ಕುಮಾರಸ್ವಾಮಿ ಫಾರ್ ಸಿಎಂ ಎಂಬ ಫೇಸ್ ಬುಕ್ ಪೇಜ್ ನಲ್ಲಿ ಶಾಸಕ ಕೆ.ಶ್ರೀನಿವಾಸ ಗೌಡ, ಎಸ್.ಆರ್.ಶ್ರೀನಿವಾಸ್ ಅವರ ಕೈಲಾಸ ಸಮಾರಾಧನೆಯ ಕಾರ್ಡ್ ಶೇರ್ ಮಾಡುತ್ತಿದ್ದಂತೆಯೇ ಇತ್ತ ಕುಮಾರಸ್ವಾಮಿಯವರ ಹೆಸರಿನಲ್ಲಿ ಕೈಲಾಸ ಸಮಾರಾಧನೆಯ ಚಿತ್ರ ತಯಾರಿಸಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಲಾಗಿದೆ.

ಎಚ್.ಡಿ.ಕುಮಾರಸ್ವಾಮಿಯವರ ಕೈಲಾಸ ಸಮಾರಾಧನೆ 22ರಂದು ನಡೆಯಲಿದ್ದು ಮಂಗಳವಾರ ಬೆಳಗ್ಗೆ 10 ಗಂಟೆಗೆ ಬಿಡದಿ ತೋಟದಲ್ಲಿ ಏರ್ಪಡಿಸಲಾಗಿದೆ ಎಂದು ಕಾರ್ಡ್ ನಲ್ಲಿ ಬರೆಯಲಾಗಿದ್ದು, ಇಂತಿ: ದುಃಖತಪ್ತರು ರಾಧಿಕಾ ಕುಮಾರಸ್ವಾಮಿ ಎಂದು ಬರೆದಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಅಡ್ಡಮತದಾನ ಮಾಡಿದವರ ಹೆಸರಲ್ಲಿ ಕೈಲಾಸ ಸಮಾರಾಧನೆ ಪತ್ರ!

ಭಾರತ-ಬಾಂಗ್ಲಾದೇಶಕ್ಕೆ ಅಂತರ್ದೇಶಿಯ ಬಸ್ ಸೇವೆ ಪುನರಾರಂಭ

ಮದುವೆ ಸಂಭ್ರಮದಲ್ಲಿದ್ದ ಜೋಡಿಯ ನೆಮ್ಮದಿ ಕೆಡಿಸಿದ ಸಂಪ್ರದಾಯವಾದಿಗಳು!

ಮೃಗಾಲಯದ ಮುಂದೆ ಕಾಣಿಸಿಕೊಂಡ ವಿಚಿತ್ರ ಜೀವಿ: ಸಿಸಿ ಕ್ಯಾಮರಾದಲ್ಲಿ ದೃಶ್ಯ ಸೆರೆ

ಇತ್ತೀಚಿನ ಸುದ್ದಿ

Exit mobile version