4:53 AM Wednesday 15 - October 2025

ಭೀಕರ ಕೊಲೆ: ಒಮಿಕ್ರಾನ್ ಗೆ ಹೆದರಿ ಪತ್ನಿ, ಇಬ್ಬರು ಮಕ್ಕಳನ್ನು ಸುತ್ತಿಗೆಯಿಂದ ಹೊಡೆದು ಬರ್ಬರ ಹತ್ಯೆ

kanpur sushil singh family
04/12/2021

ಕಾನ್ಪುರ: ಒಮಿಕ್ರಾನ್ ಭೀತಿಯಿಂದ ವ್ಯಕ್ತಿಯೋರ್ವ ತನ್ನ ಕುಟುಂಬವನ್ನು ಕೊಂದು ತಾನು ನಾಪತ್ತೆಯಾಗಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದ್ದು, ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಸ್ವಲ್ಪವೂ ಕರುಣೆಯೇ ಇಲ್ಲದೇ ಸುತ್ತಿಗೆಯಿಂದ ಹೊಡೆದು ಭೀಕರವಾಗಿ ಹತ್ಯೆ ಮಾಡಿದ್ದಾನೆ.

ಇಲ್ಲಿನ ರಾಮು ವೈದ್ಯಕೀಯ ಕಾಲೇಜಿನ ವಿಧಿವಿಜ್ಞಾನ ವಿಭಾಗದ ಮುಖ್ಯಸ್ಥನಾಗಿರುವ ಸುಶೀಲ್ ಸಿಂಗ್ ಈ ದುಷ್ಕೃತ್ಯ ಮೆರೆದವನಾಗಿದ್ದು,  ತನ್ನ ಪತ್ನಿ ಚಂದ್ರಪ್ರಭಾ(48), ಪುತ್ರ ಶಿಖರ್ ಸಿಂಗ್(18) ಹಾಗೂ ಪುತ್ರಿ ಖುಷಿ ಸಿಂಗ್(16)ಯನ್ನು ಸುತ್ತಿಗೆಯಿಂದ ಹೊಡೆದು ಬರ್ಬರವಾಗಿ ಹತ್ಯೆ ನಡೆಸಿದ್ದಾನೆ.

ಹತ್ಯೆಯ ಬಳಿಕ ತನ್ನ ಸಹೋದರ ಸುನೀಲ್ ಸಿಂಗ್ ಗೆ  ಈ ಬಗ್ಗೆ ವಾಟ್ಸಾಪ್ ಸಂದೇಶ ಕಳುಹಿಸಿದ್ದ,  ಅವರು ಸ್ಥಳಕ್ಕೆ ಹೋಗಿದ್ದು, ಈ ವೇಳೆ ಇವರು ವಾಸಿಸುತ್ತಿದ್ದ ಫ್ಲ್ಯಾಟ್ ನ ಬಾಗಿಲನ್ನು ಹೊರಗಿನಿಂದ ಲಾಕ್ ಮಾಡಲಾಗಿತ್ತು. ಸ್ಥಳೀಯರ ಸಹಕಾರದೊಂದಿಗೆ ಬಾಗಿಲು ಒಡೆದು ನೋಡಿದಾಗ ಮೂರು ಮೃತದೇಹಗಳು ಭೀಕರ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಮೂವರನ್ನು ಹತ್ಯೆ ಮಾಡಿದ ಬಳಿಕ ಸ್ಥಳದಲ್ಲಿ ಡೆತ್ ನೋಟ್ ಬರೆದಿಟ್ಟು ಸುಶೀಲ್ ಸಿಂಗ್ ನಾಪತ್ತೆಯಾಗಿದ್ದಾನೆ. ಡೆತ್ ನೋಟ್ ನಲ್ಲಿ, “ಒಮಿಕ್ರಾನ್  ಎಲ್ಲರನ್ನೂ ಕೊಲ್ಲುತ್ತದೆ. ಹಾಗಾಗಿ ನಾನು ಎಲ್ಲರನ್ನೂ ಕೊಂದು, ನನ್ನನ್ನು ನಾನೇ ನಾಶ ಮಾಡಿಕೊಳ್ಳುತ್ತೇನೆ ಎಂದು ಬರೆದಿದ್ದಾನೆ. ನಾನು ಗುಣಪಡಿಸಲಾಗದ ಕಾಯಿಲೆಯಿಂದ ಬಳಲುತ್ತಿದ್ದೇನೆ. ನನಗೆ ಬೇರೆ ಭವಿಷ್ಯವಿಲ್ಲ. ನನ್ನ ಕುಟುಂಬವನ್ನು ಕಷ್ಟದಲ್ಲಿ ಬಿಡಲು ನನಗೆ ಇಷ್ಟ ಇಲ್ಲ. ಒಂದೇ ಕ್ಷಣದಲ್ಲಿ ಎಲ್ಲ ತೊಂದರೆಗಳನ್ನು ನಿವಾರಿಸಿಕೊಳ್ಳುತ್ತೇನೆ ಎಂದು ಸುಶೀಲ್ ಸಿಂಗ್ ಬರೆದಿದ್ದಾನೆ.

ಇನ್ನೂ ಸಹೋದರ ಸುನೀಲ್ ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ಸ್ಥಳಕ್ಕೆ ಆಗಮಿಸಿದ ಪೊಲೀಸ್ ಕಮಿಷನರ್ ಅಸೀಮ್ ಅರುಣ್, ಹೆಚ್ಚುವರಿ ಕಮಿಷನರ್ ಆನಂದ್ ಪ್ರಕಾಶ್ ತಿವಾರಿ ಸ್ಥಳ ಪರಿಶೀಲನೆ ನಡೆಸಿದ್ದು, ತನಿಖೆ  ಮುಂದುವರಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಡಿಸೆಂಬರ್ 6ರಂದು ಶಬರಿಮಲೆ ಯಾತ್ರೆಗೆ ಸಿದ್ಧತೆ ನಡೆಸಿದ್ದರಂತೆ ಹಿರಿಯ ನಟ ಶಿವರಾಮ್ 

ಬದುಕಿನ ದಾರಿ ಮುಗಿಸಿ ಹೊರಟೇ ಬಿಟ್ಟರು: ಡಾ.ರಾಜ್ ಕುಮಾರ್, ವಿಷ್ಣುವರ್ಧನ್, ಅಂಬರೀಶ್ ಅವರ ಜೊತೆಗೆ ನಟಿಸಿದ್ದ ಶಿವರಾಮಣ್ಣ

ಪೊಲೀಸರನ್ನು ನಾಯಿಗಳು ಎಂದು ನಿಂದನೆ: ಗೃಹ ಸಚಿವರ ವಿರುದ್ಧವೇ ದೂರು ದಾಖಲು

ಅಂಬೇಡ್ಕರ್ ಪ್ರತಿಮೆಯನ್ನು ತೆರವುಗೊಳಿಸಿದ ನಗರ ಪಾಲಿಕೆ: ಕತ್ತುಕೊಯ್ದುಕೊಂಡು ಯುವಕ ಆತ್ಮಹತ್ಯೆಗೆ ಯತ್ನ

ರಸ್ತೆಗೆ ತೆಂಗಿನ ಕಾಯಿ ಒಡೆದು ಉದ್ಘಾಟನೆ: ತೆಂಗಿನ ಕಾಯಿ ಬದಲು ಬಿರುಕು ಬಿಟ್ಟ ರಸ್ತೆ | ಬಿಜೆಪಿ ಶಾಸಕಿಗೆ ಮುಜುಗರ

ಇತ್ತೀಚಿನ ಸುದ್ದಿ

Exit mobile version