5:29 PM Wednesday 10 - December 2025

ಬಿಡುಗಡೆಗೂ ಮೊದಲೇ RRR ಚಿತ್ರಕ್ಕೆ 350 ಕೋಟಿ ರೂ ಆಫರ್

06/02/2021

ಹೈದರಾಬಾದ್: ರಾಜಮೌಳಿ ನಿರ್ದೇಶನದ  ಆರ್ ಆರ್ ಆರ್ ಚಿತ್ರ ಅಕ್ಟೋಬರ್ 13ರಂದು ತೆರೆಕಾಣಲಿದ್ದು,  ಚಿತ್ರಕ್ಕೆ ಬಿಡುಗಡೆಗೂ ಮೊದಲೇ ಭರ್ಜರಿ ಆಫರ್ ಬಂದಿದೆ ಎಂದು ಹೇಳಲಾಗಿದೆ.

ಆರ್ ಆರ್ ಆರ್ ಚಿತ್ರದ ಹಿಂದಿ ಡಬ್ಬಿಂಗ್ ಹಕ್ಕು ಹಾಗೂ ವಿತರಣೆ ಹಕ್ಕು ಪಡೆಯಲು 100 ಕೋಟಿ ಡೀಲ್ ಆಗಿದೆ. ಅನಿಲ್ ತಡಾನಿ(ಎಎಫಿಲಂಸ್) ಈಗಾಗಲೇ ಚಿತ್ರದ ವಿತರಣೆ ಹಕ್ಕನ್ನು ಪಡೆದುಕೊಂಡಿದೆ. ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ  ಒಬ್ಬರೇ ವಿತರಣೆ ಮಾಡಲು ತೀರ್ಮಾನಿಸಿದ್ದಾರೆ ಎಂದು ತಿಳಿದು ಬಂದಿದೆ.

ಆರ್ ಆರ್ ಆರ್ ಚಿತ್ರಕ್ಕೆ ಬಿಡುಗಡೆಗೂ ಮೊದಲೇ 350 ಕೋಟಿ ಆಫರ್ ಬಂದಿದ್ದು, ಇದು ತೆಲುಗು ಚಿತ್ರರಂಗದಲ್ಲಿಯೇ ದಾಖಲೆ ಸೃಷ್ಟಿಸಿದ್ದು, ಅತೀ ದೊಡ್ಡ ವ್ಯವಹಾರವಾಗಿದೆ ಎಂದು ಅಂತರ್ಜಾಲ ಮಾಧ್ಯಮವೊಂದು ವರದಿ ಮಾಡಿದೆ.

ಇತ್ತೀಚಿನ ಸುದ್ದಿ

Exit mobile version