2:09 AM Wednesday 15 - October 2025

ಬೋರ್ ವೆಲ್ ಗೆ ವಿದ್ಯುತ್‌ ಲೈನ್ ವಿಚಾರಕ್ಕೆ ಗಲಾಟೆ: ವ್ಯಕ್ತಿಯ ಕೊಲೆಯಲ್ಲಿ ಅಂತ್ಯ

kalleshappa
02/02/2025

ಚಿಕ್ಕಮಗಳೂರು:   ಬೋರ್ ವೆಲ್ ಗೆ ವಿದ್ಯುತ್‌ ಲೈನ್ ವಿಚಾರಕ್ಕೆ ನಡೆದ ಗಲಾಟೆ, ವ್ಯಕ್ತಿಯೊಬ್ಬರ ಕೊಲೆಯಲ್ಲಿ ಅಂತ್ಯಗೊಂಡ ಘಟನೆ ಕಡೂರು ತಾಲೂಕಿನ ವಡೇರಹಳ್ಳಿ ಗ್ರಾಮದಲ್ಲಿ ನಡೆದಿದೆ.

ಕಲ್ಲೇಶಪ್ಪ (55) ಮೃತ ದುರ್ದೈವಿಯಾಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ವಡೇರಹಳ್ಳಿ ಪಕ್ಕದ ಆನಂದಪುರ ಗ್ರಾಮದ ಮೂವರ ಮೇಲೆ ದೂರು ದಾಖಲಾಗಿದೆ.

ಒಂದೇ ತೋಟದಲ್ಲಿ 2 ಬೋರ್ ತೆಗೆಸಿದ್ದ ಕಲ್ಲೇಶಪ್ಪ,  ಟಿಸಿಯಿಂದ ವಿದ್ಯುತ್ ಲೈನ್ ಎಳೆದುಕೊಂಡು ಬೋರ್ ಮೂಲಕ ತೋಟಕ್ಕೆ ನೀರಾಯಿಸ್ತಿದ್ರು,   ಅದೇ ಟಿಸಿಯಿಂದ ಮತ್ತೊಂದು ಬೋರ್‌ ಗೆ ಕರೆಂಟ್ ಎಳೆದುಕೊಳ್ಳಲು ಯತ್ನಿಸಿದ್ದರು.  ಬೇಡ ಅಂದಾಗ ಮಾತಿಗೆ ಮಾತು ಬೆಳೆದು ಗಲಾಟೆ, ಕೊಲೆಯಲ್ಲಿ ಅಂತ್ಯವಾಗಿದೆ ಎನ್ನಲಾಗಿದೆ.

ಜನವರಿ 31ರಂದು ಗಲಾಟೆ ನಡೆದಿತ್ತು. ಗಲಾಟೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಕಲ್ಲೇಸಪ್ಪ ಶಿವಮೊಗ್ಗದ ಮ್ಯಾಕ್ಸ್ ಆಸ್ಪತ್ರೆ ದಾಖಲಾಗಿದ್ದರು.  ಚಿಕಿತ್ಸೆ ಫಲಕಾರಿಯಾಗದೆ ಕಲ್ಲೇಶಪ್ಪ ನಿನ್ನೆ ರಾತ್ರಿ ಸಾವನ್ನಪ್ಪಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ   ಅನಂತಪುರ ಗ್ರಾಮದ ನಾಗರಾಜಪ್ಪ, ಲೋಹಿತ್, ಗಂಗಾಧರಪ್ಪ ಮೇಲೆ ಹತ್ಯೆ ಆರೋಪ ಕೇಳಿ ಬಂದಿದ್ದು,  ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/BR3b3qhWZWaCzpD1m6N5uu

ಇತ್ತೀಚಿನ ಸುದ್ದಿ

Exit mobile version