5:17 AM Thursday 15 - January 2026

ಅಂತರ್ ಧರ್ಮೀಯ ಮದುವೆಗೆ ತಡೆ ಹಾಕಲು ನಿರ್ಧರಿಸಿದ ಈ ಸರ್ಕಾರ

03/11/2020

ಮಧ್ಯಪ್ರದೇಶ: ಮಧ್ಯಪ್ರದೇಶವನ್ನು ಯಾವುದೋ ಸರ್ಕಾರ ಆಳುತ್ತಿದ್ದೆಯೋ ಇಲ್ಲ ಸಂಘಟನೆ ಆಳುತ್ತಿದೆಯೋ ಎನ್ನುವ ಪ್ರಶ್ನೆಗಳಿಗೆ ಕಾರಣವಾಗಿದೆ. ನಿನ್ನೆಯಷ್ಟೇ ಮಧ್ಯಪ್ರದೇಶ ಹೈಕೋರ್ಟ್ ನ ನ್ಯಾಯಾಧೀಶರೊಬ್ಬರು, ಅತ್ಯಾಚಾರಿಗೆ ಸಂತ್ರಸ್ತೆಯಿಂದ ರಾಖಿ ಕಟ್ಟಿಸುವ ಶಿಕ್ಷೆ ನೀಡಬೇಕು ಎಂದು ವಿವಾದಾತ್ಮಕ ಆದೇಶ ನೀಡಿದ್ದರು. ಇದರೆ ಬೆನ್ನಲೇ ಇದೀಗ ಮಧ್ಯಪ್ರದೇಶವು ಅಂತರ್ ಧರ್ಮೀಯ ಮದುವೆಯನ್ನು ತಡೆಯಲು ಹೊಸ ಕಾನೂನು ತರುತ್ತದೆ ಎಂದು ಹೇಳಿದೆ.



ಸರ್ಕಾರ ಎಂದರೆ ಜನರ ವೈಯಕ್ತಿಕ ಸ್ವಾತಂತ್ರ್ಯದೊಂದಿಗೆ ಚೆಲ್ಲಾಟವಾಡುವುದು ಎಂದು ಮಧ್ಯಪ್ರದೇಶ ಸರ್ಕಾರ ತಿಳಿದುಕೊಂಡಿದೆಯೋ ತಿಳಿದಿಲ್ಲ. ಆದರೆ, ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಅವರು, ಅಂತರ್ ಧರ್ಮೀಯ ಮದುವೆ ತಡೆಯಲು ಮುಂದಾಗಿದ್ದಾರೆ. ದೇಶದಲ್ಲಿ ಜಾತಿಯ ಹೆಸರಿನಲ್ಲಿ ಜನರ ಅತ್ಯಾಚಾರ, ಕಗ್ಗೊಲೆಯನ್ನು ತಡೆಯಲು ತಾಕತ್ ಇಲ್ಲದ ಸರ್ಕಾರಗಳು ಜನರ ವೈಯಕ್ತಿಕ ಬದುಕಿನ ಹಕ್ಕನ್ನು ಕಸಿದುಕೊಳ್ಳಲು ಮುಂದಾಗಿವೆ.


ಇನ್ನೂ ಕೇಂದ್ರ ಸರ್ಕಾರವು ಲವ್ ಜಿಹಾದ್ ನಡೆದೇ ಇಲ್ಲ ಎಂದು ಲೋಕಸಭೆಯಲ್ಲಿ ಹೇಳಿದೆ. ಆದರೆ, ಮಧ್ಯಪ್ರದೇಶ ಸಿಎಂ, ಲವ್ ಜಿಹಾದ್ ನಡೆಸಿದವರಿಗೆ ತಕ್ಕ ಪಾಠ ಕಲಿಸುತ್ತೇವೆ ಎಂದು ಹೇಳಿದ್ದಾರೆ. ಇದು ಲವ್ ಜಿಹಾದೋ ಇಲ್ಲ, ಮತ ಜಿಹಾದೋ ಎನ್ನುವುದು ತಿಳಿದಿಲ್ಲ ಎಂದು ಜನಾಕ್ರೋಶ ವ್ಯಕ್ತವಾಗಿದೆ.


ಇತ್ತೀಚಿನ ಸುದ್ದಿ

Exit mobile version