1:19 AM Saturday 18 - October 2025

ಸ್ನೇಹಿತ ಮತ್ತು ಗ್ಯಾಂಗ್ ನಿಂದ ರೌಡಿಶೀಟರ್ ನ ಬರ್ಬರ ಹತ್ಯೆ!

kartik
05/05/2025

ಮೈಸೂರು: ರೌಡಿಶೀಟರ್ ವೊಬ್ಬನನ್ನು ಆತನ ಸ್ನೇಹಿತ ಸೇರಿದಂತೆ ಐವರು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಮೈಸೂರಿನ ಹೊರವಲಯದ ವರುಣ ಗ್ರಾಮದ ಹೊಟೇಲ್ ಮುಂಭಾಗದಲ್ಲಿ ಕಳೆದ ರಾತ್ರಿ ನಡೆದಿದೆ.

ಮೈಸೂರು ನಗರದ ಕ್ಯಾತಮಾರನಹಳ್ಳಿ ನಿವಾಸಿ ಕಾರ್ತಿಕ್(33) ಹತ್ಯೆಗೀಡಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಕಾರ್ತಿಕ್ ನ ಸ್ನೇಹಿತನಾಗಿದ್ದ ಪ್ರವೀಣ್ ಹಾಗೂ ಗ್ಯಾಂಗ್  ಕಾರ್ತಿಕ್ ನನ್ನು ಬರ್ಬರವಾಗಿ ಹತ್ಯೆ ನಡೆಸಿದೆ. ಹತ್ಯೆಯ ಬಳಿಕ ಕಾರ್ತಿಕ್ ನ ಮೃತದೇಹದ ಎದುರು ಡಾನ್ಸ್ ಮಾಡಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಕಾರ್ತಿಕ್ ಹೆಸರು ಬಳಸಿ ಪ್ರವೀಣ್ ದುಡ್ಡು ಮಾಡುತ್ತಿರುವ ಬಗ್ಗೆ ತಿಳಿದು ಪ್ರವೀಣ್ ಗೆ ಕಾರ್ತಿಕ್ ಬುದ್ಧಿ ಹೇಳಿ ಎಚ್ಚರಿಕೆ ನೀಡಿದ್ದ ಎನ್ನಲಾಗಿದೆ. ಅಲ್ಲದೇ ಈ ಕೊಲೆಯಲ್ಲಿ ಲಕ್ಷ್ಮೀ ಎಂಬ ಮಹಿಳೆಯ ಕಾರಣಕ್ಕೆ ಕೊಲೆ ನಡೆದಿದೆ ಎನ್ನುವ ಮಾತುಗಳು ಕೇಳಿ ಬಂದಿವೆ.

ಕಾರ್ತಿಕ್ ಚಿಕ್ಕಹಳ್ಳಿಯಲ್ಲಿ ನಡೆದ ಕೊಲೆ ಯತ್ನ ಪ್ರಕರಣದಲ್ಲಿ ಜೈಲು ಸೇರಿ ಜಾಮೀನಿನ ಮೇಲೆ ಹೊರಬಂದಿದ್ದ. ಜೊತೆಗೆ ಕಾರ್ತಿಕ್ ರೌಡಿಶೀಟರ್ ಆಗಿದ್ದ. ರೌಡಿ ಶೀಟರ್ ಆಗಿರುವುದರಿಂದ ಆತನನ್ನು ಗಡಿಪಾರು ಮಾಡಲಾಗಿತ್ತು. ಹೀಗಾಗಿ ಆತ ತನ್ನ ಮನೆಗೆ ಹೋಗದೆ ವರುಣ ಹತ್ತಿರ ಇರುವ ಹೋಟೆಲ್‌ನಲ್ಲಿದ್ದ.  ನಿನ್ನೆ ರಾತ್ರಿ ಲಕ್ಷ್ಮಿ ಎನ್ನುವ ಹುಡುಗಿ ಕರೆ ಮಾಡಿದ್ದಳಂತೆ. ಆಕೆ ಕರೆ ಬಳಿಕ ಕಾರ್ತಿಕ್ ಮನೆಯಿಂದ ತೆರಳಿದ್ದನಂತೆ. ಅಲ್ಲಿಂದ ನೇರವಾಗಿ ಕಾರ್ತಿಕ್ ಹೋಟೆಲ್ ‌ಗೆ ಹೋಗಿದ್ದಾನೆ . ಅಲ್ಲಿ ಪ್ರವೀಣ್ ಎಂಬಾತ ತನ್ನ ಗ್ಯಾಂಗ್ ಜೊತೆ ಸೇರಿ ಕಾರ್ತಿಕ್‌ ನನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ ಎಂದು ವರದಿಯಾಗಿದೆ.

ವರುಣ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ, ಪೊಲೀಸರ ತನಿಖೆಯಿಂದ ಈ ಪ್ರಕರಣದ ಸತ್ಯಾಂಶ ಬಯಲಾಗಬೇಕಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version