3:16 AM Saturday 17 - January 2026

ಶ್ವಾಸನಾಳದಲ್ಲಿ ಜೀರುಂಡೆ ಸಿಲುಕಿ 1 ವರ್ಷದ ಮಗು ದಾರುಣ ಸಾವು

anveed
11/07/2021

ಕಾಸರಗೋಡು: ಶ್ವಾಸನಾಳದಲ್ಲಿ ಜೀರುಂಡೆ ಸಿಲುಕಿಕೊಂಡು 1 ವರ್ಷ ವಯಸ್ಸಿನ  ಮಗು ಮೃತಪಟ್ಟ ಘಟನೆ ಕಾಸರಗೋಡಿನಲ್ಲಿ ನಡೆದಿದ್ದು, ನಗರದ ಹೊರವಲಯದ ನುಳ್ಳಿಪ್ಪಾಡಿ ಚೆನ್ನಿಕರೆಯ ಸತ್ಯೇಂದ್ರ-ರಂಜಿನಿ ದಂಪತಿಯ ಪುತ್ರ ಅನ್ವೇದ್ ಮೃತಪಟ್ಟ ಮಗುವಾಗಿದೆ.

ಶನಿವಾರ ರಾತ್ರಿ ಮಗು ಮನೆಯಲ್ಲಿ ಆಟವಾಡುತ್ತಿದ್ದ ವೇಳೆ ಏಕಾಏಕಿ ಪ್ರಜ್ಞೆ ತಪ್ಪಿ ಬಿದ್ದಿದ್ದು,  ಮಗುವಿಗೆ ಏನಾಗಿದೆ ಎನ್ನುವುದು ಕೂಡ ಪೋಷಕರಿಗೆ ತಿಳಿದಿರಲಿಲ್ಲ. ತಕ್ಷಣವೇ ಮಗುವನ್ನು ಆಸ್ಪತ್ರೆಗೆ ದಾಖಲಿಸಿದರೂ ಮಗು ಮೃತಪಟ್ಟಿದೆ.

ಮಗು ಏಕಾಏಕಿ ಉಸಿರುಗಟ್ಟಿ ಸಾವನ್ನಪ್ಪಿದೆ. ಆದರೆ ಮಗುವಿನ ಸಾವಿಗೆ ಕಾರಣ ಏನು ಎನ್ನುವುದು ತಿಳಿದು ಬಂದಿರಲಿಲ್ಲ. ಮರಣೋತ್ತರ ಪರೀಕ್ಷೆ ನಡೆಸಿದಾಗ ಮಗುವಿನ ಶ್ವಾಸನಾಳದಲ್ಲಿ ಜೀರುಂಡೆ ಸಿಲುಕಿಕೊಂಡಿರುವುದು ಪತ್ತೆಯಾಗಿದೆ ಎಂದು ವರದಿಯಾಗಿದೆ.

ಇನ್ನಷ್ಟು ಸುದ್ದಿಗಳು…

ಪತ್ನಿ ಬಿಟ್ಟು ಹೋಗಿದಕ್ಕೆ ನೊಂದು ದೇವಸ್ಥಾನದಲ್ಲೇ ನೇಣಿಗೆ ಶರಣಾದ ಅರ್ಚಕ!

ಡಿ.ಕೆ.ಶಿವಕುಮಾರ್  ಕೈಯಿಂದ ಪೆಟ್ಟು ತಿಂದ ವ್ಯಕ್ತಿ ಹೇಳಿದ್ದೇನು ಗೊತ್ತಾ?

ಮಿಸ್ಡ್ ಕಾಲ್ ನಿಂದ ಆರಂಭವಾದ ಪ್ರೀತಿ, ಅತ್ಯಾಚಾರದಲ್ಲಿ ಕೊನೆಯಾಯ್ತು!

ಜಾತಿ ಭಯೋತ್ಪಾದಕರ ಅಟ್ಟಹಾಸ: ದಲಿತ ಯುವಕನ ಗುದದ್ವಾರಕ್ಕೆ ಕೋಲು ತುರುಕಿ ಅಮಾನವೀಯ ಹಲ್ಲೆ

 

ಇತ್ತೀಚಿನ ಸುದ್ದಿ

Exit mobile version