9:39 AM Wednesday 20 - August 2025

ಪ್ರೀತಿಸುವುದಾಗಿ ಯುವತಿಯ ಹಿಂದೆ ಬಿದ್ದ ಯುವಕ ಈಗ ಪೊಲೀಸರ ಅತಿಥಿ; ಈತ ಮಾಡಿದ ಕೆಲಸ ಏನು ಗೊತ್ತಾ?

nagarabavi bangalore
03/07/2021

ಬೆಂಗಳೂರು: ಯುವಕನೋರ್ವ ಯುವತಿಗೆ ಟಾರ್ಚರ್ ನೀಡಿ ಪೊಲೀಸರ ಅತಿಥಿಯಾದ ಘಟನೆ ನಡೆದಿದ್ದು, ತನ್ನನ್ನು ಪ್ರೀತಿಸುವಂತೆ ಯುವತಿ ಹಿಂದೆ ಬಿದ್ದಿದ್ದ ಯುವಕ, ಪ್ರತಿನಿತ್ಯ ಯುವತಿಯನ್ನು ಪೀಡಿಸುತ್ತಿದ್ದ ಎಂದು ವರದಿಯಾಗಿದೆ.

 

ನಾಗರಬಾವಿ ನಿವಾಸಿಯಾಗಿರುವ 22 ವರ್ಷ ವಯಸ್ಸಿನ ಯುವತಿಯನ್ನು ರಾಜೇಶ್ ಎಂಬಾತ ಫಾಲೋ ಮಾಡುತ್ತಿದ್ದ ಎನ್ನಲಾಗಿದೆ. ಜೊತೆಗೆ, ಆಕೆಯ ಸ್ನೇಹಿತರಿಗೂ ಎಚ್ಚರಿಕೆ ನೀಡಿದ್ದ ಯುವಕ, ಆಕೆ ನನ್ನ ಹುಡುಗಿ, ಅವಳ ಜೊತೆ ಮಾತನಾಡಿದ್ರೆ, ಅಷ್ಟೇ ಎಂದು ಹೇಳಿದ್ದ ಎಂದು ಹೇಳಲಾಗಿದೆ.


ಇನ್ನೂ ಯುವತಿಯ ಪೋಷಕರಿಗೂ ಕರೆ ಮಾಡಿದ್ದ ಆತ, ನಿಮ್ಮ ಮಗಳನ್ನು ಲವ್ ಮಾಡ್ತಿದ್ದೀನಿ ಒಪ್ಪದಿದ್ದರೆ, ಕುತ್ತಿಗೆ ಕೊಯ್ದುಕೊಳ್ತೀನಿ ಎಂದು ಅವಾಜ್ ಹಾಕಿದ್ದಾನೆ ಎನ್ನಲಾಗಿದೆ.

 

ನನ್ನನ್ನು ಮದುವೆಯಾಗದಿದ್ದರೆ, ನಾನು ಸಾಯುವಾಗ ನಿಮ್ಮಪ್ಪ-ಅಮ್ಮನ ಹೆಸರು ಬರೆದಿಡುತ್ತೇನೆ. ಅವರು ಜೈಲಿಗೆ ಹೋಗುತ್ತಾರೆ. ಒಂದು ದಿನದೊಳಗೆ ಲವ್ ಪ್ರಪೋಸಲ್ ಒಪ್ಪಿಕೊಳ್ಳಬೇಕು ಎಂದು ಆತ ಯುವತಿಗೆ ಡೆಡ್ ಲೈನ್ ನೀಡಿದ್ದು,. ಇದರಿಂದ ಬೆದರಿದ ಯುವತಿಯ ಪೋಷಕರು ಚಂದ್ರಲೇಔಟ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸದ್ಯ ಯುವಕ ರಾಜೇಶ್ ನನ್ನು ಪೊಲೀಸರು ಬಂಧಿಸಿದ್ದಾರೆ.

ಇತ್ತೀಚಿನ ಸುದ್ದಿ

Exit mobile version