11:06 PM Tuesday 2 - December 2025

ಆಕ್ಸಿಜನ್ ದುರಂತ: ಸಂತ್ರಸ್ತ ಕುಟುಂಬಸ್ಥರಿಗೆ 50 ಲಕ್ಷ ಪರಿಹಾರ ನೀಡಬೇಕು |  ಸಿಎಂಗೆ ಎಸ್ ಡಿಪಿಐ ಮನವಿ

sdpi
29/06/2021

ಚಾಮರಾಜನಗರ: ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ನಡೆದ ಆಕ್ಸಿಜನ್ ದುರ್ಘಟನೆಯಲ್ಲಿ ಸಾವಿಗೀಡಾಗಿದವರ ಕುಟುಂಬಸ್ಥರಿಗೆ ನ್ಯಾಯ ಕಲ್ಪಿಸುವ ನಿಟ್ಟಿನಲ್ಲಿ ಸಂತ್ರಸ್ತ ಕುಟುಂಬಸ್ಥರಿಗೆ 50 ಲಕ್ಷ ಪರಿಹಾರ ನೀಡಬೇಕು ಹಾಗೂ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಎಸ್ ಡಿಪಿಐ ಆಗ್ರಹಿಸಿದೆ.

ಈ ಸಂಬಂಧ ಇಂದು ಚಾಮರಾಜನಗರ ಜಿಲ್ಲಾ  ಸಮಿತಿಯ ವತಿಯಿಂದ ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರ ಕಾರ್ಯಾಲಯಕ್ಕೆ ಭೇಟಿ ನೀಡಿದ ಪಕ್ಷದ ಮುಖಂಡರು, ಪ್ರಾದೇಶಿಕ ಆಯುಕ್ತರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದಾರೆ.

ಈ ವೇಳೆ ಮಾತನಾಡಿದ ರಾಜ್ಯ ಕಾರ್ಯದರ್ಶಿಯಾದ ಅಬ್ರಾರ್ ಅಹಮದ್, ಘಟನೆಯಲ್ಲಿ ಸಾವಿಗೀಡಾಗಿದವರ ಕುಟುಂಬಸ್ಥರಿಗೆ ನ್ಯಾಯ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ಪ್ರತಿ ಕುಟುಂಬ ಒಂದಕ್ಕೆ ತಲಾ 50 ಲಕ್ಷ ಪರಿಹಾರ ನೀಡ ಬೇಕು ಹಾಗೂ ಈ ಘಟನೆಗೆ ಚಾಮರಾಜನಗರ ಜಿಲ್ಲಾ ಅಧಿಕಾರಿಗಳು ಸೇರಿದಂತೆ ಕಾರಣಕರ್ತರಾದ ಇನ್ನಿತರ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿದರು.

ಹೈಕೋರ್ಟ್ ನ ನ್ಯಾಯಧೀಶರಾದ ವೇಣುಗೋಪಾಲ್ ಗೌಡರವರು ನೀಡಿದ ವರದಿಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲದ ಕಾರಣ ಇಲ್ಲಿಯವರೆಗೂ ಅಧಿಕಾರಿಗಳ ವಿರುದ್ಧ ಕ್ರಮ ಆಗಿಲ್ಲ. ಅಲ್ಲದೇ ಘಟನೆಯಲ್ಲಿ ಸಾವಿಗೀಡಾದ ಎಲ್ಲ 37 ಮಂದಿಯ ಕುಟುಂಬಸ್ಥರಿಗೆ ಪ್ರಾಥಮಿಕ ಪರಿಹಾರದ ಮೊತ್ತ ಸಹ ನೀಡಿಲ್ಲದಿರುವುದು ಸರ್ಕಾರದ ಜನ ವಿರೋಧಿ ನೀತಿಯ ಮುಂದುವರಿದ ಭಾಗವಾಗಿದೆ ಎಂದು  ಅಭಿಪ್ರಾಯಿಸಿದರು.

ಇತ್ತೀಚಿನ ಸುದ್ದಿ

Exit mobile version