5:08 PM Thursday 15 - January 2026

ಸಿಡಿಯಲ್ಲಿ ರಮೇಶ್ ಜಾರಕಿಹೊಳಿ ಯಾವ ಸ್ಥಿತಿಯಲ್ಲಿ ಕಂಡು ಬಂದಿದ್ದಾರೆ ಗೊತ್ತಾ?

02/03/2021

ಬೆಂಗಳೂರು: ಯುವತಿಗೆ ಕೆಲಸದ ಆಮಿಷವೊಡ್ಡಿ ಲೈಂಗಿಕವಾಗಿ ಬಳಸಿಕೊಂಡ ಆರೋಪ ಎದುರಿಸುತ್ತಿರುವ ರಮೇಶ್ ಜಾರಕಿಹೊಳಿ ಅವರ ಎರಡು ಚಿತ್ರಗಳು ಬಹಿರಂಗಗೊಂಡಿದೆ.  ನಾಗರಿಕ ಹಕ್ಕು ಹೋರಾಟ ಸಮಿತಿ ಅಧ್ಯಕ್ಷ ದಿನೇಶ್ ಕಲ್ಲಹಳ್ಳಿ ಎಂಬವರು ಸಿಡಿ  ಬಿಡುಗಡೆ ಮಾಡಿದ್ದಾರೆ.

ಸಿಡಿಯನ್ನು ಪೊಲೀಸರಿಗೆ ನೀಡಿರುವ ಅವರು, ಈ ಬಗ್ಗೆ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ. ಕಳೆದ ಚುನಾವಣೆಯ ಸಂದರ್ಭದಲ್ಲಿ ಆಡಿಯೋವೊಂದು ಬಿಡುಗಡೆಗೊಂಡು ಬಳಿಕ ಶಾಂತವಾಗಿತ್ತು. ಜೆಡಿಎಸ್ ಪೇಜ್ ನಲ್ಲಿ ಆಡಿಯೋ ಬಿಡುಗಡೆಯಾಗಿದ್ದು, ಅದೂ ಕೂಡ ರಮೇಶ್ ಜಾರಕಿಹೊಳಿ ಅವರದ್ದು ಎಂದು ಗುಸುಗುಸು ಕೇಳಿ ಬಂದಿತ್ತು.

ಇದೀಗ ರಮೇಶ್ ಜಾರಕಿಹೊಳಿ ಅವರು ನಿರುದ್ಯೋಗಿ ಯುವತಿಯಿಂದಾಗಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ. ಯುವತಿ ಉದ್ಯೋಗ ಕೇಳಿದ ತಕ್ಷಣವೇ ರಮೇಶ್ ಜಾರಕಿಹೊಳಿ ಯುವತಿಯ ಬೆನ್ನು ಬಿದ್ದಿದ್ದು, ಲೈಂಗಿಕ ಬಯಕೆ ಪೂರೈಸುವಂತೆ ಹಾತೊರೆದಿದ್ದಾರೆ. ಈ ಸಂದರ್ಭ ಯುವತಿ ಗೌಪ್ಯವಾಗಿ ಕ್ಯಾಮರಾ ಫಿಕ್ಸ್ ಮಾಡಿದ್ದು, ರಮೇಶ್ ಜಾರಕಿಹೊಳಿ ಅವರ ಕರ್ಮಕಾಂಡಗಳೆಲ್ಲವೂ ವಿಡಿಯೋದಲ್ಲಿ ಸೆರೆಯಾಗಿದೆ.

whatsapp

ಇತ್ತೀಚಿನ ಸುದ್ದಿ

Exit mobile version