ಎಸ್.ಡಿ.ಪಿ.ಐ. ವತಿಯಿಂದ ಕಾರ್ಯಕರ್ತರ ಸಭೆ, ಇಫ್ತಾರ್ ಕೂಟ

25/03/2025

ಬಂಟ್ವಾಳ:  ಎಸ್.ಡಿ.ಪಿ.ಐ ಪರ್ಲಿಯಾ, ಮದ್ದ, ಕೊಡಂಗೆ, ನಂದರಬೆಟ್ಟು, ಶಾಂತಿಅಂಗಡಿ ಬೂತ್ ಸಮಿತಿ ವತಿಯಿಂದ ಕಾರ್ಯಕರ್ತರ ಸಭೆ ಹಾಗೂ ಇಫ್ತಾರ್ ಕೂಟ ಆಯೋಜಿಸಲಾಗಿತ್ತು.

ಎಸ್.ಡಿ.ಪಿ.ಐ. ಬಂಟ್ವಾಳ ಪುರಸಭಾ ಸಮಿತಿ ಇದರ ವ್ಯಾಪ್ತಿಯಲ್ಲಿ ಬರುವ ಪರ್ಲಿಯಾ, ಮದ್ದ, ಕೊಡಂಗೆ, ನಂದರಬೆಟ್ಟು, ಶಾಂತಿ ಅಂಗಡಿ ಬೂತ್ ಸಮಿತಿಗಳ ವತಿಯಿಂದ ಕಾರ್ಯಕರ್ತರ ಸಭೆ ಹಾಗೂ ಇಫ್ತಾರ್ ಕೂಟ ಕಾರ್ಯಕ್ರಮ ಕ್ಷೇತ್ರ ಸಮಿತಿ ಕಚೇರಿಯಲ್ಲಿ ನಡೆಯಿತು.

ಸಭೆಯಲ್ಲಿ ಮುಖ್ಯ ಅಥಿತಿಗಳಾಗಿ ಪುರಸಭಾ ಸಮಿತಿ ಅಧ್ಯಕ್ಷರಾದ ಶರೀಫ್ ವಲವೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯ ಅಥಿತಿಗಳಾಗಿ ಆಗಮಿಸಿದ ಕ್ಷೇತ್ರ ಸಮಿತಿ ಕಾರ್ಯದರ್ಶಿಗಳಾದ ಕಬೀರ್ ಅಕ್ಕರಂಗಡಿ ರವರು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಖ್ಫ್ ತಿದ್ದುಪಡಿ ಮಸೂದೆಯ ದುಷ್ಪರಿಣಾಮ ಹಾಗೂ ಇದರ ಅಪಾಯದ ಕುರಿತಂತೆ ಸವಿಸ್ತಾರವಾಗಿ ಮಾತನಾಡಿದರು.

ಸಭೆಯ ಕೊನೆಯಲ್ಲಿ ಕ್ಷೇತ್ರ ಸಮಿತಿ ಅಧ್ಯಕ್ಷರಾದ ಸಾಹುಲ್ ಹಮೀದ್ ಎಸ್.ಎಚ್.  ಸಮಾರೂಪ ಭಾಷಣ ನಡೆಸಿದರು.  ಮುಸ್ತಫಾ ಪರ್ಲಿಯಾ ಸ್ವಾಗತಿಸಿ, ಧನ್ಯವಾದಗೈದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/BR3b3qhWZWaCzpD1m6N5uu

ಇತ್ತೀಚಿನ ಸುದ್ದಿ

Exit mobile version