11:12 AM Thursday 15 - January 2026

ತಡರಾತ್ರಿ ಫೋನ್ ನಲ್ಲಿ ಮಾತನಾಡಿದ್ದಕ್ಕೆ ಪತ್ನಿಯನ್ನು ಗುಂಡಿಟ್ಟು ಕೊಂದ ಪತಿ!

meerath
05/09/2021

ಮೀರತ್:  ತಡರಾತ್ರಿ ಪತ್ನಿ ಫೋನ್ ನಲ್ಲಿ ಮಾತನಾಡುತ್ತಿದ್ದಳು ಎಂದು ಪತಿಯೋರ್ವ ಪತ್ನಿಯನ್ನು ಗುಂಡಿಟ್ಟು ಹತ್ಯೆ ಮಾಡಿದ ಘಟನೆ  ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯಲ್ಲಿ ನಡೆದಿದ್ದು, ಆರೋಪಿ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ.

36 ವರ್ಷ ವಯಸ್ಸಿನ ಶಮಾ ಹತ್ಯೆಗೀಡಾದವರಾಗಿದ್ದು, ತಡ ರಾತ್ರಿ ವೇಳೆ ಫೋನ್ ನಲ್ಲಿ ಅವರು ಮಾತನಾಡುತ್ತಿದ್ದು, ಇದನ್ನು ಕಂಡ ಪತಿ ಫಾಝಿಲ್ ಗುಂಡು ಹಾರಿಸಿದ್ದಾನೆ. ಮದುವೆಯಾಗಿ 7 ತಿಂಗಳಲ್ಲಿಯೇ ಫಾಝಿಲ್ ಗೆ ಪತ್ನಿಗೆ ಅಕ್ರಮ ಸಂಬಂಧ ಇದೆ ಎಂಬ ಅನುಮಾನ ಇತ್ತು ಎನ್ನಲಾಗಿದೆ. ರಾತ್ರಿ ವೇಳೆ ಪತ್ನಿ ಫೋನ್ ನಲ್ಲಿ ಮಾತನಾಡುತ್ತಿರುವುದನ್ನು ಕಂಡು ಕೆಂಡಾಮಂಡಲವಾಗಿದ್ದ ಆತ ಪತ್ನಿಯನ್ನು ಗುಂಡು ಹಾರಿಸಿ ಹತ್ಯೆ ಮಾಡಿದ್ದಾನೆ ಎಂದು ಹೇಳಲಾಗಿದೆ.

ಶುಕ್ರವಾರ ತಡರಾತ್ರಿ ಈ ಘಟನೆ ನಡೆದಿದೆ.  ಶಮಾ ಅವರ ಮನೆಯಿಂದ ಗುಂಡಿನ ಶಬ್ಧ ಕೇಳಿದ್ದರಿಂದಾಗಿ ಶಮಾ ಅವರ ಸಹೋದರ ನೆರೆಹೊರೆಯವರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಸ್ಥಳಕ್ಕೆ ಬಂದು ನೋಡಿದಾಗ ಶಮಾಳನ್ನು ಗುಂಡು ಹಾರಿಸಿ ಹತ್ಯೆ ಮಾಡಿರುವುದು ಪತ್ತೆಯಾಗಿದೆ. ಇನ್ನೂ ಘಟನೆಯ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.

ಇನ್ನಷ್ಟು ಸುದ್ದಿಗಳು…

ದೆಹಲಿ ಪೊಲೀಸ್ ಸಬಿಯಾ ಸೈಫಿ ಸಾಮೂಹಿಕ ಅತ್ಯಾಚಾರ, ಬರ್ಬರ ಹತ್ಯೆ | 50 ಬಾರಿ ಚುಚ್ಚಿದರು, ಅಂಗಾಂಗ ಕತ್ತರಿಸಿದರು!

ಹಾರ, ತುರಾಯಿ ಸನ್ಮಾನ ಪಡೆದ ಸಿಎಂ ಬಸವರಾಜ್ ಬೊಮ್ಮಾಯಿ! | ಆದೇಶ ಪಾಲಿಸಬೇಕಾದವರು ಯಾರು?

8 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ, ಹತ್ಯೆ | ಅಪರಾಧಿಗೆ ಮರಣದಂಡನೆ

ನಿಫಾ ವೈರಸ್ ಗೆ 12 ವರ್ಷ ವಯಸ್ಸಿನ ಬಾಲಕ ಬಲಿ!

ಶಾಸಕ ದಂಪತಿಗೆ ಹೂವಿನ ಮಳೆ ಸುರಿಸಿದ ಪೊಲೀಸ್ ಅಧಿಕಾರಿಗಳ ವಿರುದ್ಧ ನೋಟಿಸ್!

ಇತ್ತೀಚಿನ ಸುದ್ದಿ

Exit mobile version