9:50 AM Wednesday 20 - August 2025

ಕಾರಿನ ಮೇಲೆ ಹತ್ತಿದ ಬೃಹತ್ ಟ್ರಕ್; ಬಾಲಕ ಸಹಿತ ಒಂದೇ ಕುಟುಂಬದ ಮೂವರು ಸಾವು

truck runs over hyundai
03/07/2021

ಮುಂಬೈ: ಎರಡು ಕಂಟೈನರ್ ಟ್ರಕ್ ನಡುವೆ ಕಾರೊಂದು ಸಿಲುಕಿದ್ದು, ಈ ವೇಳೆ ಒಂದು ಟ್ರಕ್ ಕಾರಿನ ಮೇಲೆ ಮೇಲೆಯೇ ಹರಿದ ಭೀಕರ ಘಟನೆ ಮುಂಬೈ-ಪುಣೆ ಎಕ್ಸ್ ಪ್ರೆಸ್ ವೇಯಲ್ಲಿ ನಡೆದಿದೆ.

ಘಟನೆಯಲ್ಲಿ ಕಾರಿನಲ್ಲಿದ್ದ ಒಂದೇ ಕುಟುಂಬದ ಮೂವರು  ಸ್ಥಳದಲ್ಲಿಯೇ ಮೃತಪಟ್ಟಿದ್ದು, ಮೃತರ ಪೈಕಿ ಓರ್ವ ನಾಲ್ಕು ವರ್ಷ ವಯಸ್ಸಿನ ಬಾಲಕ ಎಂದು ತಿಳಿದು ಬಂದಿದೆ. ಅಪಘಾತದ ದೃಶ್ಯಗಳು ಅಪಘಾತಕ್ಕೀಡಾದ ಹ್ಯುಂಡೈ ಐ 10 ಕಾರಿನ ಮುಂಭಾಗದಲ್ಲಿದ್ದ ಕ್ಯಾಮರದಲ್ಲಿ ಹಾಗೂ ಟ್ರಕ್ ನ ಹಿಂಭಾಗದಲ್ಲಿದ್ದ ಕ್ಯಾಮರದಲ್ಲಿ ಸೆರೆಯಾಗಿದೆ.

ಇನ್ನೂ ಅಪಘಾತದ ಪರಿಣಾಮ ಕಾರು ನಡು ರಸ್ತೆಯಲ್ಲಿಯೇ ಹೊತ್ತಿ ಉರಿದು ಭಸ್ಮವಾಗಿದೆ. ಇನ್ನೂ ಟ್ರಕ್ ಚಾಲಕ ಕೂಡ ಗಂಭೀರವಾಗಿ ಗಾಯಗೊಂಡಿದ್ದು,  ಆತನನ್ನು ಗಸ್ತು ತಂಡದ ಪೊಲೀಸರು ರಕ್ಷಿಸಿದ್ದಾರೆ.

ಭಾರತದಾದ್ಯಂತ ಕಳೆದ ಒಂದು ವರ್ಷದಲ್ಲಿ ಸುಮಾರು 1.5 ಲಕ್ಷ ಜನರು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ಸರ್ಕಾರ ಹೇಳಿದೆ. ಅಪಘಾತಗಳಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ.

ಇತ್ತೀಚಿನ ಸುದ್ದಿ

Exit mobile version