ಇಂದು 6 ಗಂಟೆಗೆ ಸಂದೇಶ ನೀಡಲಿದ್ದೇನೆ ಎಂದ ಪ್ರಧಾನಿ ನರೇಂದ್ರ ಮೋದಿ
20/10/2020
ನವದೆಹಲಿ: ಇಂದು ಸಂಜೆ ಆರು ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಸಂದೇಶವೊಂದನ್ನು ನೀಡಲಿದ್ದಾರೆ ಎಂದು ಅವರು ಟ್ವೀಟ್ ಮಾಡಿದ್ದು, ಆದರೆ ಯಾವ ವಿಚಾರದ ಬಗ್ಗೆ ಎಂದು ಇನ್ನೂ ತಿಳಿದು ಬಂದಿಲ್ಲ.
ತಮ್ಮ ಅಧಿಕೃತ ಟ್ಟಿಟ್ಟರ್ ನಲ್ಲಿ ಪ್ರಧಾನಿ ಮೋದಿ ಅವರು ಈ ಸಂದೇಶವನ್ನು ಹಂಚಿಕೊಂಡಿದ್ದಾರೆ. ದೇಶದ ಜನತೆಗೆ ನಾನು ಇಂದು 6 ಗಂಟೆಗೆ ಸಂದೇಶವನ್ನು ನೀಡಲಿದ್ದೇನೆ ಎಂದು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಯಾವ ವಿಚಾರದಲ್ಲಿ ಸಂದೇಶ ನೀಡಲಿದ್ದಾರೆ ಎಂಬುವುದನ್ನು ತಿಳಿಸಿಲ್ಲ. ಕೊವಿಡ್ ವಿಚಾರದಲ್ಲಿ ಏನಾದರೂ ಅವರು ಘೋಷಣೆ ಮಾಡಬಹುದೇ? ಉದ್ಯೋಗದ ವಿಚಾರದಲ್ಲಿ ಏನಾದರೂ ಘೋಷಣೆಯನ್ನು ಮಾಡುತ್ತಾರೆಯೇ? ಅತ್ಯಾಚಾರ ಪ್ರಕರಣಗಳ ಬಗ್ಗೆ ಏನಾದರೂ ಪ್ರಧಾನಿ ಧ್ವನಿಯೆತ್ತುತ್ತಾರೆಯೇ ಎಂಬ ಬಗ್ಗೆ ಜನರು ನಿರೀಕ್ಷೆ ಇಟ್ಟುಕೊಂಡಿದ್ದಾರೆ.
























