4:50 AM Wednesday 22 - October 2025

ಇಂಡಿಗೋ ವಿಮಾನದಲ್ಲಿ ಇರಲಿಲ್ಲ ಎಸಿ: ಭಯಾನಕ ಅನುಭವ ಹಂಚಿಕೊಂಡ ಕಾಂಗ್ರೆಸ್ ಮುಖಂಡ

07/08/2023

ಪಂಜಾಬ್​ನ ಕಾಂಗ್ರೆಸ್ ನಾಯಕ ಅಮರಿಂದರ್ ಸಿಂಗ್ ಅವರು ತಮಗೆ ಇಂಡಿಗೋ ವಿಮಾನದಲ್ಲಾದ ಕಹಿ ಅನುಭವವನ್ನು ಹಂಚಿಕೊಂಡಿದ್ದಾರೆ. ಅವರು ಚಂಡೀಗಢದಿಂದ ಜೈಪುರಕ್ಕೆ ಇಂಡಿಗೋ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು. ಆ ವಿಮಾನದಲ್ಲಿ ಎಸಿ ಇರಲಿಲ್ಲ. ವಿಮಾನ ಸಿಬ್ಬಂದಿ ಬೆವರು ಒರೆಸಿಕೊಳ್ಳಲು ಪ್ರಯಾಣಿಕರಿಗೆ ಟಿಶ್ಯೂ ನೀಡಿದ್ದರು ಎಂದು ಟ್ವಿಟ್ಟರ್​ನಲ್ಲಿ ಬರೆದುಕೊಂಡಿದ್ದಾರೆ. ಈ 90 ನಿಮಿಷಗಳ ಪ್ರಯಾಣ ಅತ್ಯಂತ ಭಯಾನಕವಾಗಿತ್ತು ಎಂದು ಹೇಳಿಕೊಂಡಿದ್ದಾರೆ.
ಈ ಬಗ್ಗೆ ದೂರಿದ ಕಾಂಗ್ರೆಸ್ ಮುಖಂಡರು, ಮೊದಲು ಪ್ರಯಾಣಿಕರನ್ನು ಬಿಸಿಲಿನ ತಾಪದಲ್ಲಿ ಸುಮಾರು 10-15 ನಿಮಿಷಗಳ ಕಾಲ ಸರದಿಯಲ್ಲಿ ಕಾಯುವಂತೆ ಮಾಡಲಾಯಿತು. ನಂತರ ಎಸಿ ಆನ್ ಮಾಡದೇ ವಿಮಾನ ಟೇಕ್ ಆಫ್ ಆಯಿತು ಎಂದು ಹೇಳಿದರು. ಟೇಕ್‌ಆಫ್‌ನಿಂದ ಲ್ಯಾಂಡಿಂಗ್‌ವರೆಗೆ ಎಸಿ ಗಳು ಆಫ್ ಆಗಿದ್ದವು ಮತ್ತು ಎಲ್ಲಾ ಪ್ರಯಾಣಿಕರು ಕಷ್ಟ ಪಡುವಂತಾಗಿತ್ತು.
ವೀಡಿಯೋದಲ್ಲಿ ಪ್ರಯಾಣಿಕರಿಗೆ ಟಿಶ್ಯೂ ಪೇಪರ್ ಕೊಡುತ್ತಿರುವುದನ್ನು ಕಾಣಬಹುದು. ಸಿಂಗ್ ಅವರು ನಾಗರಿಕ ವಿಮಾನಯಾನ ನಿರ್ದೇಶನಾಲಯ ಹಾಗೂ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರವನ್ನು ಟ್ಯಾಗ್ ಮಾಡಿ, ವಿಮಾನಯಾನ ಸಂಸ್ಥೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ವಾರದಲ್ಲಿ ಎರಡನೇ ಬಾರಿ ಇಂತಹ ಘಟನೆ ನಡೆದಿದೆ. ದೆಹಲಿಗೆ ಹಾರುತ್ತಿದ್ದ ಇಂಡಿಗೋ ವಿಮಾನದ ಇಂಜಿನ್‌ನಲ್ಲಿ ದೋಷ ಕಾಣಿಸಿಕೊಂಡ ಕಾರಣ ಶುಕ್ರವಾರ ಪಾಟ್ನಾ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿತ್ತು.

 

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ74835 51849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/BnbLYSQaXK1Hate4P0Bt3B

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ

Exit mobile version