ನಜರೆತ್ ಶಾಲೆ, ಬಣಕಲ್‌—-ಐ.ಸಿ.ಎಸ್.ಇ. ಮತ್ತು ಐ.ಎಸ್.ಸಿ.  ನೂರಕ್ಕೆ ನೂರು ಫಲಿತಾಂಶ

banakal
01/05/2025

ಬಣಕಲ್: 2024–25ನೇ ಸಾಲಿನ ಐ.ಸಿ.ಎಸ್.ಇ ಹತ್ತನೇ ತರಗತಿ ಹಾಗೂ ಐ.ಎಸ್.ಸಿ 12ನೇ ತರಗತಿಯ ಫಲಿತಾಂಶ ಪ್ರಕಟವಾಗಿದ್ದು, ನಜರೆತ್ ಶಾಲೆ ಬಣಕಲ್ ಶ್ರೇಷ್ಠ ಸಾಧನೆ ದಾಖಲಿಸಿದೆ. ಹತ್ತನೇ ತರಗತಿ ವಿದ್ಯಾರ್ಥಿಗಳು ಸತತ 13ನೇ ವರ್ಷ ಶೇಕಡಾ 100 ಫಲಿತಾಂಶ ಸಾಧಿಸಿ ಶಾಲೆಯ ಹೆಮ್ಮೆ ಹೆಚ್ಚಿಸಿದ್ದಾರೆ. ಇದೇ ವೇಳೆ, 12ನೇ ತರಗತಿಯ ಪ್ರಥಮ ಬ್ಯಾಚ್ ಕೂಡ ಶೇಕಡಾ 100 ಫಲಿತಾಂಶ ಪಡೆದು ಮೆರೆಯುತ್ತಿದೆ.

ಈ ಬಾರಿ ಹತ್ತನೇ ತರಗತಿಯಲ್ಲಿ ಒಟ್ಟು 39 ವಿದ್ಯಾರ್ಥಿಗಳು ಹಾಗೂ 12ನೇ ತರಗತಿಯಲ್ಲಿ ಇಬ್ಬರು ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಎಲ್ಲ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಹತ್ತನೇ ತರಗತಿಯಲ್ಲಿ 24 ವಿದ್ಯಾರ್ಥಿಗಳು ಮತ್ತು 12ನೇ ತರಗತಿಯಲ್ಲಿ ಒಬ್ಬ ವಿದ್ಯಾರ್ಥಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುವುದು ವಿಶೇಷ.

ಶಾಲೆಯ ಪ್ರಥಮ ಸ್ಥಾನವನ್ನು ಮರ್ಕಲ್‌ನ ವಿ. ಚರಣ್ ಕಾರಂತ್ ಮತ್ತು ಬಿ.ಕೆ. ಭವ್ಯಾಯವರ ಮಗ ಸಚಿನ್. ಜಿ.ಸಿ. ಶೇಕಡಾ 96.20% ಅಂಕಗಳೊಂದಿಗೆ ಗಳಿಸಿದ್ದಾರೆ. ಮಲೇಮನೆ ಗ್ರಾಮದ ರಾಜು. ಎಂ.ಎಂ ಮತ್ತು ಹೆಚ್.ಸಿ. ವಿಂದ್ಯಾ ದಂಪತಿಯ ಪುತ್ರ ವಿಹಾನ್. ಆರ್. ಗೌಡ ಶೇಕಡಾ 92% ಅಂಕಗಳೊಂದಿಗೆ ದ್ವಿತೀಯ ಸ್ಥಾನ ಪಡೆದಿದ್ದಾರೆ. ಬಣಕಲ್ ಠಾಣೆಯ ಮುಖ್ಯ ಪೇದೆ ಹೆಚ್.ಎಸ್. ನಂದೀಶ್ ಹಾಗೂ ಶಿಕ್ಷಕಿ ಗಂಗಮ್ಮರವರ ಪುತ್ರ ಸಮೃಧ್. ಹೆಚ್.ಎನ್. ಶೇಕಡಾ 91.40% ಅಂಕಗಳೊಂದಿಗೆ ತೃತೀಯ ಸ್ಥಾನದಲ್ಲಿದ್ದಾರೆ.

ಶಾಲೆಯ ಪ್ರಾಂಶುಪಾಲೆ ಸಿಸ್ಟರ್ ಹಿಲ್ಡ ಲೋಬೋ ಈ ಯಶಸ್ಸನ್ನು ಘೋಷಿಸಿದ್ದು, ವಿದ್ಯಾರ್ಥಿಗಳ ಸಾಧನೆಗೆ ಶಾಲೆಯ ಶಿಕ್ಷಕವೃಂದ, ಪೋಷಕರು ಹಾಗೂ ಆಡಳಿತ ಮಂಡಳಿ ಹರ್ಷ  ವ್ಯಕ್ತಪಡಿಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version