9:13 PM Wednesday 15 - October 2025

ಟಾರ್ಗೆಟ್: ಬಾಲಿವುಡ್ ನಟ ಸಲ್ಮಾನ್ ಖಾನ್ ಹತ್ಯೆಗೆ ನಡೆದಿತ್ತು 25 ಲಕ್ಷ ಒಪ್ಪಂದ!

17/10/2024

ಬಾಲಿವುಡ್ ನಟ ಸಲ್ಮಾನ್ ಖಾನ್ ಹತ್ಯೆಗೆ 25 ಲಕ್ಷ ರೂ. ಮೊತ್ತದ ಒಪ್ಪಂದ ಆಗಿತ್ತು. ಮಹಾರಾಷ್ಟ್ರದ ಪನ್ವೇಲ್‌ನಲ್ಲಿ ಇರುವ ಫಾರ್ಮ್ ಹೌಸ್‌ನಲ್ಲಿ ಸಲ್ಮಾನ್ ಖಾನ್‌ ರನ್ನು ಹತ್ಯೆ ಮಾಡಲು ಸಂಚು ರೂಪಿಸಲಾಗಿತ್ತು ಎಂದು ನವಿ ಮುಂಬೈ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿರುವ ಆರೋಪ ಪಟ್ಟಿಯಲ್ಲಿ ವಿವರಿಸಲಾಗಿದೆ.

ಈ ಪ್ರಕರಣ ಸಂಬಂಧ ಚಾರ್ಜ್ ಶೀಟ್‌ನಲ್ಲಿ ಐವರ ಹೆಸರನ್ನು ಉಲ್ಲೇಖಿಸಲಾಗಿದೆ. ಜೈಲಿನಲ್ಲಿ ಇರುವ ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯಿ ಸಾರಥ್ಯದ ತಂಡದಿಂದ ಈ ಸುಪಾರಿ ಪಡೆಯಲಾಗಿತ್ತು. ಸಲ್ಮಾನ್ ಖಾನ್ ಹತ್ಯೆಗೆ ಸಂಚು ರೂಪಿಸಿದ್ದ ತಂಡ ಇದಕ್ಕಾಗಿ ಪಾಕಿಸ್ತಾನದಿಂದ ಎಕೆ 47, ಎಕೆ 92 ರೈಫಲ್‌ಗಳನ್ನ ತರಿಸಿಕೊಳ್ಳಲು ತೀರ್ಮಾನವಾಗಿತ್ತು. ಅಷ್ಟೇ ಅಲ್ಲ, ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆಗೆ ಬಳಕೆಯಾಗಿದ್ದ ಟರ್ಕಿ ನಿರ್ಮಿತ ಝಿಗಾನಾ ರೈಫಲ್‌ಗಳನ್ನೂ ಬಳಸಿಕೊಳ್ಳಲು ತೀರ್ಮಾನಿಸಿದ್ದರು ಎಂದು ಪೊಲೀಸರು ವಿವರಿಸಿದ್ದಾರೆ.

ಆರೋಪಿಗಳು 18 ವರ್ಷ ಒಳಗಿನ ಬಾಲಕರನ್ನು ಈ ಕೃತ್ಯ ಎಸಗಲು ನಿಯೋಜನೆ ಮಾಡಿಕೊಂಡಿದ್ದರು. ಈ ಆರೋಪಿಗಳು ಮಹಾರಾಷ್ಟ್ರದ ಪುಣೆ, ರಾಯಘಡ, ನವಿ ಮುಂಬೈ, ಥಾಣೆ ಹಾಗೂ ಗುಜರಾತ್ ರಾಜ್ಯಗಳಲ್ಲಿ ಕೆಲ ಕಾಲ ಅಡಗಿದ್ದರು. ಅಲ್ಲಿಯೇ ಸಂಚು ರೂಪಿಸುತ್ತಿದ್ದರು ಎಂದು ಚಾರ್ಜ್ ಶೀಟ್‌ನಲ್ಲಿ ವಿವರಿಸಲಾಗಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version