10:04 PM Wednesday 15 - October 2025

ಸಾಮೂಹಿಕ ಅತ್ಯಾಚಾರದ ಆರೋಪಿಯನ್ನು ಗುಂಡಿಕ್ಕಿ ಹತ್ಯೆ

asam
27/05/2022

ಅಸ್ಸಾಂ: ಸಾಮೂಹಿಕ ಅತ್ಯಾಚಾರ ಆರೋಪಿ ಅಫ್ರುದ್ದೀನ್ ಪೊಲೀಸರ ಗುಂಡಿಗೆ ಬಲಿಯಾಗಿದ್ದಾನೆ.

ಪೋಲಿಸರ ಕೈಯಲ್ಲಿದ್ದ ಪಿಸ್ತೂಲನ್ನು ಕಸಿದು ಪೊಲೀಸರ ಮೇಲೆಯೇ ಗುಂಡು ಹಾರಿಸಿಲು ಯತ್ನಿಸುವಾಗ  ಜೊತೆಗಿದ್ದ ಇನ್ನೊಬ್ಬ  ಪೊಲೀಸ್ ಅಧಿಕಾರಿ ಆರೋಪಿ ಮೇಲೆ ಗುಂಡು ಹಾರಿಸಿದ್ದಾರೆ.ಗುಂಡು ತಗುಲಿದ ಅಫ್ರುದ್ದೀನ್ ಕೊಕ್ರಜಾರ್‌ ನ ಆರ್‌ ಎನ್‌ ಬಿ ಸಿವಿಲ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ

ಅಪ್ರಾಪ್ತ ಬಾಲಕಿಗೆ ಅತ್ಯಾಚಾರ ಮಾಡಿದ ಆರೋಪದ ಮೇಲೆ ನಿನ್ನೆ ಮೂವರು ಆರೋಪಿಗಳನ್ನು ಪೋಲಿಸರು ಬಂಧಿಸಲಾಗಿತ್ತು.ದೃಶ್ಯಗಳನ್ನು ರೆಕಾರ್ಡ್ ಮಾಡಿದ ಮೊಬೈಲ್ ಫೋನ್ ಪತ್ತೆಗಾಗಿ ಅಫ್ರುದ್ದೀನ್ ಅವರನ್ನು ಘಟನಾ ಸ್ಥಳಕ್ಕೆ ಕರೆದೊಯ್ಯಲಾಯಿತು.  ಧೋಲ್ಮಾರಾ ರಾಣಿಪುರ ಟೀ ಎಸ್ಟೇಟ್ ಸಮೀಪಿಸುತ್ತಿದ್ದಂತೆ, ಆರೋಪಿಗಳು ಅಧಿಕಾರಿಯ ಪಿಸ್ತೂಲ್ ಕಸಿದುಕೊಂಡು ಪೊಲೀಸರ ಮೇಲೆ ಗುಂಡು ಹಾರಿಸಲು ಯತ್ನಿಸಿದರು.

ಆಗ ಮತ್ತೊಬ್ಬ ಅಧಿಕಾರಿ ಆರೋಪಿಗಳ ಮೇಲೆ ಗುಂಡು ಹಾರಿಸಿದ್ದು,ಆರೋಪಿಯ ಬಲಗಾಲಿಗೆ ಗುಂಡು ತಾಗಲಾಗಿದೆ ಎಂದು ಎಎಸ್ಪಿ ಪನೇಸರ್ ತಿಳಿಸಿದ್ದಾರೆ.  ಕೊಕ್ರಜಾರ್ ಅವರನ್ನು ಚಿಕಿತ್ಸೆಗಾಗಿ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಆದರೆ ಇಲ್ಲಿ ಅಫ್ರುದ್ದೀನ್ ಸಾವನ್ನಪ್ಪಿದ್ದಾನೆ.

ಸೋಮವಾರ ರಾತ್ರಿ ಕಿರಾಣಿ ಅಂಗಡಿಯಿಂದ ಹಿಂತಿರುಗುತ್ತಿದ್ದ 16 ವರ್ಷದ  ಬಾಲಕಿಯನ್ನು ಮೂವರು ಯುವಕರು ಅಪಹರಿಸಿ ಅತ್ಯಾಚಾರ ಎಸಗಿದ್ದಾರೆ.  ತಂದೆ ನೀಡಿದ ದೂರಿನ ಮೇರೆಗೆ ಕೊಕ್ರಜಾರ್ ಪೊಲೀಸರು ಎಲ್ಲಾ ಆರೋಪಿಗಳನ್ನು ಬಂಧಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ https://chat.whatsapp.com/FZkISFWKknBDvdYkMVFArW

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ರಾಜ್ಯದಲ್ಲಿ ಮತ್ತೊಂದು ಭೀಕರ ಅಪಘಾತ: ಒಂದೇ ಕುಟುಂಬದ ನಾಲ್ವರು ಸಾವು

ಮತ್ತೋರ್ವ ಬಂಗಾಳಿ ನಟಿ ಮೃತದೇಹ ಅಪಾರ್ಟ್‌ಮೆಂಟ್‌ ನಲ್ಲಿ ಪತ್ತೆ

ಟಿಪ್ಪು ಅರಮನೆಯನ್ನು ನಿರ್ಮಿಸಿದ್ದು ದೇವಾಲಯದ ಭೂಮಿಯಲ್ಲಿ: ಹಿಂದೂ ಜನಜಾಗೃತಿ ಸಮಿತಿ

ಹವಾಮಾನ ವೈಪರೀತ್ಯದಿಂದ ಜನರು ನಿದ್ರೆಯನ್ನು ಕಳೆದುಕೊಳ್ಳಲಿದ್ದಾರೆ!

ಒಂದು ವರ್ಷದ ಮಗುವನ್ನು ಚರ್ಚ್ ನಲ್ಲಿ ಮಲಗಿಸಿ ಪರಾರಿಯಾದ ಪೋಷಕರು!

 

ಇತ್ತೀಚಿನ ಸುದ್ದಿ

Exit mobile version