ಸುಹಾಸ್ ಶೆಟ್ಟಿ ಹತ್ಯೆ ಬಳಿಕ ಬೆದರಿಕೆಗಳ ಸರಮಾಲೆ: ಮೂರು ಪ್ರತ್ಯೇಕ ದೂರು ದಾಖಲು

suhas shetty
05/05/2025

ಮಂಗಳೂರು:  ಸುಹಾಸ್ ಶೆಟ್ಟಿ ಹತ್ಯೆಯ ಬಳಿಕ ಕರಾವಳಿಯ ವಿವಿಧ ಸಂಘಟನೆಗಳ ಮುಖಂಡರಿಗೆ ಜೀವ ಬೆದರಿಕೆಯೊಡ್ಡಲಾಗಿದ್ದು, ಈ ಸಂಬಂಧ ಮೂರು ಪ್ರತ್ಯೇಕ ದೂರುಗಳು ದಾಖಲಾಗಿವೆ.

ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್​ ಪಂಪ್ವೆಲ್ ಮಂಗಳೂರಿನ ಕದ್ರಿ ಠಾಣೆಗೆ ಭಾನುವಾರ ದೂರು ನೀಡಿದ್ದು, ತನಗೆ ಜೀವ ಬೆದರಿಕೆ ಇರುವುದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಕದ್ರಿ ಠಾಣೆ ಪೊಲೀಸರು ಇನ್​ಫಾರ್ಮೇಶನ್ ಟೆಕ್ನಾಲಜಿ ಆ್ಯಕ್ಟ್ ಮತ್ತು ಬಿಎನ್​ಎಸ್ ಕಾಯ್ದೆ 351(4) ಸೆಕ್ಷನ್ ಅಡಿ ಪ್ರಕರಣ ದಾಖಲಿಸಿದ್ದಾರೆ.

ಮುಂದಿನ ಟಾರ್ಗೆಟ್ ಶರಣ್ ಪಂಪ್ವೆಲ್. ಶರಣ್ ಹತ್ಯೆಯಾಗಲು ತಯಾರಾಗು ಎಂದು ಶರಣ್ ಪಂಪ್ ವೆಲ್ ಗೆ ಸಾಮಾಜಿಕ ಜಾಲತಾಣಗಳಲ್ಲಿ ಜೀವ ಬೆದರಿಕೆಯೊಡ್ಡಲಾಗಿತ್ತು.

ಭರತ್ ಕುಮ್ಡೇಲ್ ಗೆ ಜೀವ ಬೆದರಿಕೆ:

ಬಜರಂಗದಳ ಮುಖಂಡ ಭರತ್ ಕುಮ್ಡೇಲ್ ಹತ್ಯೆ ಬೆದರಿಕೆ ಸಂದೇಶ ವಿಚಾರವಾಗಿ ಬಂಟ್ವಾಳ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಾಗಿದೆ. ಬಿಎನ್​ಎಸ್ ಕಾಯ್ದೆ 196(1)(C), 353(2) ಸೆಕ್ಷನ್ ಅಡಿ ಪ್ರಕರಣ ದಾಖಲಿಸಲಾಗಿದೆ.

“ಅಶ್ರಫ್ ಕೊಂದ ಭರತ್​ ನನ್ನು ಮರೆತಿಲ್ಲ” ಎಂದು ಸೋಷಿಯಲ್ ಮೀಡಿಯಾದಲ್ಲಿ ತಲ್ವಾರ್ ಫೋಟೋ ಪೋಸ್ಟ್ ಮಾಡಲಾಗಿತ್ತು.

ರಿಯಾಜ್ ಕಡಂಬುಗೆ ಬೆದರಿಕೆ:

ಎಸ್ ​​ಡಿಪಿಐ ಮುಖಂಡ ರಿಯಾಜ್ ಕಡಂಬು ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಕೊಲೆ ಬೆದರಿಕೆ ಹಾಕಿದವರ ಮೇಲೆ ಎಫ್ ​ಐಆರ್​​ ದಾಖಲಿಸಲಾಗಿದೆ. ಸುಹಾಸ್ ಕೊಲೆ ಪ್ರಕರಣ ಯೂಟ್ಯೂಬ್ ನಲ್ಲಿ ಪ್ರಸಾರವಾಗುತ್ತಿದ್ದ ವೇಳೆ  @Krrakesh9456 ಖಾತೆಯಿಂದ “Next is Riyaz Kadanbu hit list” ಎಂದು ಕಾಮೆಂಟ್ ಹಾಕಲಾಗಿತ್ತು. ಈ ಸಂಬಂಧ ರಿಯಾಜ್ ಕಡಂಬು ಪಾಂಡೇಶ್ವರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version