10:45 AM Thursday 11 - December 2025

ಮಾಲಿಕರ ತಪ್ಪಿಗೆ ಜೈಲಿನಲ್ಲಿ ಬಂಧಿಯಾಗಿರುವ ಎರಡು ಹುಂಜಗಳು!

06/02/2021

ಹೈದರಾಬಾದ್: ಕಳೆದ 25 ದಿನಗಳಿಂದ ತಮ್ಮ ಮಾಲಿಕರು ಮಾಡಿದ ತಪ್ಪಿಗೆ ಎರಡು ಹುಂಜಗಳು ಜೈಲಿನಲ್ಲಿ ಬಂಧಿಯಾಗಿರುವ ಘಟನೆಗಳು ತೆಲಂಗಾಣದ ಖಮ್ಮಮ್ ಜಿಲ್ಲೆಯಲ್ಲಿ ನಡೆದಿದೆ.

 

ಜನವರಿ 10ರಂದು ಕೋಳಿ ಅಂಕಕ್ಕೆ ದಾಳಿ ನಡೆಸಿದ್ದ ಪೊಲೀಸರು 10 ಜನರನ್ನು ಬಂಧಿಸಿದ್ದರು. ಈ ವೇಳೆ ಒಂದು ಬೈಕ್ ಹಾಗೂ ಎರಡು ಹುಂಜಗಳನ್ನು ಮೊದಿಗೊಂಡ ಠಾಣೆ ಪೊಲೀಸರು ವಶಪಡಿಸಿಕೊಂಡಿದ್ದರು.

 

ಬಂಧನಕ್ಕೊಳಗಾಗಿದ್ದ 10 ಜನರು ಜಾಮೀನು ಪಡೆದು ಹೊರ ಬಂದಿದ್ದಾರೆ. ಆದರೆ ಹುಂಜಗಳು ಮಾತ್ರ ಇನ್ನೂ ಜೈಲಿನಲ್ಲಿವೆ. ದಾಳಿಗೊಳಗಾದ ವೇಳೆ ವಶಪಡಿಸಲಾದ ಹುಂಜಗಳನ್ನು ಯಾರು ಕೂಡ ಪಡೆದುಕೊಂಡಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

 

ಈ ಹುಂಜಗಳನ್ನು ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆಯ ಬಳಿಕ ಹರಾಜು ಮಾಡಲಾಗುವುದು. ಹೆಚ್ಚು ಬಿಡ್ ಮಾಡಿದವರು ಹುಂಜಗಳನ್ನು ಖರೀದಿಸಬಹುದು ಎಂದು ಹೇಳಿದ್ದಾರೆ.

ಇತ್ತೀಚಿನ ಸುದ್ದಿ

Exit mobile version