ರಿಲಯನ್ಸ್ ರೀಟೇಲ್ ತೆಕ್ಕೆಗೆ ಪ್ರಿಯಾಂಕಾ ಚೋಪ್ರಾ ಅವರ ‘ಅನಾಮಲಿ’ ಬ್ರ್ಯಾಂಡ್
ಮುಂಬೈ: ಖ್ಯಾತ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಅವರ ಜಾಗತಿಕ ಹೇರ್ ಕೇರ್ ಬ್ರ್ಯಾಂಡ್ ‘ಅನಾಮಲಿ’ಯನ್ನು ರಿಲಯನ್ಸ್ ರೀಟೇಲ್ ಲಿಮಿಟೆಡ್ (RRL) ಸ್ವಾಧೀನಪಡಿಸಿಕೊಂಡಿದೆ. ಈ ಕುರಿತು ಗುರುವಾರ ಅಧಿಕೃತ ಘೋಷಣೆ ಹೊರಬಿದ್ದಿದ್ದು, ಒಪ್ಪಂದದ ಭಾಗವಾಗಿ ಅನಾಮಲಿ ಬ್ರ್ಯಾಂಡ್ ನ ಟ್ರೇಡ್ ಮಾರ್ಕ್‌ಗಳು, ಡಿಜಿಟಲ್ ಹಾಗೂ ಬ್ರ್ಯಾಂಡ್ ಸ್ವತ್ತುಗಳು ಈಗ ರಿಲಯನ್ಸ್ ಪಾಲಾಗಿವೆ.
2021ರಲ್ಲಿ ಆರಂಭವಾದ ‘ಅನಾಮಲಿ’ ಸಸ್ಯಾಹಾರಿ (Vegan) ಮತ್ತು ಪರಿಸರ ಸ್ನೇಹಿ ಹೇರ್ ಕೇರ್ ಉತ್ಪನ್ನಗಳಿಗೆ ಹೆಸರುವಾಸಿಯಾಗಿದೆ. ಈ ಸ್ವಾಧೀನವು ರಿಲಯನ್ಸ್ ರೀಟೇಲ್ ನ ಸೌಂದರ್ಯ ಮತ್ತು ವೈಯಕ್ತಿಕ ಆರೈಕೆ ವಿಭಾಗವನ್ನು ಮತ್ತಷ್ಟು ಬಲಪಡಿಸಲಿದೆ. ರಿಲಯನ್ಸ್ ನ ಬೃಹತ್ ರೀಟೇಲ್ ಜಾಲ ಮತ್ತು ‘ತಿರಾ’ (Tira) ನಂತಹ ಡಿಜಿಟಲ್ ವೇದಿಕೆಗಳ ಮೂಲಕ ಅನಾಮಲಿ ಬ್ರ್ಯಾಂಡ್ ಅನ್ನು ಭಾರತದಾದ್ಯಂತ ವಿಸ್ತರಿಸುವುದು ಈ ಒಪ್ಪಂದದ ಪ್ರಮುಖ ಉದ್ದೇಶವಾಗಿದೆ.
ಈ ಬಗ್ಗೆ ಮಾತನಾಡಿದ ರಿಲಯನ್ಸ್ ರೀಟೇಲ್ ವೆಂಚರ್ಸ್ ಲಿಮಿಟೆಡ್‌ನ ಕಾರ್ಯನಿರ್ವಾಹಕ ನಿರ್ದೇಶಕಿ ಇಶಾ ಅಂಬಾನಿ, “ನಮ್ಮ ಸೌಂದರ್ಯ ಪೋರ್ಟ್‌ಫೋಲಿಯೊಗೆ ಅನಾಮಲಿಯನ್ನು ಸೇರಿಸಿಕೊಳ್ಳುತ್ತಿರುವುದು ಹೆಮ್ಮೆಯ ವಿಷಯ. ಪ್ರಿಯಾಂಕಾ ಚೋಪ್ರಾ ಅವರೊಂದಿಗೆ ಸಹಕರಿಸಿ ಭಾರತ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಬ್ರ್ಯಾಂಡ್ ಬೆಳೆಸುವ ಭರವಸೆ ನಮಗಿದೆ” ಎಂದರು.
ನಟಿ ಪ್ರಿಯಾಂಕಾ ಚೋಪ್ರಾ ಅವರು ಈ ಬ್ರ್ಯಾಂಡ್‌ನ ‘ಕ್ರಿಯೇಟಿವ್ ಡೈರೆಕ್ಟರ್’ ಆಗಿ ಮುಂದುವರಿಯಲಿದ್ದಾರೆ. “ಇದು ಅನಾಮಲಿ ಪಾಲಿನ ಹೊಸ ಅಧ್ಯಾಯ. ಇಶಾ ಅಂಬಾನಿ ಅವರ ನಾಯಕತ್ವದಲ್ಲಿ ಅನಾಮಲಿ ಹೆಚ್ಚಿನ ಗ್ರಾಹಕರನ್ನು ತಲುಪಲಿದೆ ಎಂಬ ವಿಶ್ವಾಸ ನನಗಿದೆ,” ಎಂದು ಅವರು ಹರ್ಷ ವ್ಯಕ್ತಪಡಿಸಿದ್ದಾರೆ. ಈ ಕ್ರಮದಿಂದಾಗಿ ಭಾರತದ ಸೌಂದರ್ಯ ಮಾರುಕಟ್ಟೆಯಲ್ಲಿ ರಿಲಯನ್ಸ್ ರೀಟೇಲ್‌ನ ಪ್ರಾಬಲ್ಯ ಮತ್ತಷ್ಟು ಹೆಚ್ಚಾಗಲಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD























