11:24 PM Wednesday 20 - August 2025

ಸ್ಕೂಟರ್ ಗೆ ಡಿಕ್ಕಿ ಹೊಡೆದು ಬಸ್ ನಡಿಗೆ ಎಸೆಯಲ್ಪಟ್ಟ ವಿದ್ಯಾರ್ಥಿ ಸ್ಥಳದಲ್ಲಿಯೇ ಸಾವು!

mudipu road accident
30/07/2021

ಕೊಣಾಜೆ: ಸ್ಕೂಟರ್ ಮತ್ತು ಬೈಕ್ ನಡುವೆ ನಡೆದ ಅಪಘಾತದ ವೇಳೆ ನಡೆದ ಅಪಘಾತದ ವೇಳೆ ಬೈಕ್ ಸವಾರ ಬಸ್ ನಡಿಗೆ ಎಸೆಯಲ್ಪುಟ್ಟು ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಮುಡಿಪು ಬಳಿಯಲ್ಲಿ ಗುರುವಾರ ರಾತ್ರಿ ನಡೆದಿದೆ.

ಉಪ್ಪಳ ಮೂಲದ 20 ವರ್ಷ ವಯಸ್ಸಿನ  ಜೌಹಾರ್ ಮೃತ ವ್ಯಕ್ತಿಯಾಗಿದ್ದು, ಈತ ವಿದ್ಯಾರ್ಥಿಯಾಗಿದ್ದು, ಮುಡಿಪು ಸಮೀಪದ ಸಂಬಂಧಿಕರ ಮನೆಗೆಂದು ಬರುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇಲ್ಲಿನ ಬಾಳೆಪುಣಿ ಕಡೆಯಿಂದ ಮುಡಿಪು ಕಡೆಗೆ ಹೋಗುತ್ತಿದ್ದ ವೇಳೆ ಮುಡಿಪು ಪೆಟ್ರೋಲ್ ಬಂಕ್ ಬಳಿಯಲ್ಲಿ ಈ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ. ಸ್ಕೂಟರ್ ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿದ ವೇಳೆ  ಸ್ಕೂಟರ್ ಸವಾರ ಫುಟ್ಪಾತ್ ಗೆ ಬಿದ್ದಿದ್ದಾನೆ. ಆದರೆ ಬೈಕ್ ಸವಾರ ರಸ್ತೆಗೆಸೆಯಲ್ಪಟ್ಟಿದ್ದು, ಅದೇ ಸಮಯದಲ್ಲಿ ರಸ್ತೆಯಲ್ಲಿ ಬರುತ್ತಿದ್ದ ಬಸ್ ನ ಚಕ್ರಗಳಡಿಯಲ್ಲಿ ಸಿಲುಕಿದ್ದು, ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಇನ್ನೂ ಘಟನಾ ಸ್ದಳಕ್ಕೆ ಸಂಚಾರಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಘಟನೆಯ ಕುರಿತು ಮಾಹಿತಿ ಸಂಗ್ರಹಿಸಿ, ತನಿಖೆ ಮುಂದುವರಿಸಿದ್ದಾರೆ.

ಇನ್ನಷ್ಟು ಸುದ್ದಿಗಳು…

46.1 ಲಕ್ಷ ಮೊಬೈಲ್ ಬಳಕೆದಾರರನ್ನು ಕಳೆದುಕೊಂಡ ಏರ್ ಟೆಲ್!

ಮುಂದಿನ ಟಾರ್ಗೆಟ್ ಈಶ್ವರಪ್ಪ, ಜಗದೀಶ್ ಶೆಟ್ಟರ್? | ಯಡಿಯೂರಪ್ಪರ  ಬಳಿಕ ನಿವೃತ್ತರಾಗುತ್ತಾರಾ ಹಿರಿಯ ನಾಯಕರು?

ನ್ಯಾಯಾಧೀಶರನ್ನು ರಸ್ತೆಯಲ್ಲಿಯೇ ಭೀಕರ ಹತ್ಯೆ: ಸಿಸಿ ಕ್ಯಾಮರದಲ್ಲಿ ಸೆರೆಯಾಯ್ತು ಭಯಾನಕ ದೃಶ್ಯ

ಬಾಲಕಿಗೆ “ಮನೆಯಲ್ಲಿ ಒಬ್ಬನೇ ಇದ್ದೇನೆ ಬರ್ತಿಯಾ” ಎಂದ ಪೊಲೀಸ್ ಕಾನ್ಸ್ ಟೇಬಲ್ ಅರೆಸ್ಟ್

ಅಶ್ಲೀಲ ಚಿತ್ರ ವಿಚಾರ: ಶಿಲ್ಪಾ ಶೆಟ್ಟಿ-ರಾಜ್ ಕುಂದ್ರಾ ನಡುವೆ ಅವರ ಮನೆಯಲ್ಲಿಯೇ ಜಟಾಪಟಿ

ಇತ್ತೀಚಿನ ಸುದ್ದಿ

Exit mobile version