ಕಾಶಿ ವಿಶ್ವನಾಥನಿಗೆ, ಮಗನ ವಿವಾಹದ ಮೊದಲ ಆಹ್ವಾನ ಪತ್ರಿಕೆ ನೀಡಿದ ನೀತಾ ಅಂಬಾನಿ

ವಾರಣಾಸಿ: ರಿಲಯನ್ಸ್ ಫೌಂಡೇಷನ್ ಅಧ್ಯಕ್ಷೆ ನೀತಾ ಅಂಬಾನಿ ಅವರು ಕಾಶೀ ವಿಶ್ವನಾಥ ದೇಗುಲಕ್ಕೆ ಭೇಟಿ ನೀಡಿ, ತಮ್ಮ ಕಿರಿ ಮಗನ ವಿವಾಹದ ಮೊದಲ ಆಹ್ವಾನ ಪತ್ರಿಕೆಯನ್ನು ಅಲ್ಲಿನ ದೇವರ ಹೆಸರಿಗೆ ನೀಡಿ, ಆಶೀರ್ವಾದವನ್ನು ಪಡೆದರು.
ಮುಂದಿನ ತಿಂಗಳು, ಅಂದರೆ ಜುಲೈ 12ನೇ ತಾರೀಕಿನಂದು ಮುಕೇಶ್– ನೀತಾ ಅಂಬಾನಿ ದಂಪತಿಯ ಮಗ ಅನಂತ್ ಅಂಬಾನಿ ಅವರ ವಿವಾಹವು ಉದ್ಯಮಿ ವಿರೇನ್ ಮರ್ಚೆಂಟ್ ಅವರ ಮಗಳು ರಾಧಿಕಾ ಮರ್ಚೆಂಟ್ ಜತೆಗೆ ನಡೆಯಲಿದೆ. ವಿವಾಹವು ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ನಲ್ಲಿನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆಯಲಿದೆ.
ಈ ಹಿನ್ನೆಲೆಯಲ್ಲಿ ನೀತಾ ಅಂಬಾನಿ ಅವರು ತಮ್ಮ ಮಗನ ಮದುವೆ ಆಹ್ವಾನ ಪತ್ರಿಕೆಯನ್ನು ಮೊದಲನೆಯದಾಗಿ ಕಾಶೀ ವಿಶ್ವನಾಥನಿಗೆ ಸಮರ್ಪಿಸಿದ್ದಾರೆ.
ಈ ವೇಳೆ ಮಾತನಾಡಿದ ಅವರು, ಹತ್ತು ವರ್ಷಗಳ ನಂತರ ಕಾಶಿಗೆ ಬಂದಿದ್ದೇನೆ. ಇಲ್ಲಿ ಆಗಿರುವಂಥ ಅಭಿವೃದ್ಧಿ ಕಾರ್ಯಗಳನ್ನು ನೋಡುವುದಕ್ಕೆ ಬಹಳ ಸಂತೋಷವಾಗುತ್ತದೆ. ಆ ಭಗವಾನ್ ಶಿವನಿಗೆ ನನ್ನ ಪ್ರಾರ್ಥನೆಯನ್ನು ಸಲ್ಲಿಸಿದ್ದೇನೆ.
ಅನಂತ್- ರಾಧಿಕಾ ಮದುವೆ ಆಹ್ವಾನ ಪತ್ರಿಕೆ ದೇವರಿಗೆ ಸಮರ್ಪಿಸುವುದಕ್ಕೆ ಬಂದಿದ್ದೇನೆ. ಆ ದೇವರ ಆಶೀರ್ವಾದ ಸಿಕ್ಕಿರುವುದಕ್ಕೆ ನಾನು ಧನ್ಯಳು. ಇದರ ಜತೆಗೆ ಗಂಗಾ ಆರತಿಯಲ್ಲೂ ಪಾಲ್ಗೊಳ್ಳುವಂಥ ಸಮಯದಲ್ಲಿ ನಾನು ಇಲ್ಲಿದ್ದೇನೆ ಎಂಬುದು ತುಂಬ ದೈವಿಕವಾದ ಸಂಗತಿ. ಇಲ್ಲಿ ಬಹಳ ಶಕ್ತಿ ಇದೆ ಎಂದು ಹೇಳಿದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/JItjEWZ9e5fBWDL6CkTr97