ಪ್ರಧಾನಿ ಮೋದಿಯ ತಾಯಿ ನಿಧನ: ತಾಯಿಯ ಪಾರ್ಥೀವ ಶರೀರಕ್ಕೆ ಹೆಗಲುಕೊಟ್ಟ ಪ್ರಧಾನಿ

hiraben modi
30/12/2022

ಅಹ್ಮದಾಬಾದ್: ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್ ಮೋದಿ ಅವರು ನಿಧನರಾಗಿದ್ದು, ತಾಯಿಯ ನಿಧನದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಭಾವುಕರಾಗಿ ಟ್ವೀಟ್ ಮಾಡಿದ್ದಾರೆ.

ನಮ್ಮ ತಾಯಿಯ ಜೀವನದ ಮೂರು ಹಂತ ಕಂಡಿದ್ದೇನೆ. ತಪಸ್ವೀ ಬದುಕು, ನಿಸ್ವಾರ್ಥತೆ ಪ್ರತೀಕ, ಮೌಲ್ಯಾಧಾರಿತ ಬದ್ಧತೆ ಎಂದು ಸಂತಾಪ ಸೂಚಿಸಿದ್ದಾರೆ.

ಅವರಿಗೆ 100 ವರ್ಷ ಪೂರ್ಣವಾದಾಗ ಆಶೀರ್ವಾದ ಪಡೆಯಲು ಭೇಟಿ ನೀಡಿದ್ದೆ. ಆಗ ಅವರು ನೀಡಿದ ಹಿತ ವಚನ ನೆನಪಾಗುತ್ತಿದೆ. ಯಾವಾಗಲೂ ಬುದ್ಧಿವಂತಿಕೆಯಿಂದ ಕೆಲಸಗಳನ್ನು ಮಾಡಿ, ಪರಿಶುದ್ಧತೆಯಿಂದ ಬದುಕಿರಿ ಎಂದು ಹೇಳಿದ್ದರು ಎಂದು ಪ್ರಧಾನಿ ನೆನಪಿಸಿಕೊಂಡಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ತಾಯಿ ಹೀರಾಬೆನ್ ಮೋದಿ ಅವರ ಅಂತ್ಯಕ್ರಿಯೆ ಇದೇ ನಡೆಯಲಿದ್ದು, ಅಹ್ಮದಾಬಾದ್ ತಲುಪಿರುವ ಪ್ರಧಾನಿ ಮೋದಿಯವರು ತಾಯಿಯ ಪಾರ್ಥೀವ ಶರೀರವನ್ನು ಹೆಗಲ ಮೇಲೆ ಹೊತ್ತು ಅಂತಿಮ ಯಾತ್ರೆಯಲ್ಲಿ ಸಾಗಿದರು.

ಮೋದಿಯವರ ಸಹೋದರ ಪ್ರಹ್ಲಾದ್ ಮೋದಿಯವರ ಮನೆಯಿಂದ ಹೀರಾಬೆನ್ ಅವರ ಅಂತಿಮ ಯಾತ್ರೆ ಸಾಗಿದ್ದು, ಈ ವೇಳೆ ತಾಯಿಯ ಪಾರ್ಥೀವ ಶರೀರಕ್ಕೆ ಹೆಗಲುಕೊಟ್ಟು ಸಾಗಿದರು.

ತಾಯಿಯ ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಪಡಿಸಿ ಅಹ್ಮದಾಬಾದ್’ಗೆ ತಲುಪಿದರು. ನಂತರ ತಾಯಿಯ ಅಂತಿಮ ದರ್ಶನ ಪಡೆದ ಮೋದಿಯವರು, ಕಾಲಿಗೆ ನಮಸ್ಕರಿಸಿ ಪಾರ್ಥೀವ ಶರೀರಕ್ಕೆ ಹೆಗಲುಕೊಟ್ಟು ನಡೆದರು. ಹೀರಾಬೆನ್ ಅವರ ಅಂತಿಮ ಸಂಸ್ಕಾರ ಗಾಂಧಿನಗರದ ಸೆಕ್ಟರ್ 30ರ ರುದ್ರಭೂಮಿಯಲ್ಲಿ ನಡೆಯಲಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ

Exit mobile version