ಪಿಂಕ್ ವಾಟ್ಸಾಪ್ ಬಗ್ಗೆ ಎಚ್ಚರಿಕೆ ನೀಡಿದ ಪೊಲೀಸರು!

ಜನಪ್ರಿಯ ಸಾಮಾಜಿಕ ಜಾಲತಾಣ ವಾಟ್ಸಾಪ್ ನಲ್ಲಿ ಹರಿದಾಡುತ್ತಿರುವ ಪಿಂಕ್ ವಾಟ್ಸಾಪ್ ಎಂಬ ಫೇಕ್ ಲಿಂಕ್ ಬಗ್ಗೆ ಕರ್ನಾಟಕ ಪೊಲೀಸರು ಎಚ್ಚರಿಕೆ ನೀಡಿದ್ದು, ಇದನ್ನು ಬಳಸುವವರ ಮೋಸಗಳಿಗೆ ಗುರಿಯಾಗಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.
ಸಾಕಷ್ಟು ಸಮಯಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಪಿಂಕ್ ವಾಟ್ಸಾಪ್ ಎಂಬ ಲಿಂಕ್ ಹರಿದಾಡಿತ್ತು. ಒಂದು ಬಾರಿ ಈ ಲಿಂಕ್ ನ್ನು ಯಾರಾದರೂ ಕ್ಲಿಕ್ ಮಾಡಿದರೆ, ಮತ್ತೆ ಅವರು ಜಾಯಿನ್ ಆಗಿರುವ ಎಲ್ಲ ಗ್ರೂಪ್ ಗಳಲ್ಲಿ ಅವರ ನಂಬರ್ ನಿಂದ ಅವರಿಗೆ ಅರಿವಿಲ್ಲದೆಯೇ ಪಿಂಕ್ ವಾಟ್ಸಾಪ್ ಗೆ ಜಾಯಿನ್ ಆಗಿ ಅಂತ ಮೆಸೆಜ್ ಸೆಂಡ್ ಆಗುತ್ತಿತ್ತು. ಇದೊಂದು ವಿನೋದದ ಲಿಂಕ್ ಎಂದೇ ಎಲ್ಲರೂ ಭಾವಿಸಿದ್ದರು. ಆದ್ರೆ, ಇದೀಗ ಈ ಲಿಂಕ್ ಅಪಾಯಕಾರಿ ಎಂದು ಪೊಲೀಸರು ಜಾಗೃತಿ ಮೂಡಿಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್(X)ನಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಿರುವ ಪೊಲೀಸರು ಗುಲಾಬಿ ಬಣ್ಣದ ವಾಟ್ಸ್ ಆಪ್ ಅಪಾಯಕಾರಿ ಎಚ್ಚರಿಕೆಯಿಂದಿರಿ. ಆಕರ್ಷಣೆಯ ಗುಲಾಬಿ ಬಣ್ಣದ ವಾಟ್ಸ್ ಅಪ್ (Apk) ಬಳಸುವವರನ್ನು ಗುರಿಯಾಗಿಸಿ ಮೋಸಗಾರರು ಡೇಟಾ ಕದಿಯಲು ಇಲ್ಲವೇ Android ಮೊಬೈಲ್ ಹ್ಯಾಕ್ ಮಾಡಲು ಬಳಸಿಕೊಳ್ಳುತ್ತಾರೆ. ಜಾಗೃತೆಯಿಂದಿರಿ ಎಂದು ಎಚ್ಚರಿಸಿದ್ದಾರೆ.
ಡೇಟಾ ಕದಿಯೋದು ಅಂದ್ರೇನು?:
ಪಿಂಕ್ ವಾಟ್ಸಾಪ್ ಮೊಬೈಲ್ ನಲ್ಲಿ ಇನ್ಸ್ ಸ್ಟಾಲ್ ಮಾಡಿದ್ರೆ ನಿಮ್ಮ ಫೋನ್ ಗಳಲ್ಲಿರುವ ಫೋಟೋ, ಫೋನ್ ನಂಬರ್ ಗಳು, ನೆಟ್ ಬ್ಯಾಂಕಿಂಗ್ ನ ಪಾಸ್ ವರ್ಡ್ ಗಳು, ಎಸ್ ಎಂ ಎಸ್ ಇವೆಲ್ಲವೂ ಹ್ಯಾಕ್ ಆಗಲಿದೆ. ಇದರಿಂದಾಗಿ ನೀವು ನಾನಾ ರೀತಿಯ ನಷ್ಟಗಳನ್ನು ಅನುಭವಿಸಬೇಕಾಗುತ್ತದೆ.