9:39 AM Wednesday 15 - October 2025

ನೋ ಪಾರ್ಕಿಂಗ್ ನಲ್ಲಿದ್ದ ಸವಾರ ಸಹಿತ ಬೈಕ್ ನ್ನು ಹೊತ್ತೊಯ್ದ ಟ್ರಾಫಿಕ್ ಪೊಲೀಸರು!

traffic police
20/08/2021

ಪುಣೆ: ಸವಾರ ಬೈಕ್ ನ ಮೇಲೆ ಕುಳಿತಿರುವಾಗಲೇ, ಸವಾರನ ಸಹಿತ ಬೈಕ್ ನ್ನು  ಟ್ರಾಫಿಕ್ ಪೊಲೀಸರು ಎತ್ತಿಕೊಂಡು ಹೋದ ಅಮಾನವೀಯ ಘಟನೆಯೊಂದು ಪುಣೆಯ ನಾನಾಪೇಠ್ ಪ್ರದೇಶದಲ್ಲಿ ನಡೆದಿದೆ. ಈ ಫೋಟೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗಿದೆ.

ನೋ ಪಾರ್ಕಿಂಗ್  ವಲಯದಲ್ಲಿ ನಿಲ್ಲಿಸಿದ್ದ ಬೈಕ್ ನ್ನು ವಾಹನಕ್ಕೆ ಹಾಕುತ್ತಿರುವ ಸಂದರ್ಭದಲ್ಲಿ ಬೈಕ್ ಸವಾರ ಆಗಮಿಸಿದ್ದು, ಬೈಕ್ ನ್ನು ವಾಹನಕ್ಕೆ ಹಾಕುವ ಸಂದರ್ಭದಲ್ಲಿ ಉದ್ದೇಶ ಪೂರ್ವಕವಾಗಿ ಬೈಕ್ ನ ಮೇಲೆ ಕುಳಿತುಕೊಂಡಿದ್ದಾನೆ ಎಂದು ಪೊಲೀಸರು ಆರೋಪಿಸಿದ್ದಾರೆ.

ಬೈಕ್ ನೋ ಪಾರ್ಕಿಂಗ್ ಜಾಗದಲ್ಲಿರಲಿಲ್ಲ, ಎರಡು ನಿಮಿಷಗಳ ಕಾಲ ರಸ್ತೆ ಬದಿಯಲ್ಲಿ ಬೈಕ್ ನಿಲ್ಲಿಸಿ ಅದರಲ್ಲೇ ಕುಳಿತಿದ್ದ ವೇಳೆ ಸವಾರನ ಸಹಿತ ಬೈಕ್ ನ್ನು ವಾಹನಕ್ಕೆ ಲೋಡ್ ಮಾಡಲಾಗಿದೆ ಎಂದು ಬೈಕ್ ಸವಾರ ಆರೋಪಿಸಿದ್ದಾನೆ.

ಯಾರದ್ದೇ ತಪ್ಪಿರಲಿ, ಆದರೆ ಕಾನೂನು, ನಿಯಮಗಳು ತಿಳಿರುವ ಮತ್ತು ಜವಾಬ್ದಾರಿಯುತ ಸ್ಥಾನದಲ್ಲಿರುವ ಪೊಲೀಸರು ಬೈಕ್ ಸವಾರನನ್ನು ಈ ರೀತಿಯಾಗಿ ವಾಹನಕ್ಕೆ ಲೋಡ್ ಮಾಡಿರುವುದನ್ನು ಒಪ್ಪಲು ಸಾಧ್ಯವಿಲ್ಲ. ಆ ಬೈಕ್ ಸವಾರನಿಗೆ ಏನಾದರೂ ಅಪಾಯ ಸಂಭವಿಸುತ್ತಿದ್ದರೆ, ಅದಕ್ಕೆ ಯಾರು ಹೊಣೆ? ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

ಇನ್ನಷ್ಟು ಸುದ್ದಿಗಳು…

ಬದುಕಿದ್ದ ಯೋಧನ ಮನೆಗೆ ಹೋಗಿ ಸಾಂತ್ವನ ಹೇಳಿದ ಕೇಂದ್ರ ಸಚಿವ: ಜನಾಶೀರ್ವಾದ ಯಾತ್ರೆಯಲ್ಲಿ ಯಡವಟ್ಟು

ಗುಂಪುಗೂಡಬಾರದು ಎನ್ನುತ್ತಲೇ ಬಿಜೆಪಿ ಜನಾಶೀರ್ವಾದ ಜಾತ್ರೆಯ ಬಗ್ಗೆ ಮೌನ ವಹಿಸಿದ ಸಿಎಂ ಬೊಮ್ಮಾಯಿ

ಕಾಂಗ್ರೆಸ್ ಗೆ ಸೇರ್ಪಡೆಗೊಂಡ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಡಾ.ಸಿ.ಎಸ್.ದ್ವಾರಕಾನಾಥ್

ವಿಮಾನದಿಂದ ಬಿದ್ದ ಅಫ್ಘಾನ್ ನ ಇಬ್ಬರು ನಾಗರಿಕರ ಸಾವು ಎಷ್ಟೊಂದು ಭೀಕರವಾಗಿತ್ತು ಗೊತ್ತೆ? | ಸಾವನ್ನು ಕಣ್ಣಾರೆ ಕಂಡವರು ಹೇಳಿದ್ದೇನು?

ಪೆಟ್ರೋಲ್ ಬೆಲೆ ಏರಿಕೆ ಬಗ್ಗೆ ಪ್ರಶ್ನಿಸಿದ್ದಕ್ಕೆ ಅಫ್ಘಾನಿಸ್ತಾನಕ್ಕೆ ಹೋಗಿ ಎಂದ ಬಿಜೆಪಿ ನಾಯಕ!

ಗ್ಯಾಸ್ಟ್ರಿಕ್, ಹುಳಿತೇಗು ಕಿರಿಕಿರಿಯಿಂದ ಮುಕ್ತಿ ಪಡೆಯುವುದು ಹೇಗೆ?

ಇತ್ತೀಚಿನ ಸುದ್ದಿ

Exit mobile version