12:03 PM Wednesday 15 - October 2025

ರಾಜ್ಯ ಸರ್ಕಾರ ಮಲಗಿ ಬಿಟ್ಟಿದೆ: ಮಾಜಿ ಸಚಿವ ಸಂತೋಷ್ ಲಾಡ್

santhosh-lad
02/02/2022

ಧಾರವಾಡ: ರಾಜ್ಯ ಸರ್ಕಾರ ಮಲಗಿ ಬಿಟ್ಟಿದೆ, ಯಾವುದೇ ಕಾರ್ಯಕ್ರಮ ಇಲ್ಲ. ಪರಿಹಾರ ಎನ್ನುವುದು ಕೇವಲ ಮಾಧ್ಯಮದಲ್ಲಿ ಮಾತ್ರ ಇದೆ. ಕೋವಿಡ್ ಸಾವಿನ ಪರಿಹಾರ ಸಿಕ್ಕಿಲ್ಲ, ಮೂರು ವರ್ಷಗಳಿಂದ ಗ್ರಾ.ಪಂ.ಯಲ್ಲಿ ಮನೆ ಕಟ್ಟಿದವರಿಗೆ ಹಣ ಬಂದಿಲ್ಲ ಎಂದು ಮಾಜಿ ಸಚಿವ ಸಂತೋಷ್ ಲಾಡ್ ಕಿಡಿಕಾರಿದ್ದಾರೆ.ಎಂದು ಮಾಜಿ ಸಚಿವ ಸಂತೋಷ್ ಲಾಡ್ ಒತ್ತಾಯಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನರೇಂದ್ರ ಮೋದಿ ಸರ್ಕಾರ 7 ವರ್ಷದಿಂದ ಅಧಿಕಾರದಲ್ಲಿದೆ. ಮೋದಿ ಪ್ರತಿ ಬಜೆಟ್‍ನಲ್ಲಿ ಒಂದು ಹೊಸ ಕಾರ್ಯಕ್ರಮ ಇಟ್ಟಿರುತ್ತಾರೆ. ಮೊದಲು ಅವರು 100 ಸ್ಮಾರ್ಟ್ ಸಿಟಿ ಎಂದಿದ್ದರು. ಈಗ ಅದನ್ನು ಮರೆತು ಬಿಟ್ಟಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಈ ಹಿಂದೆ ಬುಲೆಟ್ ಟ್ರೇನ್ ಪ್ರಾರಂಭ ಹಾಗೂ ಉದ್ಯೋಗ ಸೃಷ್ಟಿ ಬಗ್ಗೆ ಮಾತನಾಡಿದ್ದರು. ಆದರೆ ಇಂದು ಮೆಕ್ ಇನ್ ಇಂಡಿಯಾ ಹಾಗೂ ಮೆಡ್ ಇನ್ ಇಂಡಿಯಾ ಎರಡೂ ಮಾತಾಡುತ್ತಿಲ್ಲ. ಈ ಯಾವ ಕಾರ್ಯಕ್ರಮವು ಅನುಷ್ಠಾನಕ್ಕೆ ಬರುತ್ತಿಲ್ಲ ಎಂದರು.

ನದಿ ಜೋಡಣೆ ಆಗಬಾರದು ಎಂದು ನಮ್ಮ ಉದ್ದೇಶ ಅಲ್ಲ, ಎಲ್ಲಾ ರಾಜ್ಯಗಳಿಗೆ ಅನುಕೂಲ ಆಗುವುದಿದ್ದರೆ ನಮ್ಮ ಅಭ್ಯಂತರ ಇಲ್ಲ ಎಂದ ಅವರು, ನಾನು ಕಂಡಂತೆ 7 ವರ್ಷದಲ್ಲಿ ಮೋದಿ ಅವರ ಯಾವುದೇ ಕಾರ್ಯಕ್ರಮ ಬಡವರ ಪರ ಆಗಿಲ್ಲ ಎಂದು ಹೇಳಿದರು.

ಬೊಮ್ಮಾಯಿ ಅವರು 6 ತಿಂಗಳಿಂದ ಸಿಎಂ ಇದ್ದಾರೆ, ರಾಜ್ಯ ಸರ್ಕಾರದಲ್ಲಿ ಹಣವಿಲ್ಲ. ಕೇಂದ್ರ ಸರ್ಕಾರ ನೀಡುತ್ತಿಲ್ಲ ಎಂದ ಅವರು, ಬಿಜೆಪಿ ಸರ್ಕಾರದಿಂದ ಯಾವ ಅಭಿವೃದ್ಧಿಯಾಗಿದೆ ಎಂದು ಬಿಜೆಪಿ ಅವರನ್ನೇ ಕೇಳಬೇಕು. ಕಳೆದ ಮೂರು ವರ್ಷಗಳಿಂದ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಯಾವ ರೀತಿ ಅಭಿವೃದ್ಧಿ ಮಾಡಿಲ್ಲ ಇದಕ್ಕೆ ಮುಂದಿನ ದಿನಗಳಲ್ಲಿ ಜನ ತಕ್ಕ ಉತ್ತರ ಕೊಡುತ್ತಾರೆ ಎಂದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Bk3PAoJFRvJLUSBPd39m1C

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಕನ್ನಡ ಚಿತ್ರರಂಗದ ಹಿರಿಯ ನಟ ಅಶೋಕ್ ರಾವ್ ನಿಧನ

ಕಾರು-ಟ್ರಕ್ ನಡುವೆ ಭೀಕರ ಅಪಘಾತ: ಇಬ್ಬರು ಇಂಜಿನಿಯರಿಂಗ್ ವಿದ್ಯಾರ್ಥಿಗಳ ಸಾವು

ನರೇಂದ್ರ ಮೋದಿ ಕಾಲದಲ್ಲಿ ದೇಶ ಸಾಲದ ಸುಳಿಯಲ್ಲಿ ಸಿಲುಕಿದೆ: ಸಿದ್ದರಾಮಯ್ಯ

ಪೊಲೀಸ್ ವಾಹನ ಕಳವು: ಆರೋಪಿಯ ಬಂಧನ

ಬೆಡ್ ​ರೂಂನಿಂದ ಠಾಣೆಯ ಮೆಟ್ಟಿಲೇರಿದ ಐಎಎಸ್​ ದಂಪತಿ ಜಗಳ

 

ಇತ್ತೀಚಿನ ಸುದ್ದಿ

Exit mobile version