2:43 AM Wednesday 15 - October 2025

ಫೋಟೋ ತೆಗೆಯಲು ಯತ್ನಿಸಿದವರ ಮೇಲೆ ದಾಳಿ ನಡೆಸಿದ ಆನೆ!

02/11/2020

ಗೋಣಿಕೊಪ್ಪಲು: ಸಾಕಾನೆಯ ಫೋಟೋ ತೆಗೆಯಲು ಬೈಕ್ ಸವಾರರಿಬ್ಬರು ಯತ್ನಿಸಿದ್ದು, ಈ ವೇಳೆ ಕೆರಳಿದ ಆನೆ ಅವರ ಮೇಲೆ ದಾಳಿ ಮಾಡಿದ ಘಟನೆ ರಾಜ್ಯ ಹೆದ್ದಾರಿಯಲ್ಲಿ ಭಾನುವಾರ ಸಂಜೆ ನಡೆದಿದೆ.


ಬೈಕ್‌ನಲ್ಲಿ ಇಬ್ಬರು ತಿತಿಮತಿ ಕಡೆಯಿಂದ ಆನೆಚೌಕೂರಿನತ್ತ ತೆರಳುತ್ತಿದ್ದಾಗ ಮತ್ತಿಗೋಡು ಶಿಬಿರದ ರಸ್ತೆ ಬದಿಯಲ್ಲಿ ಭೀಮ ಎಂಬ ಆನೆ ನಿಂತಿತ್ತು. ಈ ವೇಳೆ ಬೈಕ್ ಸವಾರರು ಆನೆಯ ಫೋಟೋ ತೆಗೆಯಲು ಮುಂದಾಗಿದ್ದಾರೆ. ಫೋಟೋ ತೆಗೆಯಲು ಮುಂದಾಗುತ್ತಿದ್ದಂತೆಯೇ ಆನೆ ಕೆರಳಿ ಅವರ ಮೇಲೆ ದಾಳಿ ನಡೆಸಲು ಮುಂದಾಗಿದೆ. ಆಗ ಬೈಕ್ ಸವಾರರು ಬೈಕ್ ನ್ನು ಅಲ್ಲೇ ಬಿಟ್ಟು ಪರಾರಿಯಾಗಿ ಜೀವ ಉಳಿಸಿಕೊಂಡಿದ್ದಾರೆ.


ಘಟನೆಯ ನಡೆದ ತಕ್ಷಣವೇ ಸ್ಥಳದಲ್ಲಿ ಗೊಂದಲಕರ ಸ್ಥಿತಿ ನಿರ್ಮಾಣವಾಗಿತ್ತು. ತಕ್ಷಣವೇ ಆನೆ ಮಾವುತರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ. ಬೈಕ್ ನ್ನು ಸ್ಥಳದಿಂದ ತೆರವುಗೊಳಿಸಿ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ.


ಇತ್ತೀಚಿನ ಸುದ್ದಿ

Exit mobile version