ಶಸ್ತ್ರಾಸ್ತ್ರಗಳನ್ನು ಹೊತ್ತ ಹಡಗಿಗೆ ಪ್ರವೇಶ ನಿರಾಕರಿಸಿದ ಸ್ಪೇನ್

17/05/2024

ಶಸ್ತ್ರಾಸ್ತ್ರಗಳನ್ನು ಹೊತ್ತು ಚೆನ್ನೈನಿಂದ ಇಸ್ರೇಲ್‌ಗೆ ಸಾಗುತ್ತಿರುವ ಹಡಗಿಗೆ ಸ್ಪೇನ್‌ ದೇಶ ಬಂದರಿನಲ್ಲಿ ನಿಲುಗಡೆಗೆ ಅವಕಾಶ ನಿರಾಕರಿಸಿದೆ. ಡೆನ್ಮಾರ್ಕ್‌ ಧ್ವಜವಿರುವ ಹಡಗಿನಲ್ಲಿ 27 ಟನ್‌ ತೂಕದ ಶಸ್ತ್ರಾಸ್ತ್ರಗಳನ್ನು ಇಸ್ರೇಲ್‌ನ ಹೈಫಾ ಬಂದರಿಗೆ ಸಾಗಿಸಲಾಗುತ್ತಿದೆ.

ʼಮರಿಯನ್ನೆ ಡೇನಿಕಾʼ ಹೆಸರಿನ ಹಡಗು ಸ್ಪೇನ್‌ ಬಂದರಿನಲ್ಲಿ ಮೇ 21ರಂದು ನಿಲುಗಡೆಗೆ ಅವಕಾಶ ಕೋರಿತ್ತು. ಗಾಝಾ ಯುದ್ಧ ಆರಂಭಗೊಂಡಂದಿನಿಂದ ಇಸ್ರೇಲ್‌ಗೆ ಎಲ್ಲಾ ಶಸ್ತ್ರಾಸ್ತ್ರ ರಫ್ತು ನಿಷೇಧಿಸುವ ಸ್ಪೇನ್‌ ನೀತಿಯ ಅನುಸಾರ ಅನುಮತಿ ನಿರಾಕರಿಸಲಾಗಿದೆ ಎಂದು ಎಂದು ಸ್ಪೇನ್‌ನ ವಿದೇಶ ಸಚಿವ ಜೋಸ್‌ ಮ್ಯಾನುವೆಲ್‌ ಅಲ್ಬಾರೆಸ್‌ ಹೇಳಿದ್ದಾರೆ.

ಶುಕ್ರವಾರ ಅದೇ ಬಂದರಿನಲ್ಲಿ ಮಿಲಿಟರಿ ಉಪಕರಣಗಳನ್ನು ಹೊತ್ತ ಇನ್ನೊಂದು ಹಡಗಿಗೆ ಅನುಮತಿ ನಿರಾಕರಿಸಬೇಕೆಂದು ಸ್ಪೇನ್‌ನ ಎಡ ಪಂಥೀಯ ಮೈತ್ರಿ ಆಗ್ರಹಿಸಿತ್ತು. ಆದರೆ ಈ ಹಡಗು ಝೆಕ್‌ ಗಣರಾಜ್ಯಕ್ಕೆ ಹೋಗುವ ಹಡಗಾಗಿರುವುದರಿಂದ ಅದಕ್ಕೆ ಅನುಮತಿಯನ್ನು ನಿರಾಕರಿಸಲಾಗಿಲ್ಲ ಎಂದು ಸಾರಿಗೆ ಸಚಿವ ಆಸ್ಕರ್‌ ಪುಯೆಂಟೆ ಹೇಳಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version