4:16 AM Thursday 16 - October 2025

ಶಾಸಕನಿಗೆ ಪೊಲೀಸರ ‘ಪ್ಯಾಂಟ್ ಒದ್ದೆ’ ಮಾಡಿಸುವ ಶಕ್ತಿ ಇದೆ ಎಂದ ಕಾಂಗ್ರೆಸ್ ನಾಯಕ!

navjot sidhu
28/12/2021

ಚಂಡೀಗಢ:  ‘ಪೊಲೀಸರ ಪ್ಯಾಂಟ್ ಒದ್ದೆ ಮಾಡಿಸುವ ಶಕ್ತಿ ಶಾಸಕರಿಗಿದೆ’ ಎಂಬಂತಹ ವಿವಾದಾತ್ಮಕ ಹೇಳಿಕೆಯನ್ನು ಮಾಜಿ ಕ್ರಿಕೆಟಿಗ, ಪಂಜಾಬ್​ ಕಾಂಗ್ರೆಸ್​ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ನೀಡಿದ್ದು, ಇದರ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಕಾರ್ಯಕ್ರಮವೊಂದರಲ್ಲಿ ಶಾಸಕ ನವ್​ ತೇಜ್​ ಸಿಂಗ್ ಚೀಮ ಅವರನ್ನು ಬೆಂಬಲಿಸಿ ಮಾತನಾಡುವಾಗ ಸಿಧು ಈ ಪದ ಪ್ರಯೋಗ ಮಾಡಿದ್ದು, ಈ ಹೇಳಿಕೆ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಲಾಗಿದ್ದು, ಸಿಧು ಪೊಲೀಸರ ಕ್ಷಮೆ ಕೇಳಬೇಕು ಎಂಬ ಒತ್ತಾಯ ಕೇಳಿ ಬಂದಿದೆ.

ಪೊಲೀಸರನ್ನು ಅವಮಾನಿಸಿರುವ ಸಿಧು ವಿರುದ್ಧ ಮಾನನಷ್ಟ ನೋಟಿಸ್​ ಜಾರಿ ಮಾಡಲಾಗಿದೆ ಎಂದು ಚಂಡೀಗಢದ ಡಿವೈಎಸ್​ ಪಿ ದಿಲ್ಷರ್ ಸಿಂಗ್​ ಚಾಂಡೇಲ್​ ಹೇಳಿದ್ದಾರೆ. ಮತ್ತೋರ್ವ ಸಬ್​ ಇನ್​ ಸ್ಪೆಕ್ಟರ್​ ರೊಬ್ಬರು ವಿಡಿಯೋ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DbJM9kayC1K4utc3ntXPdh

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಕೊರಗ ಸಮುದಾಯದ ಮೆಹೆಂದಿ ಕಾರ್ಯಕ್ರಮದಲ್ಲಿ ಪೊಲೀಸರಿಂದ ಲಾಠಿ ಚಾರ್ಜ್!

ಜನರಿಗೊಂದು ನ್ಯಾಯ, ನಾಯಕರಿಗೊಂದು ನ್ಯಾಯ: ಬಿಜೆಪಿ ಕಾರ್ಯಕರಣಿ ಸಭೆಯಲ್ಲಿ ಮಾಸ್ಕ್ ಧರಿಸದೇ ನಿರ್ಲಕ್ಷ್ಯ

ಅಂತ್ಯ ಸಂಸ್ಕಾರಕ್ಕೆ ಕೆಲವೇ ನಿಮಿಷ ಬಾಕಿ ಇರುವಾಗ ಕಣ್ತೆರೆದು ಮಾತನಾಡಿದ ವೃದ್ಧ!

ಸೆಲ್ಫಿ ತೆಗೆದುಕೊಳ್ಳಲು ಬಂದ ಬೆಂಬಲಿಗನ ಮೇಲೆ ತಿರುಗಿ ಬಿದ್ದ ಡಿ.ಕೆ.ಶಿವಕುಮಾರ್

ಮಂಡಿ ನೋವಿಗೆ ನಾಟಿ ಚಿಕಿತ್ಸೆಯ ಮೊರೆ ಹೋದ ಸಿಎಂ ಬೊಮ್ಮಾಯಿ

ಇತ್ತೀಚಿನ ಸುದ್ದಿ

Exit mobile version