1:12 AM Wednesday 22 - October 2025

ಸೆಲೆಬ್ರೆಟಿಗಳೊಂದಿಗೆ ಪ್ರಧಾನಿ ಮೋದಿ ಸಂವಾದ: ಪ್ರಧಾನಿಗೆ ಸೆಲೆಬ್ರೆಟಿಗಳು ಇಟ್ಟ ಬೇಡಿಕೆ ಏನು?

pm modi with celebrities
13/02/2023

ಬೆಂಗಳೂರು:  ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಪದೇ ಪದೇ ಭೇಟಿ ನೀಡುತ್ತಿದ್ದು ಈ ನಡುವೆ ರಾಜ್ಯದ ಸೆಲೆಬ್ರಿಟಿಗಳ ಜೊತೆ ಸಂವಾದ ನಡೆಸಿ ಚರ್ಚಿಸಿದ್ದಾರೆ.

ಇಂದು ಬೆಂಗಳೂರಿನ ಯಲಹಂಕ ವಾಯುನೆಯಲ್ಲಿ ಏರೋ ಇಂಡಿಯಾ ಶೋಗೆ ಚಾಲನೆ ನೀಡಿದರು. ಹಾಗೆಯೇ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯದ ಸೆಲೆಬ್ರಿಟಿಗಳ ಜೊತೆ ಔತಣಕೂಟದಲ್ಲಿ ಪಾಲ್ಗೊಂಡಿದ್ದರು.

ನಟ ಯಶ್, ರಿಷಿಬ್ ಶೆಟ್ಟಿ ವಿಜಯ್ ಕಿರಗಂದೂರು,  ಅಶ್ವಿನಿ ಪುನಿತ್ ರಾಜ್ ಕುಮಾರ್, ಆರ್. ಜೆ ಶ್ರದ್ಧಾ,  ಕ್ರಿಕೆಟಿಗರಾದ ಜಾವಗಲ್ ಶ್ರೀನಾಥ್ ಅನಿಲ್ ಕುಂಬ್ಳೆ, ಮನಿಷ್ ಪಾಂಡೆ , ಮಾಯಾಂಕ್ ಅಗರ್ವಾಲ್ ಭೇಟಿ ಮಾಡಿ ಸಂವಾದ ನಡೆಸಿದರು.

ಇದೇ ವೇಳೆ ಪ್ರಧಾನಿ ಮೋದಿ ಬಳಿ ಚಿತ್ರರಂಗದ ಬೆಳವಣಿಗೆ ಬಗ್ಗೆ ಚರ್ಚೆ ನಡೆಸಿದ ನಟ ಯಶ್ ಕೊರಿಯಾ ಮಾದರಿ ಫೀಲ್ಮಂ ಸಿಟಿ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಫಿಲ್ಮ ಸಿಟಿ ಆದ್ರೆ ವಿದೇಶಕ್ಕೆ ಹೋಗೋದು ತಪ್ಪುತ್ತದೆ. ವಿದೇಶದಂತೆ ಭಾರತೀಯ ಚಿತ್ರರಂಗಕ್ಕೂ ಸೌಲಭ್ಯ ಕಲ್ಪಿಸಿ ಎಂದು ಮನವಿ ಮಾಡಿದ್ದಾರೆ ಎನ್ನಲಾಗಿದೆ

ದಕ್ಷಿಣ  ಭಾರತದ ಚಿತ್ರರಂಗದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಪ್ರಧಾನಿ ಮೋದಿ, ದಕ್ಷಿಣ ಭಾರತದ ಚಿತ್ರರಂಗ ಮಹಿಳೆಯರಿಗೆ ಅತಿ ಹೆಚ್ಚು ಮಹತ್ವ ಕೊಟ್ಟಿದೆ.   ದಕ್ಷಿಣ ಭಾರತದ ಸಂಸ್ಕೃತಿ ಆಸ್ಮಿತೆಯನ್ನ ದೇಶಕ್ಕೆ ಪರಿಚಯಿಸಿದೆ ಎಂದಿದ್ದಾರೆ.

ಇನ್ನು ಸ್ಟಾರ್ಟಪ್ ನಲ್ಲಿ ಕ್ರೀಡೆ ಉತ್ತೇಜನ ಕುರಿತು ಮಾಜಿ ಹಾಲಿ ಕ್ರಿಕೆಟಿಗರ ಜತೆ ಪ್ರಧಾನಿ ಮೋದಿ ಚರ್ಚೆ ನಡೆಸಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ

Exit mobile version