11:22 AM Saturday 23 - August 2025

ಸಚಿನ್ ಪುತ್ರನ ಆಕ್ರಮಣಕಾರಿ ವರ್ತನೆ ಕಂಡು ಸಚಿನ್ ಅಭಿಮಾನಿಗಳು ಶಾಕ್!

arjun tendulkar
18/05/2024

ಮುಂಬೈ:  ಸಚಿನ್ ತೆಂಡುಲ್ಕರ್ ಅವರ  ವರ್ತನೆ ಕಂಡು ಸ್ವತಃ ಸಚಿನ್ ಅವರ ಅಭಿಮಾನಿಗಳೇ ಶಾಕ್ ಆಗಿದ್ದಾರೆ.   ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಪರ ಕಣಕ್ಕಿಳಿದಿದ್ದ ಅರ್ಜುನ್ ತೆಂಡುಲ್ಕರ್ ಆಕ್ರಮಣಕಾರಿ ವರ್ತನೆ ತೋರಿರುವುದು ಕ್ರಿಕೆಟ್ ಅಭಿಮಾನಿಗಳಿಗೆ ಬೇಸರ ತಂದಿತು.

ವೇಗದ ಬೌಲಿಂಗ್ ಮಾಡುವ ಅರ್ಜುನ್ ತೆಂಡುಲ್ಕರ್ ಬಾಲ್ ಮಾಡಿದ ಬಳಿಕ ಕ್ರೀಸ್ ಬಿಟ್ಟು ನಿಂತಿದ್ದ ಲಕ್ನೋ ಬ್ಯಾಟಿಗ ಮಾರ್ಕ್ ಸ್ಟಾಯ್ನಿಸ್ ನತ್ತ ಚೆಂಡು ಎಸೆಯುವಂತೆ ಎಚ್ಚರಿಸಿ ಗುರಾಯಿಸಿ ನೋಡಿದ್ದಾರೆ. ಇದರ ಅವಶ್ಯಕತೆ ಇತ್ತೇ? ಎಂದು ಕ್ರಿಕೆಟ್ ಪ್ರಿಯರು ಪ್ರಶ್ನಿಸಿದ್ದಾರೆ.

ಸಚಿನ್ ತೆಂಡುಲ್ಕರ್ ಮೈದಾನದಲ್ಲಿ ಎದುರಾಳಿ ಆಟಗಾರರ ಮುಂದೆ ಆಕ್ರಮಣಕಾರಿ ವರ್ತನೆ ತೋರಿದವರಲ್ಲ. ಎದುರಾಳಿಗಳೇ ಕೆಣಕಿದರೂ ಶಾಂತ ರೀತಿಯ ವರ್ತನೆ ತೋರಿ ಮಾದರಿಯಾದವರು. ಎದುರಾಳಿ ತಂಡದವರು ಕೆಣಕಿದರೆ, ಅವರು ಬ್ಯಾಟಿಂಗ್ ಮೂಲಕವೇ ಅದಕ್ಕೆ ಉತ್ತರ ನೀಡುತ್ತಿದ್ದರು. ಆದರೆ ಸಹ ಆಟಗಾರರ ಮೇಲೆ  ಆಕ್ರಮಣಕಾರಿ ವರ್ತನೆ ಮಾಡುವುದು ಎಷ್ಟು ಸರಿ ಅನ್ನೋದು ಕ್ರಿಕೆಟ್ ಪ್ರಿಯರ ಪ್ರಶ್ನೆಯಾಗಿದೆ.

ಇನ್ನೊಂದೆಡೆ, ಸಚಿನ್ ಪುತ್ರನ ಅಗ್ರೆಷನ್ ನೋಡಿ ಸ್ಟಾಯ್ನಿಸ್ ಕೂಡಾ ಅಚ್ಚರಿಪಟ್ಟಿದ್ದಾರೆ. ಇಷ್ಟು ದಿನ ಆಟವಾಡುವ ಅವಕಾಶ ಸಿಗದೇ ಬೆಂಚ್ ಬಿಸಿ ಮಾಡುತ್ತಿದ್ದ ಅರ್ಜುನ್ ತೆಂಡುಲ್ಕರ್ ಇದೇ ಮೊದಲ ಬಾರಿಗೆ ಈ ಐಪಿಎಲ್ ನಲ್ಲಿ ಆಡುವ ಅವಕಾಶ ಪಡೆದಿದ್ದರು. ಇದಕ್ಕಿಂತ ಮೊದಲು ಅವರು ಐಪಿಎಲ್ ನಲ್ಲಿ ನಾಲ್ಕು ಪಂದ್ಯಗಳನ್ನಾಡಿ ನಾಲ್ಕು ವಿಕೆಟ್ ಕಬಳಿಸಿದ್ದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಫೇಸ್ ಬುಕ್ ಪೇಜ್ ಫಾಲೋ ಮಾಡಿ: https://www.facebook.com/profile.php?id=61556202767068

ಇತ್ತೀಚಿನ ಸುದ್ದಿ

Exit mobile version