ಆರ್‌ ಎಸ್‌ ಎಸ್ ನೋಂದಣಿ ಆಗಿಲ್ಲ, ಮುಂದೆಯೂ ಆಗಲ್ಲ: ಸಚಿವ ಪ್ರಿಯಾಂಕ್ ಖರ್ಗೆ ಗೆ ಬಿ.ಎಲ್.ಸಂತೋಷ್ ತಿರುಗೇಟು - Mahanayaka
1:23 AM Thursday 10 - September 2026

ಆರ್‌ ಎಸ್‌ ಎಸ್ ನೋಂದಣಿ ಆಗಿಲ್ಲ, ಮುಂದೆಯೂ ಆಗಲ್ಲ: ಸಚಿವ ಪ್ರಿಯಾಂಕ್ ಖರ್ಗೆ ಗೆ ಬಿ.ಎಲ್.ಸಂತೋಷ್ ತಿರುಗೇಟು

b l santosh
15/08/2026

ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ ಎಸ್‌ ಎಸ್) ನೋಂದಣಿಯಾಗಿಲ್ಲ ಮತ್ತು ಮುಂದೆಯೂ ನೋಂದಣಿ ಮಾಡಿಸುವುದಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಸ್ಪಷ್ಟಪಡಿಸಿದ್ದಾರೆ.

ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಬೆಂಗಳೂರಿನ ಬನ್ನಪ್ಪ ಪಾರ್ಕ್‌ನಲ್ಲಿ ‘ಹಿಂದೂ ಜಾಗರಣ ವೇದಿಕೆ’ ಆಯೋಜಿಸಿದ್ದ ‘ಅಖಂಡ ಭಾರತ ಸಂಕಲ್ಪ ದಿನ’ ಕಾರ್ಯಕ್ರಮದಲ್ಲಿ ಭಾಗವಹಿಸಿ, ಧ್ವಜಾರೋಹಣ ನೆರವೇರಿಸಿದ ಬಳಿಕ ಅವರು ಮಾತನಾಡಿದರು.

ಆರ್‌ ಎಸ್‌ ಎಸ್ ನೋಂದಣಿ ಕುರಿತು ಸಚಿವ ಪ್ರಿಯಾಂಕ್ ಖರ್ಗೆ ನೀಡಿರುವ ಹೇಳಿಕೆಗೆ ತಿರುಗೇಟು ನೀಡಿದ ಅವರು, “ದೇಶದ ಇತಿಹಾಸ ಮತ್ತು ದೇಶಕ್ಕೆ ಆರ್‌ಎಸ್‌ಎಸ್ ನೀಡಿರುವ ಕೊಡುಗೆ ಏನೆಂಬುದು ದೇಶದ ಅಭಿಮಾನಿಗಳಿಗೆ ಚೆನ್ನಾಗಿ ಗೊತ್ತಿದೆ. ಸಂಘವನ್ನು ನೋಂದಣಿ ಮಾಡಿಲ್ಲ, ಮುಂದೆಯೂ ಮಾಡುವುದಿಲ್ಲ. ನೋಂದಣಿ ಮಾಡಿಸಿಕೊಂಡಿರುವ ಸಂಸ್ಥೆಗಳು ಏನೇನು ಮಾಡುತ್ತಿವೆ ಎಂಬುದು ನಮಗೆಲ್ಲರಿಗೂ ಗೊತ್ತಿದೆ,” ಎಂದರು.

ಇದೇ ವೇಳೆ, “ಸಂಘಕ್ಕೆ ನೋಂದಣಿಯೇ ಮಾನದಂಡವಲ್ಲ,” ಎಂದು ಹೇಳಿದ ಅವರು, “ರಜಾಕರ ದಾಳಿಯ ಸಂದರ್ಭದಲ್ಲಿ ಖರ್ಗೆ ಅವರ ಕುಟುಂಬ ನೆಮ್ಮದಿಯಿಂದ ವಾಸಿಸಲು ಮತ್ತು ರಜಾಕರ ವಿರುದ್ಧ ಅಂದು ರಸ್ತೆಯಲ್ಲಿ ನಿಂತು ಹೋರಾಡಿದ್ದು ಇದೇ ಆರ್‌ಎಸ್‌ಎಸ್. ಈ ಇತಿಹಾಸವನ್ನು ಸಚಿವರು ನೆನಪಿಟ್ಟುಕೊಳ್ಳಬೇಕು,” ಎಂದು ಕಿಡಿಕಾರಿದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

mobil chat sitesi Ucuz Uçak Bileti