7:19 AM Wednesday 15 - October 2025

ನನ್ನ ಜೀವಿತಾವಧಿಯಲ್ಲಿ ದಲಿತ ಸಿಎಂ ಮಾಡುವ ಪಣತೊಟ್ಟಿದ್ದೇನೆ: ಕುಮಾರಸ್ವಾಮಿ

kumaraswamy
15/04/2022

ಮಂಡ್ಯ: ರಾಜ್ಯದ ಜನ ಜೆಡಿಎಸ್ ನ್ನು ಅಧಿಕಾರಕ್ಕೆ ತಂದರೆ, ನನ್ನ ಜೀವಿತಾವಧಿಯಲ್ಲಿ ದಲಿತ ವ್ಯಕ್ತಿಯನ್ನು ರಾಜ್ಯದ ಮುಖ್ಯಮಂತ್ರಿ ಮಾಡುವ ಪಣತೊಟ್ಟಿದ್ದೇನೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದರು.

ಮಳವಳ್ಳಿಯಲ್ಲಿ ಅಂಬೇಡ್ಕರ್ ಜಯಂತಿಯಲ್ಲಿ ಮಾತನಾಡಿದ ಕುಮಾರಸ್ವಾಮಿ,  ಹಾಸನ ಜಿಲ್ಲಾ ಪಂಚಾಯತ್ ಗೆ ಜೆಡಿಎಸ್ ಪಕ್ಷ ದಲಿತರೊಬ್ಬರನ್ನು  ಅಧ್ಯಕ್ಷರನ್ನಾಗಿ ಮಾಡಿತ್ತು. ಇದೇ ವೇಳೆ ಹೆಚ್.ಡಿ.ರೇವಣ್ಣ ಜಿಲ್ಲಾ ಪಂಚಾಯತ್ ಗೆ ಮೊದಲ ಬಾರಿಗೆ ಆಯ್ಕೆಯಾಗಿದ್ದರು. ಆದರೆ ಅಂದು ಎಂ.ಎ.ಪದವೀಧರನಾಗಿದ್ದ ದಲಿತ ಅಭ್ಯರ್ಥಿಯನ್ನು ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿ ದೇವೇಗೌಡರು ಆಯ್ಕೆ ಮಾಡಿದರು ಎಂದರು.

ರಾಜ್ಯದ ಅಭಿವೃದ್ಧಿಗೆ, ರೈತರ ಕಷ್ಟ ನಿವಾರಣೆಗೆ 5 ವರ್ಷ ಅಧಿಕಾರ ನೀಡಿದರೆ, ನೆನಪಿಟ್ಟುಕೊಳ್ಳುವಂತಹ ಕೆಲಸ ಮಾಡುತ್ತೇನೆ. ಯಾವುದೇ ಪಕ್ಷದ ಮೈತ್ರಿಯ ಹಂಗಿಲ್ಲದೇ ಸ್ವತಂತ್ರವಾಗಿ ರಾಜ್ಯದ ಸೇವೆ ಮಾಡುವ ಅವಕಾಶ ನೀಡಬೇಕು ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1duNIQRfXnJcfQKWPzNqD

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ನಿಮಗಿನ್ನೂ ಅವಕಾಶವಿದೆ: ಹಿಜಾಬ್ ಪರ ವಿದ್ಯಾರ್ಥಿನಿ ಸಿಎಂಗೆ ಹೇಳಿದ್ದೇನು?

ಈಶ್ವರಪ್ಪ ಶೀಘ್ರವೇ ಆರೋಪಗಳಿಂದ ಮುಕ್ತರಾಗುತ್ತಾರೆ: ಸಿಎಂ ಬಸವರಾಜ್ ಬೊಮ್ಮಾಯಿ ವಿಶ್ವಾಸ

ಕೊನೆಗೂ ರಾಜೀನಾಮೆ ಘೋಷಿಸಿದ ಸಚಿವ ಕೆ.ಎಸ್.ಈಶ್ವರಪ್ಪ

ರಾಜ್ಯದ ಉಪಮುಖ್ಯಮಂತ್ರಿಯಾಗಿದ್ದರೂ ನನ್ನನ್ನು ದೇವಸ್ಥಾನದೊಳಗೆ ಬಿಡಲ್ಲ: ಡಾ.ಜಿ.ಪರಮೇಶ್ವರ್

ರಷ್ಯಾದ ಬೃಹತ್ ಯುದ್ಧನೌಕೆಯನ್ನು ಸ್ಫೋಟಿಸಿದ ಉಕ್ರೇನ್

ಇತ್ತೀಚಿನ ಸುದ್ದಿ

Exit mobile version