ಕಮ್ಯುನಿಸ್ಟ್ ಚಳುವಳಿಯ ಹಿರಿಯ ನೇತಾರರಾದ ಕಾಮ್ರೇಡ್ ಚಂದು ಭಂಡಾರಿ ನಿಧನ

chandu bandari
29/12/2022

CPIM ಪಕ್ಷದ ಹಿರಿಯ ಸದಸ್ಯರೂ, ಕಮ್ಯುನಿಸ್ಟ್ ಚಳುವಳಿಯ ಹಿರಿಯ ನೇತಾರರಾದ ಕಾಮ್ರೇಡ್ ಚಂದು ಭಂಡಾರಿ(80)ಯವರು ದೀರ್ಘಕಾಲದ ಅನಾರೋಗ್ಯದ ಕಾರಣದಿಂದಾಗಿ ಇಂದು ನಿಧನ ಹೊಂದಿದರು.

ಎಳೆಯ ಪ್ರಾಯದಲ್ಲೇ ಎಡಪಂಥೀಯ ವಿಚಾರಧಾರೆಗೆ ಆಕರ್ಷಿತರಾದ ಚಂದು ಭಂಡಾರಿಯವರು ಆ ಕಾಲದಲ್ಲಿ ನಡೆಯುತಿದ್ದ ರೈತರ ಹೋರಾಟದಲ್ಲಿ ಭಾಗವಹಿಸುವ ಮೂಲಕ ರೈತಾಪಿ ಜನತೆಯ ನಾಯಕರಾಗಿ ಬೆಳೆದರು.ಜೊತೆಗೆ ಹಂಚು ಕಾರ್ಮಿಕರಾಗಿ ದುಡಿಯುವ ಮೂಲಕ ಹಂಚು ಕಾರ್ಮಿಕರ ಸಮರಶೀಲ ಹೋರಾಟಗಳಲ್ಲಿ ಭಾಗವಹಿಸಿ ಕಾರ್ಮಿಕ ನಾಯಕರಾದರು.

ಬಜಾಲ್ ಗ್ರಾಮ ಪಂಚಾಯತ್ ಸದಸ್ಯರಾಗುವ ಮೂಲಕ ಊರಿನ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದರು ಪಕ್ಷದ ಪತ್ರಿಕೆ ಮಾರಾಟ ಮಾಡುವಲ್ಲಿ ಹಾಗೂ ಪಕ್ಷದ ನಿಧಿ ಸಂಗ್ರಹ ಮಾಡುವುದರಲ್ಲಿ ಚಂದು ಭಂಡಾರಿಯವರ ಪಾತ್ರ ಮಹತ್ತರವಾಗಿದೆ.

ತನ್ನ ಜೀವನದುದ್ದಕ್ಕೂ ಕಮ್ಯುನಿಸ್ಟ್ ಚಳುವಳಿಯ ಬೆಳವಣಿಗೆಗೆ ಅಪಾರ ಕೊಡುಗೆ ನೀಡಿದ ಅವರು ಪಕ್ಷದ ಶಿಸ್ತಿನ ಸಿಪಾಯಿ ಆಗಿದ್ದರು.ಇಂತಹ ಸಂಗಾತಿಯ ಅಗಲುವಿಕೆ ಬಜಾಲ್ ಪ್ರದೇಶದ ಎಡಪಂಥೀಯ ಚಳುವಳಿಗೆ ಅಪಾರ ನಷ್ಟವುಂಟಾಗಿದೆ ಎಂದು CPIM ಭಾವಪೂರ್ಣ ಶ್ರದ್ಧಾಂಜಲಿಯನ್ನು ಅರ್ಪಿಸುತ್ತದೆ.
ಚಂದು ಭಂಡಾರಿಯವರು 3 ಹೆಣ್ಣು,3 ಗಂಡು ಮಕ್ಕಳು, ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.ಅವರ ನಿಧನಕ್ಕೆ CPIM,CITU,AIKS, DYFI, SFI,JMS ಮಂಗಳೂರು ನಗರ ಸಮಿತಿಗಳು,ಪಕ್ಕಲಡ್ಕ ಯುವಕ ಮಂಡಲ, ಜನತಾ ವ್ಯಾಯಾಮ ಶಾಲೆ ತೀವ್ರ ಸಂತಾಪ ವ್ಯಕ್ತಡಿಸಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/HeAiP3WAQfT6ajtrJVJ4kP

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

 

ಇತ್ತೀಚಿನ ಸುದ್ದಿ

Exit mobile version