1:52 PM Thursday 16 - October 2025

ತಾನು ತಂಗಿದ್ದ ರೂಮ್ ನಲ್ಲಿಯೇ ನೇಣುಬಿಗಿದು ವಿದ್ಯಾರ್ಥಿ ಆತ್ಮಹತ್ಯೆ

rinu
31/03/2021

ಮಂಗಳೂರು: ವಿದ್ಯಾರ್ಥಿಯೋರ್ವ ತನ್ನ ರೂಮ್ ನಲ್ಲಿಯೇ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬುಧವಾರ ನಡೆದಿದ್ದು, ಮಂಗಳೂರಿನ ಖಾಸಗಿ ಕಾಲೇಜಿನಲ್ಲಿ ಓದುತ್ತಿದ್ದ ವಿದ್ಯಾರ್ಥಿ ತನ್ನ ರೂಮ್ ನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗಿದೆ.

 ಕಡಬ ತಾಲೂಕಿನ ಇಚ್ಲಾಂಪಾಡಿ ಗ್ರಾಮದ 21 ವರ್ಷ ವಯಸ್ಸಿನ ರೀನು ವರ್ಗೀಸ್ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿಯಾಗಿದ್ದಾನೆ. ಮಂಗಳೂರಿನ ಖಾಸಗಿ ಕಾಲೇಜಿನಲ್ಲಿ ಬಿಬಿಎಂ ಓದುತ್ತಿದ್ದ ರೀನು ವರ್ಗೀಸ್ ಬುಧವಾರ ತಾನು ವಾಸವಿದ್ದ ಪಾಂಡೇಶ್ವರದಲ್ಲಿರುವ ರೂಮ್ ನಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

 

ಆತ್ಮಹತ್ಯೆಗೆ ನಿಖರ ಕಾರಣಗಳು ತಿಳಿದು ಬಂದಿಲ್ಲ. ರೀನು ವರ್ಗೀಸ್ ಅವರ ತಂದೆ ಹಾಗೂ ತಾಯಿ ಈ ಹಿಂದೆಯೇ ನಿಧನರಾಗಿದ್ದು, ಅವರಿಗೆ ಏಕೈಕ ಸಹೋದರ ಮಾತ್ರವೇ ಇದ್ದಾರೆ ಎಂದು ತಿಳಿದು ಬಂದಿದೆ. ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಮಾಹಿತಿಗಳಿಗಾಗಿ ನಿರೀಕ್ಷಿಸಲಾಗುತ್ತಿದೆ.

ಇತ್ತೀಚಿನ ಸುದ್ದಿ

Exit mobile version