ಶಾಲೆಗೆ ಹೋದ ನನ್ನ ಮಗಳಿಗೇನಾಯಿತು… ನನ್ನ ಪ್ರಪಂಚವೇ ಛಿದ್ರವಾಯಿತು: ತಾಯಿಯಿಂದ ಕಣ್ಣೀರು

ನವದೆಹಲಿ: ಶಾಲೆಯಲ್ಲಿ ವಿದ್ಯಾರ್ಥಿನಿಯೊಬ್ಬಳು ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆಯ ನಂತರ ಇದೀಗ ವಿದ್ಯಾರ್ಥಿನಿಯ ತಾಯಿ ನ್ಯಾಯಕ್ಕಾಗಿ ಸಾರ್ವಜನಿಕರ ಬಳಿ ಮೊರೆಯಿಟ್ಟು ವಿಡಿಯೋ ಹರಿಯಬಿಟ್ಟಿರುವ ಘಟನೆ ದೆಹಲಿಯಲ್ಲಿ ನಡೆದಿದೆ,
ಸೆಪ್ಟೆಂಬರ್ 4 ರಂದು ನೋಯ್ಡಾದ ಸೆಕ್ಟರ್ 31 ರ ಪ್ರೆಸಿಡಿಯಂ ಶಾಲೆಯಲ್ಲಿ ತನಿಷ್ಕಾ ಶರ್ಮಾ ಎಂಬ ಬಾಲಕಿ ಕುಸಿದು ಬಿದ್ದಿದ್ದಳು. ಆಕೆಯನ್ನು ಶಾಲಾ ಅಧಿಕಾರಿಗಳು ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ಆಕೆ ಮೃತಪಟ್ಟಿದ್ದಾಳೆ ಎಂದು ಘೋಷಿಸಲಾಗಿತ್ತು.
ಘಟನೆ ನಡೆದು ವಾರಗಳ ನಂತರ, ಆಕೆಯ ತಾಯಿ ತ್ರಿಪ್ತಾ ಶರ್ಮಾ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವನ್ನು ಪೋಸ್ಟ್ ಮಾಡಿ, ತನ್ನ ಮಗಳಿಗೆ ನ್ಯಾಯಕ್ಕಾಗಿ ಕರೆ ನೀಡಿದ್ದಾರೆ.
“ಎಲ್ಲರಿಗೂ ನಮಸ್ಕಾರ, ನನ್ನ ಹೆಸರು ತ್ರಿಪ್ತಾ ಶರ್ಮಾ. ನಾನು ತನಿಷ್ಕಾ ಶರ್ಮಾ ಳ ತಾಯಿ. ಅವಳು ನೋಯ್ಡಾದ ಪ್ರೆಸಿಡಿಯಂ ಸೆಕ್ಟರ್ 31 ರ 6 ಬಿ ತರಗತಿಯಲ್ಲಿ ಓದುತ್ತಿದ್ದರು. ಸೆಪ್ಟೆಂಬರ್ 4 ರಂದು, ನಾನು ಅವಳನ್ನು ಶಾಲೆಯಲ್ಲಿ ಬಿಟ್ಟಿದ್ದೆ. ಅಂದು ಶಿಕ್ಷಕರ ದಿನಾಚರಣೆಯಾಗಿತ್ತು. ಬೆಳಿಗ್ಗೆ 11:30 ರ ಸುಮಾರಿಗೆ, ನಿಮ್ಮ ಮಗಳು ಮೂರ್ಛೆ ಹೋಗಿದ್ದಾಳೆಂದು ಶಿಕ್ಷಕರಿಂದ ನನಗೆ ಕರೆ ಬಂತು. ದಯವಿಟ್ಟು ತಕ್ಷಣ ಬನ್ನಿ, ನಾವು ಅವಳನ್ನು ಕೈಲಾಶ್ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದೇವೆ ಎಂದಿದ್ದರು. ನಾನು ಆಸ್ಪತ್ರೆಗೆ ತಲುಪಿದಾಗ, ನನ್ನ ಮಗಳು ಮೃತಪಟ್ಟಿರುವುದಾಗಿ ವೈದ್ಯರು ಹೇಳಿದರು. ಈ ಹೇಳಿಕೆ ನನ್ನ ಇಡೀ ಪ್ರಪಂಚವನ್ನೇ ಛಿದ್ರಗೊಳಿಸಿತು. “ನನ್ನ ಈ ಕೈಗಳಿಂದ. ನಾನು ಅವಳ ಅಂತ್ಯಕ್ರಿಯೆಗಳನ್ನು ಮಾಡಿದ್ದೇನೆ. ನಾನು ಅನುಭವಿಸುತ್ತಿರುವ ನೋವನ್ನು ಪದಗಳಲ್ಲಿ ಹೇಳಲು ಅಸಾಧ್ಯ. ನನ್ನ ಮಗಳು ತೀರಿಕೊಂಡು 15 ದಿನಗಳು ಕಳೆದಿವೆ. ನಾನೇ ಅವಳನ್ನು ಶಾಲೆಯಲ್ಲಿ ಬಿಟ್ಟಿದ್ದೆ. ನಮ್ಮ ಮಕ್ಕಳು ಸುರಕ್ಷಿತವಾಗಿರುತ್ತಾರೆ ಎಂದು ಭಾವಿಸಿ ನಾವು ಕಳುಹಿಸುವ ಸ್ಥಳ ಶಾಲೆಯಾಗಿದೆ. ಆದರೆ ಆ ಶಾಲೆಯಲ್ಲೇ ಇಂತಹ ಘಟನೆಯಾಗಿದೆ ಎಂದು ಕಣ್ಣೀರು ಹಾಕಿದ್ದಾರೆ.
“ಅವಳು ಹಿಂತಿರುಗಿ ಬರುವುದಿಲ್ಲ ಅಂತ ನನಗೆ ಗೊತ್ತು. ಆದರೆ ಕೊನೆಯ ಕ್ಷಣಗಳಲ್ಲಿ ಅವಳಿಗೆ ಏನಾಯಿತು ಎಂದು ತಿಳಿದುಕೊಳ್ಳುವುದು ನಮ್ಮ ಹಕ್ಕು. ನನಗೆ ನ್ಯಾಯ ಬೇಕು. ಮತ್ತು ನನಗೆ ಸತ್ಯ ಬೇಕು” ಎಂದು ಅವರು ಹೇಳಿದರು.
ಘಟನೆಯ ಸಮಯದಲ್ಲಿ ಶಾಲೆಯು, ಹುಡುಗಿ ಆಹಾರ ಸೇವಿಸಿ ಉಸಿರುಗಟ್ಟಿ ಅಸ್ವಸ್ಥಗೊಂಡಿದ್ದಳು ಎನ್ನಲಾಗಿತ್ತು. ನಂತರ ಆಕೆ ಕುಸಿದು ಬಿದ್ದು ಅಸ್ವಸ್ಥಗೊಂಡಿರುವುದಾಗಿ ಹೇಳಲಾಗಿತ್ತು ಇದರ ಬಗ್ಗೆ ಬಾಲಕಿಯ ತಾಯಿ ಅನುಮಾನ ವ್ಯಕ್ತಪಡಿಸಿದ್ದಾರೆ. ಬಾಲಕಿಯ ಕುಟುಂಬವು ಶಾಲಾ ಆಡಳಿತ ಮಂಡಳಿಯ ನಿರ್ಲಕ್ಷ್ಯ ಎಂದು ಆರೋಪಿಸಿದೆ. ಸೆಪ್ಟೆಂಬರ್ 8 ರಂದು ತನ್ನ ಮಗಳ ಸಾವಿಗೆ ಕಾರಣದ ಬಗ್ಗೆ ತನಿಖೆ ನಡೆಸುವಂತೆ ಪೊಲೀಸ್ ದೂರು ದಾಖಲಿಸಿದರು. ಶಾಲೆ ಮತ್ತು ಅದರ ಸಿಬ್ಬಂದಿ ಸದಸ್ಯರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD